ISRO 
ನ್ಯೂಸ್

ಡಿ.24 ರಂದು LVM3 ರಾಕೆಟ್ ಮೂಲಕ ಸ್ಪೇಸ್‌ಮೊಬೈಲ್ ಉಪಗ್ರಹವನ್ನು ಉಡಾವಣೆ ಮಾಡಲಿರುವ ಇಸ್ರೋ | ISRO

ಪ್ರಮುಖ ಮುಖ್ಯಾಂಶಗಳು

  • ಅಮೆರಿಕದ AST ಉಪಗ್ರಹವನ್ನು ಉಡಾಯಿಸಲಿರುವ ಇಸ್ರೋ
  • ಡಿ. 24 ರಂದು ಶ್ರೀಹರಿಕೋಟದಿಂದ ನಡೆಉಲಿರುವ ಉಡಾವಣೆ
  • ಈ ವರ್ಷ ಸುಮಾರು 150 ಮಿಲಿಯನ್ ಡಾಲರ್ ಹೂಡಿಕೆಯಾಗಿದೆ ಎಂದ IN-SPACe ಅಧ್ಯಕ್ಷ
ನವದೆಹಲಿ : ಡಿ. 24 ರಂದು ಇಸ್ರೋ (ISRO) ದ LVM3-M6 ರಾಕೆಟ್ ಅಮೆರಿಕ ಮೂಲದ ಸಂಸ್ಥೆ AST ಸ್ಪೇಸ್‌ಮೊಬೈಲ್‌ಗಾಗಿ ಸಂವಹನ ಉಪಗ್ರಹವನ್ನು ಉಡಾವಣೆ ಮಾಡಲಿದ್ದು, ಇದೊಂದು ಮಹತ್ವದ ವಾಣಿಜ್ಯ ಮೈಲಿಗಲ್ಲಾಗಿದೆ ಎಂದು ಹೇಳಲಾಗುತ್ತಿದೆ. LVM3-M6 ಉಡಾವಣೆಯನ್ನು ಡಿ. 24, 2025 ರಂದು 08:54 ಗಂಟೆಗೆ IST ಕ್ಕೆ ಶ್ರೀಹರಿಕೋಟಾದ SDSC SHAR ನಲ್ಲಿರುವ ಎರಡನೇ ಉಡಾವಣಾ ಪ್ಯಾಡ್‌ನಿಂದ ನಿಗದಿಪಡಿಸಲಾಗಿದೆ ಎಂದು ಇಸ್ರೋ ಘೋಷಿಸಿದೆ. ಈ ಮಿಷನ್ ಬ್ಲೂಬರ್ಡ್ ಬ್ಲಾಕ್-2 ಒಂದು ವಾಣಿಜ್ಯ ಉಡಾವಣೆಯಾಗಿದ್ದು, ಇದನ್ನು AST ಸ್ಪೇಸ್‌ಮೊಬೈಲ್ ಇಂಕ್ ಮತ್ತು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ನಡುವಿನ ಒಪ್ಪಂದದ ಭಾಗವಾಗಿದೆ. AST ಸ್ಪೇಸ್‌ಮೊಬೈಲ್ ಪ್ರಕಾರ, ಈ ಮುಂದಿನ ಪೀಳಿಗೆಯ ಉಪಗ್ರಹಗಳನ್ನು ವಿಶ್ವಾದ್ಯಂತ ಪ್ರಮಾಣಿತ ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ 24/7 ಹೈ-ಸ್ಪೀಡ್ ಸೆಲ್ಯುಲಾರ್ ಬ್ರಾಡ್‌ಬ್ಯಾಂಡ್ ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಅಂದಾಜು 200 ಮಿಲಿಯನ್ ಡಾಲರ್​ಸಂಗ್ರಹಿಸಲಾಗಿತ್ತು. ಈ ಭಾರಿ ಕಳೆದ ವರ್ಷ ಸಂಗ್ರಹಿಸಿದ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚಾಗಲಿದೆ ಎಂದು IN-SPACe ನ ಅಧ್ಯಕ್ಷ ಪವನ್ ಗೋಯೆಂಕಾ ನವದೆಹಲಿಯಲ್ಲಿ ನಡೆದ ಭಾರತ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದರು.

ದಾಖಲೆಯ ಹೂಡಿಕೆ

ಭಾರತದ ಬಾಹ್ಯಾಕಾಶ ಉದ್ಯಮವು ಅಭೂತಪೂರ್ವ ಆರ್ಥಿಕ ಉತ್ಕರ್ಷವನ್ನು ಅನುಭವಿಸುತ್ತಿದೆ. ಖಾಸಗಿ ವಲಯದವರಿಗೆ ಅವಕಾಶ ನೀಡಿದ ತರುವಾಯ ಉದ್ಯಮವು ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ ಸುಮಾರು 150 ಮಿಲಿಯನ್ ಡಾಲರ್​ ಹಣವನ್ನು ಸಂಗ್ರಹಿಸಿದೆ.

ಬದಲಾಗುತ್ತಿರುವ ಮಾರುಕಟ್ಟೆ ಚಲನಶೀಲತೆ

ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳ ಬೇಡಿಕೆಯು ಈ ಹಿಂದೆ ಇಸ್ರೋವನ್ನು ಮಾತ್ರ ಅವಲಂಬಿಸಿದ್ದ ವಿವಿಧ ಸರ್ಕಾರಿ ಇಲಾಖೆಗಳಿಂದ ಹೆಚ್ಚಾಗಿ ನಡೆಸಲ್ಪಡುತ್ತಿದೆ ಎಂದು ಗೋಯೆಂಕಾ ಹೈಲೈಟ್ ಮಾಡಿದರು. ಖಾಸಗಿ ಕಂಪನಿಗಳು ತಮ್ಮ ಮಾರುಕಟ್ಟೆ ಪಾಲನ್ನು ಹೆಚ್ಚಿಸಲು, ಅವರು ಸರ್ಕಾರಿ ಮತ್ತು ವಾಣಿಜ್ಯ ವ್ಯವಹಾರ ಅಗತ್ಯಗಳಿಗೆ ಅನುಗುಣವಾಗಿ ವಿಶೇಷ ಬಾಹ್ಯಾಕಾಶ ತಂತ್ರಜ್ಞಾನ ಪರಿಹಾರಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಅವರು ಒತ್ತಿ ಹೇಳಿದರು.(ಏಜನ್ಸೀಸ್).