ನ್ಯೂಸ್

ಗಾಜಾ ಮೇಲೆ ಇಸ್ರೇಲ್​ ದಾಳಿ: ಹಮಾಸ್ ಸಶಸ್ತ್ರ ವಿಭಾಗದ ವಕ್ತಾರ ಅಬು ಉಬೈದಾ ಹತ್ಯೆ ಮಾಡಿದ್ದೇವೆ ಎಂದ ಇಸ್ರೇಲ್ ರಕ್ಷಣಾ ಸಚಿವ| Gaza

Gaza: ಹಮಾಸ್‌ನ ಸಶಸ್ತ್ರ ವಿಭಾಗದ ವಕ್ತಾರ ಅಬು ಉಬೈದಾನನ್ನು ಇಸ್ರೇಲ್ ಸೇನೆಯು ಗಾಜಾದಲ್ಲಿ ಹತ್ಯೆ ಮಾಡಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಭಾನುವಾರ (ಆಗಸ್ಟ್​,31) ತಿಳಿಸಿದ್ದಾರೆ.

ಇಸ್ರೇಲ್​ ಸೇನೆ ಮತ್ತು ಶಿನ್ ಬೆಟ್ಗುಪ್ತಚರ ಇಲಾಖೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಉಬೈದಾ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇಸ್ರೇಲಿ ಮಿಲಿಟರಿ ಉಬೈದಾನನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ನೆತನ್ಯಾಹು ಹೇಳಿದ ನಂತರ ಈ ಘಟನೆ ಸಂಭವಿಸಿದೆ. ಅಲ್ಲದೆ, ಸರ್ಕಾರಿ ಸಭೆಯ ಆರಂಭದಲ್ಲಿ ಇಸ್ರೇಲ್ ಪ್ರಧಾನಿ, ದಾಳಿಯ ಫಲಿತಾಂಶ ಇನ್ನೂ ತಿಳಿದಿಲ್ಲ ಬಂದಿಲ್ಲ ಎಂದು ಹೇಳಿದರು.

ಹಮಾಸ್​ ಉಗ್ರ ಉಬೈದಾ ಪ್ಯಾಲೆಸ್ಟೀನಿಯನ್ನರು ಮತ್ತು ಇಸ್ರೇಲಿಗಳಿಗೆ ಚಿರಪರಿಚಿತ ವ್ಯಕ್ತಿಯಾಗಿದ್ದು, ಹಮಾಸ್‌ನ ಉನ್ನತ ಮಿಲಿಟರಿ ನಾಯಕರಿಗೆ ಹತ್ತಿರವಾಗಿದ್ದ. ಸುಮಾರು ಎರಡು ದಶಕಗಳಿಂದ ಹಮಾಸ್​ ಗುಂಪಿನ ಸಂದೇಶಗಳನ್ನು, ಆಗಾಗ್ಗೆ ವೀಡಿಯೊ ಮೂಲಕ ತಲುಪಿಸಲು ಯೋಜನೆ ಮಾಡುತ್ತಿದ್ದ ಎಂದು ವರದಿಯಾಗಿವೆ.

ಇದಲ್ಲದೇ, ಇಸ್ರೇಲಿ ಸೇನೆಯು ಗಾಜಾದ ಮೇಲೆ ದಾಳಿ ಮಾಡಿತು. ಈ ದಾಳಿಗಳಲ್ಲಿ ಮನೆಗಳು ನಾಶವಾದವು ಮತ್ತು ಹೆಚ್ಚಿನ ಕುಟುಂಬಗಳು ಆ ಪ್ರದೇಶವನ್ನು ಖಾಲಿ ಮಾಡಬೇಕಾಯಿತು ಪರಿಸ್ಥಿತಿ ನಿರ್ಮಾಣವಾಯಿತು. ಭಾನುವಾರ ನೆತನ್ಯಾಹು ಭದ್ರತಾ ಸಚಿವ ಸಂಪುಟವು ಗಾಜಾ ನಗರವನ್ನು ವಶಪಡಿಸಿಕೊಳ್ಳುವ ಯೋಜನೆಯ ಕುರಿತು ಚರ್ಚಿಸುತ್ತಿದ್ದಾಗಲೇ ಈ ದಾಳಿಗಳು ನಡೆದವು.

ಭಾನುವಾರ ಇಸ್ರೇಲಿ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇದರಲ್ಲಿ ಮಧ್ಯ ಗಾಜಾ ಪಟ್ಟಿಯಲ್ಲಿರುವ ನೆರವು ಕೇಂದ್ರದಿಂದ ಆಹಾರವನ್ನು ಪಡೆಯಲು ಪ್ರಯತ್ನಿಸುತ್ತಿದ್ದ 13 ಜನರು ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಶುಕ್ರವಾರ ಇಸ್ರೇಲಿ ಸೇನೆಯು ಈ ಪ್ರದೇಶದಲ್ಲಿ ತಾತ್ಕಾಲಿಕ ವಿರಾಮಗಳನ್ನು ಕೊನೆಗೊಳಿಸಿತು. ಆದರೆ ನೆರವು ವಿತರಣೆಗೆ ಅವಕಾಶ ನೀಡಲಾಗಿತ್ತು, ಆದರೆ ಗಾಜಾವನ್ನು ಇಸ್ರೇಲ್​ ಅಪಾಯಕಾರಿ ಯುದ್ಧ ವಲಯ ಎಂದು ಗೊತ್ತುಪಡಿಸಿದೆ. ಕಳೆದ ಮೂರು ವಾರಗಳಿಂದ ಇಸ್ರೇಲ್ ಗಾಜಾ ನಗರದ ಸುತ್ತಲೂ ತನ್ನ ಆಕ್ರಮಣವನ್ನು ಹೆಚ್ಚಿಸುತ್ತಿದೆ. (ಏಜೆನ್ಸೀಸ್​)