Israeli Army: ದಕ್ಷಿಣ ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ಉಗ್ರ ನೆಲೆಸಿರುವ ಸ್ಥಳದ ಮೇಲೆ ಇಸ್ರೇಲಿ ಸೇನೆ ದಾಳಿ ನಡೆಸಿರುವುದಾಗಿ ಭಾನುವಾರ (ಆಗಸ್ಟ್,31) ತಿಳಿಸಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಐಡಿಎಫ್, ದಕ್ಷಿಣ ಲೆಬನಾನ್‌ನ ಬ್ಯೂಫೋರ್ಟ್ ರಿಡ್ಜ್ ಪ್ರದೇಶದಲ್ಲಿ ಮಿಲಿಟರಿ ಚಟುವಟಿಕೆಯನ್ನು ಗುರುತಿಸಿದ್ದು, ಹೆಜ್ಬೊಲ್ಲಾ ಉಗ್ರರು ನಲೆಸಿರುವ ಸ್ಥಳದಲ್ಲಿ ಭೂಗತ ಮೂಲಸೌಕರ್ಯ ಸೇರಿದಂತೆ ಮಿಲಿಟರಿ ಮೂಲಸೌಕರ್ಯವನ್ನು ಹೊಡೆದುರುಳಿಸಿತು ಎಂದು ಇಸ್ರೇಲ್ ಸೇನೆ ಹೇಳಿದೆ.
ದಾಳಿಗೊಳಾಗದ ಸ್ಥಳದ ಅಸ್ತಿತ್ವ ಮತ್ತು ಅದರೊಳಗಿನ ಚಟುವಟಿಕೆಯು ಇಸ್ರೇಲ್ ಮತ್ತು ಲೆಬನಾನ್ ನಡುವಿನ ಒಪ್ಪಂದ ಉಲ್ಲಂಘನೆಯಾಗಿದೆ ಎಂದು ಇಸ್ರೇಲ್ ತಿಳಿಸಿದೆ.
ಯುದ್ಧ ವಿರಾಮದ ಹೊರತಾಗಿಯೂ ಇಸ್ರೇಲ್ ಲೆಬನಾನ್‌ನಲ್ಲಿರುವ ಹಿಜ್ಬೊಲ್ಲಾ ನೆಲೆಗಳ ಮೇಲೆ ತನ್ನ ದಾಳಿಗಳನ್ನು ಮುಂದುವರೆಸಿದೆ. ಉಗ್ರಗಾಮಿ ಗುಂಪನ್ನು ನಿಶ್ಯಸ್ತ್ರಗೊಳಿಸುವವರೆಗೂ ಅವುಗಳನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದೆ.
ಇದನ್ನೂ ಓದಿ: ರಷ್ಯಾ, ಯುಕ್ರೇನ್ ಯುದ್ದ: ಪುಟಿನ್ ಟ್ರಂಪ್ರನ್ನು ಆಟವಾಡಿಸುತ್ತಿದ್ದಾರೆ ಎಂದ ಫ್ರೆಂಚ್ ಅಧ್ಯಕ್ಷ| Emmanuel Macron
ಗಾಜಾದಲ್ಲಿ ಯುದ್ಧ ಪ್ರಾರಂಭವಾದ, ಇರಾನ್ ಬೆಂಬಲಿತ ಹಿಜ್ಬೊಲ್ಲಾ ಮತ್ತು ಇಸ್ರೇಲ್ ಒಂದು ವರ್ಷಕ್ಕೂ ಹೆಚ್ಚು ಕಾಲ ಯುದ್ದದಲ್ಲಿ ತೊಡಗಿದವು.
ಹಿಂಸಾಚಾರವನ್ನು ಕೊನೆಗೊಳಿಸಲು ಕಳೆದ ನವೆಂಬರ್‌ನಲ್ಲಿ ನಡೆದ ಕದನ ವಿರಾಮದ ಒಪ್ಪಂದದಲ್ಲಿ, ಲೆಬನಾನ್ ಸೈನ್ಯವು ದಕ್ಷಿಣದಲ್ಲಿ ನಿಯೋಜಿಸುತ್ತಿದೆ. ಅಲ್ಲದೆ, ವಿಶ್ವಸಂಸ್ಥೆಯ ಶಾಂತಿಪಾಲಕರ ಬೆಂಬಲದೊಂದಿಗೆ ಹೆಜ್ಬೊಲ್ಲಾದ ಮೂಲಸೌಕರ್ಯವನ್ನು ಕೆಡವುತ್ತಿದೆ.
ಅಮೆರಿಕದ ಒತ್ತಡದ ಮೇರೆಗೆ, ವರ್ಷದ ಅಂತ್ಯದ ವೇಳೆಗೆ ಹೆಜ್ಬೊಲ್ಲಾ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಹೋಗುವ ಯೋಜನೆಯನ್ನು ರೂಪಿಸುವಂತೆ ಬೈರುತ್ ಲೆಬನಾನಿನ ಸೈನ್ಯಕ್ಕೆ ಆದೇಶಿಸಿದೆ. ಆದರೆ ಈ ಪ್ರಯತ್ನವನ್ನು ವಿರೋಧಿಸುವುದಾಗಿ ಹೆಜ್ಬೊಲ್ಲಾ ಪ್ರತಿಜ್ಞೆ ಮಾಡಿದೆ. (ಏಜೆನ್ಸೀಸ್)