Iran VS Israel: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಪ್ರಸ್ತಾಪಿಸಿದ ಕದನ ವಿರಾಮವನ್ನು ಇಸ್ರೇಲ್ ಮತ್ತು ಇರಾನ್ ಒಪ್ಪಿಕೊಂಡಿದೆ.
ಇದರಿಂದಾಗಿ 12 ದಿನಗಳಿಂದ ನಡೆಯುತ್ತಿದ್ದ ಮಧ್ಯಪ್ರಾಚ್ಯ ದೇಶಗಳ ಯುದ್ಧ ತಾಂತ್ರಿಕವಾಗಿ ಅಂತ್ಯಕಂಡಿದೆ.
ಇರಾನ್ ಪರಮಾಣು ಕೇಂದ್ರಗಳ ಮೇಲೆ ದಾಳಿಗೆ ಪ್ರತ್ಯತ್ತರವಾಗಿ, ಕತಾರ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಸೋಮವಾರ ಕ್ಷಿಪಣಿ ದಾಳಿ ನಡೆಸಿತ್ತು. ಇದಾದನಂತರ ಟ್ರಂಪ್ ಈ ಎರಡೂ ದೇಶಗಳ ನಡುವೆ ಏರ್ಪಟ್ಟಿದೆ ಎಂದು ಘೋಷಿಸಿದ್ದರು.
ಇದನ್ನೂ ಓದಿ: ಗಂಡನನ್ನು ಕೊಂದು 9 ಮಕ್ಕಳನ್ನು ಬಿಟ್ಟು ಗೆಳೆಯನೊಂದಿಗೆ ಓಡಿಹೋದ ಮಹಿಳೆ! ತಾಯಿ- ತಂದೆ ಇಲ್ಲದೆ ಮಕ್ಕಳು ಅನಾಥ.. family
ಆದರೆ ಇರಾನ್ ಇದರ ನಂತರ ಇಸ್ರೇಲ್ನ ಬೀರ್‌ಶೆಬಾದ ವಸತಿ ಕಟ್ಟಡದ ಮೇಲೆ ದಾಳಿ ನಡೆಸಿದೆ. ಈ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದರು.
ಈ ಬಳಿಕ ಇರಾನ್ ಮತ್ತು ಇಸ್ರೇಲ್ ಎರಡೂ ದೇಶಗಳು ಕನದ ವಿರಾಮವನ್ನು ಒಪ್ಪಿಕೊಂಡಿದ್ದಾರೆ.
ಟ್ರಂಪ್ ಸಮನ್ವಯದೊಂದಿಗೆ ಇಸ್ರೇಲ್ ಇರಾನ್ ಜೊತೆ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ. (ಏಜೆನ್ಸೀಸ್)