dog: ಮನುಷ್ಯರಿಗಿಂತ ಪ್ರಾಣಿಗಳ ಮೇಲೆ ಹೆಚ್ಚಾಗಿ ಪ್ತೀತಿ ತೋರಿಸುವ ಈ ಕಾಲದಲ್ಲಿ ಜನಸಾಮಾನ್ಯರು ತಮ್ಮ-ತಮ್ಮ ಮನೆಗಳಲ್ಲಿ ನಾಯಿಗಳನ್ನು ಹೆಚ್ಚಾಗಿ ಸಾಕುತ್ತಾರೆ. ಮನೆಯವರಿಗೆ ಸಂತೋಷ ನೀಡುವುದು ಮಾತ್ರವಲ್ಲದೇ ಪ್ರೀತಿ, ಕಾಳಜಿಯನ್ನು ಸಹ ತೋರಿಸಿ ಮನೆಯವರಲ್ಲೇ ಒಬ್ಬರಾಗಿ ಈ ಶ್ವಾನಗಳಿರುತ್ತವೆ.
ಇದನ್ನೂ ಓದಿ: ನೀವು ದಿನವಿಡೀ ಕುಳಿತು ಕೆಲಸ ಮಾಡುತ್ತೀರಾ? ಪ್ರತಿ 30 ನಿಮಿಷಗಳಿಗೊಮ್ಮೆ ಎದ್ದು 2 ನಿಮಿಷಗಳ ಕಾಲ ನಡೆಯಿರಿ... Health Tips
ಒಬ್ಬ ವ್ಯಕ್ತಿಯು ನಿಮ್ಮ ಸ್ನೇಹವನ್ನು ಉಳಿಸಿಕೊಳ್ಳದಿರಬಹುದು. ಆದರೆ ಶ್ವಾನ ಯಾವುದೇ ಪರಿಸ್ಥಿತಿಯಲ್ಲಿ ನಿಮ್ಮೊಂದಿಗೆ ಸದಾ ನಿಲ್ಲುವ ಮುಗ್ಧ ಜೀವಿ. ಶ್ವಾನವನ್ನು ವಿಶ್ವಾಸರ್ಹ ಹಾಗೂ ಸ್ನೇಹ ಜೀವಿ ಎಂದು ಪರಿಗಣಿಸಲಾಗುತ್ತದೆ. ಬೆಕ್ಕು ಅಥವಾ ಇತರ ಪ್ರಾಣಿಗಳನ್ನು ಸಾಕುಪ್ರಾಣಿಗಳಾಗಿ ಸಾಕಿದ್ದರೂ, ನಾಯಿಯನ್ನು ಸಾಕುವುದು ವಿಭಿನ್ನ ಭಾವನೆಯನ್ನು ನೀಡುತ್ತದೆ.
ಆದರೆ ಇಂದಿಗೂ ಅನೇಕ ಜನರಿಗೆ ಮನೆಯಲ್ಲಿ ನಾಯಿ ಸಾಕುವುದರಿಂದ ಜೋತಿಷ್ಯದ ಲಾಭವಿದೆ ಎಂಬುದು ಗೊತ್ತಿಲ್ಲ. ವಾಸ್ತವವಾಗಿ ಶ್ವಾನಗಳು ಕೇತು ಗ್ರಹದೊಂದಿಗೆ ಸಂಬಂಧ ಹೊಂದಿವೆ ಎನ್ನಲಾಗಿದೆ. ಶ್ವಾನವನ್ನು ಸಾಕುವುದರಿಂದ ಜೀವನದ ಕೇತುವಿನ ಮೇಲೆ ಪರಿಣಾಮ ಬೀರುತ್ತದೆ. ಅಂದರೆ ಮೂರು ಗ್ರಹಗಳ ಅಶುಭ ಪರಿಣಾಮಗಳಿಂದ ಪಾರಾಗಬಹುದಾಗಿದೆ. ತಮ್ಮ ರಾಶಿಯಲ್ಲಿ ಧನಾತ್ಮಕ ಕೇತು ಸ್ಥಾನ ಹೊಂದಿರುವ ಜನರು ತಮ್ಮ ಮನೆಯಲ್ಲಿ ನಾಯಿಯನ್ನು ಸಾಕಬಹುದು. ಹಾಗೆ ಮಾಡುವುದರಿಂದ ನೀವು ಕೇತು ಗ್ರಹದ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ ಮತ್ತು ನಿಮ್ಮ ಕೆಲಸವು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ.
ಜ್ಯೋತಿಷ್ಯದ ಪ್ರಕಾರ, ಮನೆಯಲ್ಲಿ ನಾಯಿಯನ್ನು ಸಾಕುವುದರಿಂದ ಶನಿ ಮತ್ತು ಕೇತು ಬಲಗೊಳ್ಳುತ್ತಾರೆ. ನಾಯಿಯನ್ನು ಸಾಕುವುದರಿಂದ ಮನೆಯ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ ಮತ್ತು ಧನಾತ್ಮಕ ಶಕ್ತಿ ಬರುತ್ತದೆ ಎಂದು ಹೇಳಲಾಗಿದೆ. ಕಪ್ಪು ನಾಯಿಯನ್ನು ಶನಿ ದೇವರ ಪ್ರೀತಿಪಾತ್ರ ಮತ್ತು ಭೈರವನ ಸೇವಕ ಎಂದು ಪರಿಗಣಿಸಲಾಗುತ್ತದೆ. ನಿಮ್ಮ ರಾಶಿಯಲ್ಲಿ ಶನಿ ದೋಷ, ಶನಿ ಮಹಾದಶಾ, ಶನಿ ಸಾಡೇಸಾತಿ ಇದ್ದರೆ, ಮನೆಯಲ್ಲಿ ಕಪ್ಪು ನಾಯಿಗಳನ್ನು ಸಾಕುವುದು ಮತ್ತು ನಾಯಿಗಳಿಗೆ ಆಹಾರ ನೀಡುವುದು ತುಂಬಾ ಶುಭವೆಂದು ಹೇಳಲಾಗಿದೆ.
3) ಮನೆಯಲ್ಲಿ ನಾಯಿ ಅಥವಾ ಸಾಕುಪ್ರಾಣಿಗಳ ಉಪಸ್ಥಿತಿಯಿಂದಾಗಿ, ಜನರು ಭಾವನಾತ್ಮಕವಾಗುತ್ತಾರೆ ಮತ್ತು ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
2) ನಾಯಿಯೊಂದಿಗೆ ಮಾತನಾಡುವುದು ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮ ಹಾರ್ಮೋನ್ ಆಕ್ಸಿಟೋಸಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
1) ಮನೆಯಲ್ಲಿ ಸಾಕುಪ್ರಾಣಿ ಇದ್ದರೆ ಅದರೊಂದಿಗೆ ಮಾತನಾಡುವ ಮೂಲಕ ನಿಮ್ಮ ಮನಸ್ಸನ್ನು ಹಗುರಗೊಳಿಸಬಹುದು.
(ಏಜೆನ್ಸೀಸ್)
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಪಠ್ಯಗಳಿಂದ ಸಂಗ್ರಹಿಸಲಾಗಿದೆ.