ನವದೆಹಲಿ: ಒಂದು ಗಂಟೆಯ ಅವಧಿಯಲ್ಲಿ ಇರಾನ್ನಲ್ಲಿರುವ (Iran) ಹಿಜ್ಬುಲ್ಲಾ (Hezbollah) ಸಂಘಟನೆಯ 120ಕ್ಕೂ ಅಧಿಕ ಅಡಗುದಾಣಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ (Israel) ವೈಮಾನಿಕ ದಾಳಿ ನಡೆಸಿದ್ದು, ಉಭಯ ದೇಶಗಳ ನಡುವಿನ ಸಂಘರ್ಷಕ್ಕೆ ನಾಂದಿ ಹಾಡಿದೆ.
ದಕ್ಷಿಣ ಲೆಬನಾನ್‌ನಲ್ಲಿ ಒಂದು ಗಂಟೆಯೊಳಗೆ 120 ಕ್ಕೂ ಹೆಚ್ಚು ಭಯೋತ್ಪಾದಕರ ಅಡಗುದಾಣಗಳನ್ನು ಧ್ವಂಸ ಮಾಡಲಾಗಿದೆ. ಸೋಮವಾರ ಉಗ್ರರ ವಿರುದ್ಧ ಕೈಗೊಂಡ ವ್ಯಾಪಕ ದಾಳಿಯ ಭಾಗವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಧೋನಿಗಾಗಿಯೇ IPL ನಿಯಮವನ್ನು ಬದಲಾಯಿಸಲಾಗಿದೆ; ಅನ್ಕ್ಯಾಪ್ಡ್ ರೂಲ್ ಕುರಿತು ಮಾಜಿ ಆಟಗಾರನ ಹೇಳಿಕೆ ವೈರಲ್
ಉಗ್ರರ ವಿರುದ್ಧ ಐಎಎಫ್ (Israel Air Force) ವ್ಯಾಪಕವಾದ ವೈಮಾನಿಕ ಕಾರ್ಯಾಚರಣೆಯನ್ನು ನಡೆಸಿತು. ಈ ವೇಳೆ ದಕ್ಷಿಣ ಲೆಬನಾನ್‌ನಲ್ಲಿ ಒಂದು ಗಂಟೆಯೊಳಗೆ 120 ಕ್ಕೂ ಹೆಚ್ಚು ಭಯೋತ್ಪಾದಕರ ಅಡಗುದಾಣಗಳನ್ನು ಧ್ವಂಸ ಮಾಡಲಾಗಿದೆ. ದಾಳಿಯಲ್ಲಿ ಸಾವು ನೋವಿನ ಬಗ್ಗೆ ಯಾವುದೇ ಮಾಹಿತಿಯನ್ನು ಇಸ್ರೇಲ್ ಹಂಚಿಕೊಂಡಿಲ್ಲ.
ಇಸ್ರೇಲ್ ಹಾಗೂ ಇರಾನ್ ನಡುವಿನ ಬಿಕ್ಕಟ್ಟು ದಿನ ಕಳೆದಂತೆ ಹೆಚ್ಚುತ್ತಿದ್ದು, ಶುಕ್ರವಾರ ಮಸೀದಿ ಮೇಲೆ ಇಸ್ರೇಲ್ ನಡೆಸಿದ್ದ ವೈಮಾನಿಕ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಸ್ರೇಲ್ ವೈಮಾನಿಕ ದಾಳಿ ಬೆನ್ನಲ್ಲೇ ಗಾಜಾದಿಂದ ರಾಕೆಟ್‌ಗಳನ್ನು ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿತ್ತು.