ಡಾಕಾ: ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾಗಿಯಾಗಿದ್ದ ಸೈನಿಕರ ಕುಟುಂಬಸ್ಥರಿಗೆ ಉದ್ಯೋದಲ್ಲಿ ಮೀಸಲಾತಿ ನೀಡಿರುವುದನ್ನು ವಿರೋಧಿಸಿ ದೇಶಾದ್ಯಂತ ನಡೆದ ಪ್ರತಿಭಟನೆಯಲ್ಲಿ 650ಕ್ಕೂ ಹೆಚ್ಚು ಬಲಿಯಾಗಿದ್ದು, ಈಗಲೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ. ಅದರಲ್ಲೂ ಮುಖ್ಯವಾಗಿ ಅಲ್ಪಸಂಖ್ಯಾತ ಹಿಂದೂ ಹಾಗೂ ದೇವಸ್ಥಾನಗಳ ಮೇಲಿನ ದಾಳಿ ಮುಂದುವರೆದಿದ್ದು, ಸದ್ಯಕ್ಕೆ ಇದು ನಿಲ್ಲುವಂತೆ ಕಾಣುತ್ತಿಲ್ಲ.
ಇದೀಗ ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ಹಿಂದೂ ಶಿಕ್ಷಕರೊಬ್ಬರ ಮೇಲೆ ಪುಂಡರ ಗುಂಪೊಂದು ದಾಳಿ ಮಾಡಿದ್ದು, ಈ ವಿಡಿಯೋವನ್ನು ಇಸ್ಕಾನ್ನ ವಕ್ತಾರರೊಬ್ಬರು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಶಿಕ್ಷಕನ ಶರ್ಟ್ಗೆ ವಿದ್ಯಾರ್ಥಿಗಳ ಗುಂಪೊಂದು ಸಿಗರೇಟ್ ಪ್ಯಾಕೆಟ್ ಪಿನ್ ಮಾಡಿ, ಮಾನವೀಯತೆಯನ್ನೂ ಮರೆತು ಆ ಶಿಕ್ಷಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ. ಅಸಹಾಯಕ ಸ್ಥಿತಿಯಲ್ಲಿ ಕುಳಿತಿರುವ ಶಿಕ್ಷಕ ವಿದ್ಯಾರ್ಥಿಗಳ ದುರ್ವತನೆ ಕಂಡು ಭಾವುಕರಾಗಿರುವುದನ್ನು ನೋಡಬಹುದಾಗಿದೆ.
ಇದನ್ನೂ ಓದಿ: ದರ್ಶನ್ ಸರ್ ಋಣ ನನ್ನ ಕುಟುಂಬದ ಮೇಲಿದೆ, ಅವರನ್ನ ಈ ತರ ನೋಡೋಕೆ ತುಂಬಾ ಕಷ್ಟವಾಗ್ತಿದೆ: ನಟಿ ರಚಿತಾ ರಾಮ್
ಬಳಿಕ ಮಾತನಾಡುವ ಇಸ್ಕಾನ್ನ ವಕ್ತಾರರೊಬ್ಬರು, ಬಾಂಗ್ಲಾದೇಶದಲ್ಲಿ ವಿದ್ಯೆ ಕಲಿಸಿದ ಮತ್ತೊಬ್ಬ ಹಿಂದೂ ಶಿಕ್ಷಕನನ್ನು ಮುಸ್ಲಿಂ ವಿದ್ಯಾರ್ಥಿಗಳು ಅವಮಾನಿಸಿದ್ದಾರೆ ಮತ್ತು ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ. ಪ್ರತಿದಿನ ಬಾಂಗ್ಲಾದೇಶದಲ್ಲಿ ಸಾವಿರಾರು ಹಿಂದೂ ಕೆಲಸಗಾರರ ಮೇಲೆ ರಾಜೀನಾಮೆ ಪತ್ರಗಳಿಗೆ ಸಹಿ ಹಾಕುವಂತೆ ಒತ್ತಡ ಹೇರಲಾಗುತ್ತಿದೆ. ಬಾಂಗ್ಲಾದೇಶದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ 2.5 ಮಿಲಿಯನ್ ಹಿಂದೂಗಳನ್ನು ಕೆಲಸದಿಂದ ತೆಗೆದುಹಾಕುವುದು ಅವರ ಗುರಿಯಾಗಿದೆ ಎಂದು ಕಿಡಿಕಾರಿದ್ದಾರೆ.
ಆಗಸ್ಟ್ 21ರಂದು ಹಂಚಿಕೊಳ್ಳಲಾದ ಈ ವಿಡಿಯೋ ಈವರೆಗೂ 9.5 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದ್ದು, ಯಾರೇ ಬಿಟ್ಟರು ಕರ್ಮದ ಫಲ ಇವರನ್ನು ಬಿಡುವುದಿಲ್ಲ. ಗುರುವನ್ನು ಅವಮಾನಿಸಿದವರು ಉದ್ದಾರ ಆಗಲ್ಲ. ನಿಜಕ್ಕೂ ಬಾಂಗ್ಲಾದೇಶ ಹಿಂದುಗಳಿಗೆ ನರಕವಾಗಿದೆ ಕೂಡಲೇ ಭಾರತ ಸರ್ಕಾರ ಅವರ ರಕ್ಷಣೆಗೆ ಧಾವಿಸಬೇಕು ಎಂದು ನೆಟ್ಟಿಗರು ಕಮೆಂಟ್ ಮಾಡಿ ಕಿಡಿಕಾದಿದ್ದಾರೆ.