ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯ ನಡೆಸುವುದಕ್ಕೆ ಹೊಂಚುಹಾಕುತ್ತಿದ್ದ ಐಎಸ್ಐಎಸ್ ಉಗ್ರನನ್ನು ದೆಹಲಿಯ ದೌಲಾ ಕಾನ್ ಪ್ರದೇಶದಲ್ಲಿ ದೆಹಲಿ ಪೊಲೀಸ್ ವಿಶೇಷ ಘಟಕ ಬಂಧಿಸಿದೆ. ಆತನ ಬಳಿ ಇದ್ದ ಎರಡು ಇಂಪ್ರೂವೈಸ್ಡ್ ಎಕ್ಸ್ಪ್ಲೋಸಿವ್ ಡಿವೈಸಸ್(ಐಇಡಿ) ಗಳನ್ನು ವಶಪಡಿಸಲಾಗಿದೆ.
ವಿಶೇಷ ಕಾರ್ಯಾಚರಣೆಯ ಮೂಲಕ ನಿನ್ನೆ ತಡರಾತ್ರಿ ಆತನನ್ನು ಬಂಧಿಸಲಾಗಿದೆ. ಕರೋಲ್ ಬಾಘ್ ಮತ್ತು ದೌಲಾ ಕಾನ್ ನಡುವೆ ರಿಡ್ಜ್ ರೋಡ್ನಲ್ಲಿ ಆತ ಪೊಲೀಸ್ ತಂಡಕ್ಕೆ ಮುಖಾಮುಖಿಯಾಗಿದ್ದ. ಸಣ್ಣ ಪ್ರಮಾಣದ ಗುಂಡಿನ ದಾಳಿಯ ಬಳಿಕ ಆತನನ್ನು ಬಂಧಿಸಲಾಗಿದೆ ಎಂದು ವಿಶೇಷ ಪೊಲೀಸ್ ಘಟಕದ ಡೆಪ್ಯುಟಿ ಕಮಿಷನರ್ ಪ್ರಮೋದ್ ಸಿಂಗ್ ಕುಶ್ವಾಹ ತಿಳಿಸಿದ್ದಾರೆ.
ಇದನ್ನೂ ಓದಿ: ರಾಯರ ಸನ್ನಿಧಿ ಮಂತ್ರಾಲಯದಲ್ಲಿ ಮಹಾ ವಿಸ್ಮಯ!
ಐಇಡಿಗಳನ್ನು ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ (ಎನ್ಎಸ್ಜಿ) ತಂಡದ ವಶಕ್ಕೆ ನೀಡಲಾಗಿದ್ದು, ಅವರು ಅದನ್ನು ನಿಷ್ಕ್ರಿಯಗೊಳಿಸಿದ್ದಾರೆ. ಬಂಧಿತನಿಂದ ಒಂದು ಪಿಸ್ತೂಲ್ ಕೂಡ ವಶಪಡಿಸಕೊಳ್ಳಲಾಗಿದೆ. ಬಂಧಿತನನ್ನು ಉತ್ತರ ಪ್ರದೇಶ ಮೂಲದ ಅಬು ಯೂಸುಫ್ ಖಾನ್ ಎಂದು ಗುರುತಿಸಲಾಗಿದೆ. (ಏಜೆನ್ಸೀಸ್)