ಗಾಜಾ: ಉತ್ತರ ಗಾಜಾ(Gaza)ದಲ್ಲಿ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಶಂಕಿತರ ತಮ್ಮ ಪಡೆಗಳನ್ನು ಸಂಪರ್ಕಿಸಿದ ನಂತರ ಗುಂಡು ಹಾರಿಸಿದೆ ಎಂದು ಮಂಗಳವಾರ (ಅಕ್ಟೋಬರ್,14) ಇಸ್ರೇಲ್ ರಕ್ಷಣಾ ಪಡೆ(IDF) ತಿಳಿಸಿದೆ. ಅಲ್ಲದೆ, ದಾಳಿಯಲ್ಲಿ ಕನಿಷ್ಟ 6 ಮಂದಿ ಬಲಿಯಾಗಿದ್ದಾರೆ ಎಂದು ಗಾಜಾದ ಆರೋಗ್ಯ ಅಧಿಕಾರಿಗಳು ವರದಿ ಹೇಳಿದೆ.
ಇಸ್ರೇಲಿ ಸೇನೆಯ ಪ್ರಕಾರ, ಅಮೆರಿಕ ಮಧ್ಯಸ್ಥಿಕೆಯ ಕದನ ವಿರಾಮದ ಅಡಿಯಲ್ಲಿ ಇಸ್ರೇಲ್‌ನ ಆರಂಭಿಕ ಪಡೆಗಳನ್ನು ಹಿಂತೆಗೆದುಕೊಳ್ಳಲು ಗೊತ್ತುಪಡಿಸಿದ ಪ್ರದೇಶಕ್ಕೆ ವ್ಯಕ್ತಿಗಳು ನುಸುಳಿದ್ದಾರೆ. ಇದು ಒಪ್ಪಂದದ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು IDF ಹೇಳಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ IDF, ಇಂದು ಮುಂಜಾನೆ, ಹಲವಾರು ಶಂಕಿತರು ಹಳದಿ ರೇಖೆಯನ್ನು ದಾಟಿ ಉತ್ತರ ಗಾಜಾ ಪಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐಡಿಎಫ್ ಪಡೆಗಳನ್ನು ಸಮೀಪಿಸುತ್ತಿರುವುದನ್ನು ಗುರುತಿಸಲಾಗಿದೆ. ಇದು ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ತಿಳಿಸಿದೆ.
ಅಲ್ಲದೆ, ಶಂಕಿತರನ್ನು ದೂರವಿಡಲು ಪ್ರಯತ್ನಗಳು ನಡೆದವು. ಅದರೆ ಶಂಕಿತರು ಅದನ್ನು ಪಾಲಿಸಲಿಲ್ಲ ಮತ್ತು ಪಡೆಗಳನ್ನು ಸಮೀಪಿಸುತ್ತಲೇ ಇದ್ದರು ಅದಕ್ಕಾಗಿ ಬೆದರಿಕೆಯನ್ನು ತೆಗೆದುಹಾಕಲು ಗುಂಡು ಹಾರಿಸಿದ್ದೇವೆ ಎಂದು ಮಾಹಿತಿ ನೀಡಿದೆ. ಇಸ್ರೇಲಿ ಸೇನೆಯು ಗಾಜಾ ನಿವಾಸಿಗಳಿಗೆ ಸೂಚನೆಗಳನ್ನು ಪಾಲಿಸುವಂತೆ ಮತ್ತು ಆ ಪ್ರದೇಶದಲ್ಲಿ ನಿಯೋಜಿತ ಸೈನಿಕರನ್ನು ಸಮೀಪಿಸುವುದನ್ನು ತಪ್ಪಿಸುವಂತೆ ಕರೆ ನೀಡಿದೆ.
ಗಾಜಾದಿಂದ ಕೊನೆಯ ಜೀವಂತ ಇಸ್ರೇಲಿ ಬಂಧಿತರನ್ನು ಹಮಾಸ್ ಬಿಡುಗಡೆ ಮಾಡಿದ ಒಂದು ದಿನದ ನಂತರ ಮತ್ತು ಕದನ ವಿರಾಮ ಒಪ್ಪಂದದ ಭಾಗವಾಗಿ ಇಸ್ರೇಲ್ ನೂರಾರು ಪ್ಯಾಲೆಸ್ಟೀನಿಯನ್ ಬಂಧಿತರನ್ನು ಬಿಡುಗಡೆ ಮಾಡಿದ ಒಂದು ದಿನದ ನಂತರ ಈ ದಾಳಿ ನಡೆದಿದೆ. (ಏಜೆನ್ಸೀಸ್)