Hamas terrorists: ಇಸ್ರೇಲ್ ಅಂತರಿಕ ಭದ್ರತಾ ಸಂಸ್ಥೆಯಾದ ಶೇನ್ ಬೇಟ್(IDF) ಹಾಗೂ ಇಸ್ರೇಲ್ ಭದ್ರತಾ ಪಡೆಗಳು(Israeli security forces) ಗಾಜಾದಲ್ಲಿ ನಡೆಸಿದ ಏರ್ಸ್ಟ್ರೇಕ್ನಲ್ಲಿ ಹಮಾಸ್ನ 7 ಉಗ್ರರನ್ನು ಹೊಡೆದು ಹಾಕಿದ್ದೇವೆ ಎಂದು ಮಂಗಳವಾರ(ಜು.15) ತಿಳಿಸಿವೆ.
ಇದನ್ನೂ ಓದಿ:ಪತಿಯನ್ನು ಕೊಂದು ಮನೆಯ ಆವರಣದಲ್ಲಿ ಹೂತಿಟ್ಟ ಪತ್ನಿ: ವಿಚಾರಣೆಯ ವೇಳೆ ಆಕೆ ಹೇಳಿದ್ದೇನು ಗೊತ್ತಾ? | Assam
ಇಸ್ರೇಲ್ ನಡೆಸಿದ ಅಪರೇಷನ್ನಲ್ಲಿ ಹಮಾಸ್ ಹಿರಿಯ ಭಯೋತ್ಪಾದರನ್ನು ಹತ್ಯೆ ಮಾಡಿವೆ. ಹಮಾಸ್ನ ಪ್ರಮುಖ ಕಚೇರಿಗಳಾದ ಜೂಡಿಯಾ ಮತ್ತು ಸಮಾರಿಯಾಗಳ ಮೇಲೆ IDF ದಾಳಿ ಮಾಡಿದೆ. ಹತ್ಯೆಗೀಡಾದ ಉಗ್ರರಲ್ಲಿ 1998ರ ಜೆರುಸಲೇಮ್ ದಾಳಿಯ ಪ್ರಮುಖ ಉಗ್ರರಾದ ರಿಯಾದ್ ಅಸಿಲ್ಲಾ(Riyadh Asilla) ಮತ್ತು ಬಸ್ಸೆಮ್ ಅಬು ಸನಿನಾ(Bassem Abu Sanina) ಸೇರಿದ್ದಾರೆ ಎಂದು ವರದಿಯಾಗಿದೆ.
IDF ಪ್ರಕಾರ ಜೈಲಿನಿಂದ ಹೊರಬಂದ ನಂತರ ಹಮಾಸ್ನ ಅಸಿಲ್ಲಾ ಜೆರುಸಲೆಮ್ ತಂಡದಲ್ಲಿ ಕೆಲಸ ಮಾಡಲು ಶುರು ಮಾಡಿದ ಹಾಗೂ ಭಯೋತ್ಪಾದರನ್ನು ಇಸ್ರೇಲ್ ಮೇಲೆ ದಾಳಿ ನಡೆಸಲು ಪ್ರಚೋದನೆ ನೀಡುತ್ತಿದ್ದ ಎಂದು ಹೇಳಿದೆ. ಮತ್ತೋಬ್ಬ ಉಗ್ರ ಸನಿನಾ ಕೂಡ IDFನ ಸೈನಿಕನ ಕೊಲೆಯಲ್ಲಿ ಪ್ರಮುಖ ಆರೋಪಿಯಾಗಿದ್ದ, ಸನಿಯಾ ಗಾಜಾದಲ್ಲಿ ಅಗುತ್ತಿದ್ದ ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು IDF ತಿಳಿಸಿದೆ.
ಇದನ್ನೂ ಓದಿ:ಬಿ.ಸರೋಜಾದೇವಿ ಒಬ್ಬ ಮೇರು ನಟಿ: ರಸ್ತೆಗೆ ಸರೋಜಾದೇವಿ ಹೆಸರು, ಬಿಬಿಎಂಪಿ ಯೊಂದಿಗೆ ಚರ್ಚೆ : CM ಸಿದ್ದರಾಮಯ್ಯ
ಈ ಇಬ್ಬರು ಪ್ರಮುಖ ಉಗ್ರರು ಇಸ್ರೇಲ್ ಮೇಲೆ ನಡೆಸಿದ ಹಲವಾರು ದಾಳಿಗಳ ಮಾಸ್ಟರ್ ಮೈಂಡ್ಗಳು ಎಂದು ಹೇಳಲಾಗಿದೆ.(ಏಜೆನ್ಸೀಸ್)