ನ್ಯೂಸ್

ಖಮೇನಿಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತೇವೆ ಎಂದ ಇಸ್ರೇಲ್​ ರಕ್ಷಣಾ ಸಚಿವ!Katz

Katz: ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು "ವೈಯಕ್ತಿಕವಾಗಿ" ಗುರಿಯಾಗಿಸಿಕೊಂಡು ದಾಳಿ ಮಾಡುತ್ತೇವೆ ಎಂದು ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಎಂದು ಹೇಳಿದ್ದಾರೆ.

ಇಸ್ರೇಲಿ ವಾಯುಪಡೆಯ ರಾಮನ್ ವಾಯುನೆಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಕಾಟ್ಜ್ , ನಾನು ಇರಾನ್​ಗೆ ನೇರವಾಗಿ ಹೇಳುತ್ತಿದ್ದೇನೆ. ನೀವು ಇಸ್ರೇಲ್​ಗೆ ಬೆದರಿಕೆ ಹಾಕುವುದನ್ನು ಮುಂದುವರೆಸಿದರೆ, ನಮ್ಮ ಉದ್ದನೆಯ ಕೈ ಟೆಹ್ರಾನ್​ ಆನ್ನು ತಲುಪುತ್ತದೆ. ನಾವು ಇನ್ನೂ ಹೆಚ್ಚಿನ ಬಲದೊಂದಿಗೆ ಈ ಬಾರಿ ಖಮೇನಿಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ, ಪ್ರಧಾನಿ ನೆತನ್ಯಾಹು ಸಮ್ಮುಖದಲ್ಲಿ ಜೆಟ್ ಫೈಟರ್ ಸಿಬ್ಬಂದಿಗಳನ್ನು ಶ್ಲಾಘಿಸಿದ ಕ್ಯಾಟ್ಜ್, ಆಪರೇಷನ್ ರೈಸಿಂಗ್ ಲಯನ್ ಸಮಯದಲ್ಲಿ ನೀವು "ಅದ್ಭುತ ಕೆಲಸ" ನಿರ್ವಹಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ನೀವು ಇರಾನಿನ ಆಕ್ಟೋಪಸ್‌ ತಲೆಗೆ ಪದೇ ಪದೇ ಹೊಡೆದಿದ್ದೀರಿ ಮತ್ತು ವಿನಾಶದ ಬೆದರಿಕೆಗಳನ್ನು ತೆಗೆದುಹಾಕಿದ್ದೀರಿ" ಎಂದು ಸಿಬ್ಬಂದಿಗಳನ್ನು ಹೊಗಳಿದ್ದಾರೆ.

ಇತ್ತೀಚೆಗೆ ಖಮೇನಿಯೂ ಇಸ್ರೇಲ್ ಅನ್ನು ಅಮೆರಿಕದ "ಬಾರ್ ಹಿಡಿದ ನಾಯಿ" ಎಂದು ಕರೆದಿದ್ದರು. ಯಾವುದೇ ದಾಳಿಗೆ ಪ್ರತಿಕ್ರಿಯಿಸಲು ಇರಾನ್ ಸಿದ್ಧವಾಗಿದೆ ಎಂದು ಇಸ್ರೇಲ್​ಗೆ ಎಚ್ಚರಿಕೆ ನೀಡಿದ್ದರು.

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧವು ಕಳೆದ ತಿಂಗಳು ಕದನ ವಿರಾಮ ಒಪ್ಪಂದದೊಂದಿಗೆ ಕೊನೆಗೊಂಡಿತ್ತು. ಇರಾನಿನ ಪರಮಾಣು ಕಾರ್ಯಕ್ರಮವನ್ನು ಮುಂದುವರಿಸುವುದನ್ನು ತಡೆಯಲು ಜೂನ್ 13 ರಂದು ಇಸ್ರೇಲ್ ನಡೆಸಿದ ದಾಳಿಯೊಂದಿಗೆ ಸಂಘರ್ಷ ಪ್ರಾರಂಭವಾಗಿತ್ತು. (ಏಜೆನ್ಸೀಸ್​)