ನ್ಯೂಸ್

ಸರ್ಕಾರಿ ನೌಕರರು ವಾರದಲ್ಲಿ ಒಂದು ದಿನ ಖಾದಿ ಬಟ್ಟೆ ಧರಿಸುವುದು ಕಡ್ಡಾಯ?|Is it mandatory for government employees to wear khadi for one day in a week?

ಬೆಂಗಳೂರು: ರಾಜ್ಯ ಸರ್ಕಾರಿ ಅಧಿಕಾರಿಗಳು, ನೌಕರರು/ನಿಗಮ,ಮಂಡಳಿ ಅಧಿಕಾರಿಗಳು, ನೌಕರರಿಗೆ ಕೆಲಸದ ದಿನಗಳಲ್ಲಿ ವಾರದಲ್ಲಿ ಕಡ್ಡಾಯವಾಗಿ ಒಂದು ದಿನ ಖಾದಿ ಬಟ್ಟೆ ಧರಿಸುವಂತೆ ಆದೇಶ ಹೊರಡಿಸಬೇಕು(Mandatory wearing of khadi for one day in a week should be ordered) ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಖಾದಿ ಎಂಬುದು ಕೇವಲ ಬಟ್ಟೆಯಲ್ಲ, ಅದೊಂದು ಜೀವನ ಪದ್ಧತಿ. ಸ್ವಾವಲಂಬಿ ಬದುಕಿನ ರೂಪಕ, ಖಾದಿ ತೊಟ್ಟವರಿಗೆ ಸತ್ಯ ಮತ್ತು ಅಹಿಂಸೆ ಒಂದು ವ್ರತ ಎನ್ನುವ ಹಿರಿಯರ ನುಡಿ ಇದೆ. ಅದರಂತೆ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಹಾಗೂ ರಾಷ್ಟ್ರಪಿತ ಗಾಂಧೀಜಿಯವರು ಸ್ಮರಣೆ ಚಿರಕಾಲ ಇರಲು ಈ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಖಾದಿ ನೈಸರ್ಗಿಕ ವಸ್ತು ಬಳಸಿ ನಿರ್ಮಿಸುವುದರಿಂದ ಜನರ ಶಕ್ತಿ, ಪರಿಶ್ರಮ ಆಧರಿಸಿದ್ದರಿಂದ ಖಾದಿಗೆ ಗಾಂಧೀಜಿಯವರು ವಿಶೇಷ ಒತ್ತು ನೀಡಿದ್ದರು. ಮಹಾತ್ಮ ಗಾಂಧಿಯವರ ಹೆಸರು ಶಾಶ್ವತವಾಗಿ ಉಳಿಯಲು ರಾಜ್ಯ ಸರ್ಕಾರಿ ಅಧಿಕಾರಿ, ನೌಕರರು/ನಿಗಮ, ಮಂಡಳಿ ಅಧಿಕಾರಿಗಳು/ನೌಕರರು ಕೆಲಸದ ದಿನಗಳಲ್ಲಿ ವಾರದಲ್ಲಿ ಕಡ್ಡಾಯವಾಗಿ ಒಂದು ದಿನ ಖಾದಿ ಬಟ್ಟೆ ದರಿಸಬೇಕೆಂಬ ಆದೇಶ ಹೊರಡಿಸಿದರೆ ಮಹತ್ಮಾ ಗಾಂಧೀಜಿಯವರ ಕನಸು ನನಸಾಗುತ್ತದೆ ಎಂದು ಸಂತೋಷ್ ಲಾಡ್ ಅವರು ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.