ನ್ಯೂಸ್

ಮತ್ತೊಬ್ಬ ಐಎಸ್​ಐಎಸ್ ಉಗ್ರನ ಸೆರೆ: ವಡೋದರಾದಲ್ಲಿ ಗುಜರಾತ್ ಎಟಿಎಸ್ ಕಾರ್ಯಾಚರಣೆ

ಅಹಮದಾಬಾದ್​: ದೆಹಲಿಯಲ್ಲಿ ಪೊಲೀಸರು ಮೂವರು ಐಎಸ್​ಐಎಸ್​ ಉಗ್ರರನ್ನು ಸೆರೆ ಹಿಡಿದ ಸುದ್ದಿಯ ಬೆನ್ನಲ್ಲೆ ಗುಜರಾತ್​ನ ವಡೋದರಾದಲ್ಲೂ ಒಬ್ಬ ಐಸಿಸ್​ ಉಗ್ರನನ್ನು ಗುಜರಾತ್ ಎಟಿಎಸ್ ಬಂಧಿಸಿದ್ದು ಸುದ್ದಿಯಾಗಿದೆ.

ಗುಜರಾತ್​ ಪೊಲೀಸ್​ನ ಆ್ಯಂಟಿ ಟೆರರಿಸಂ ಸ್ಕ್ವಾಡ್​ ಐಸಿಸ್ ಉಗ್ರನನ್ನು ಬಂಧಿಸಿದ್ದು, ಆತನನ್ನು ಜಾಫರ್ ಅಲಿ ಎಂದು ಗುರುತಿಸಲಾಗಿದೆ. ವಡೋದರಾದ ಗೊರ್ವಾ ಎಂಬಲ್ಲಿ ಉಗ್ರನನ್ನು ಬಂಧಿಸಲಾಗಿದೆ. ಆದರೆ, ಯಾವ ದಿನ ಬಂಧಿಸಿದ್ದು ಎಂಬಿತ್ಯಾದಿ ಮಾಹಿತಿ ಇನ್ನಷ್ಟೆ ಬಹಿರಂಗವಾಗಬೇಕಾಗಿದೆ.

ಜಾಫರ್ ಅಲಿ ತಮಿಳುನಾಡಿನಲ್ಲಿ ಉಗ್ರ ಕೃತ್ಯಗಳಿಗೆ ಸಂಬಂಧಿಸಿ ಬೇಕಾದ ಆರೋಪಿಯಾಗಿದ್ದ. ಈತ ದೇಶಾದ್ಯಂತ ಐಸಿಸ್​ ಟೆರರಿಸ್ಟ್ ಮಾಡ್ಯೂಲ್​ ಸ್ಥಾಪಿಸುವ ಕೆಲಸವನ್ನು ಮಾಡುತ್ತಿದ್ದ. ದೆಹಲಿ ಬಂಧಿಸಲ್ಪಟ್ಟ ಉಗ್ರರ ಮಾಡ್ಯೂಲ್​ ಸ್ಥಾಪನೆಯಲ್ಲೂ ಈತ ಭಾಗಿಯಾಗಿದ್ದ. ತಮಿಳುನಾಡಿನಲ್ಲಿ ನಡೆದ ಕಾರ್ಯಾಚರಣೆ ವೇಳೆ ಈತ ತನ್ನ ಆರು ಸಹಚರರ ಜತೆಗೆ ಅಲ್ಲಿಂದ ಪರಾರಿಯಾಗಿದ್ದ. (ಏಜೆನ್ಸೀಸ್​)