Lizard: ನಮ್ಮ ಮನೆಯ ವಿವಿಧ ಸ್ಥಳಗಳಲ್ಲಿ ಹಲ್ಲಿಗಳನ್ನು ಹೆಚ್ಚಾಗಿ ನೋಡುತ್ತೇವೆ. ಕೆಲವೊಮ್ಮೆ ಅವು ನಮ್ಮ ಮೈಮೇಲೂ ಬೀಳುತ್ತವೆ, ಇದರಿಂದ ಭಯಗೊಂಡು ಕಿರುಚಾಡುವವರೂ ಅನೇಕರಿದ್ದಾರೆ. ಆದರೆ ಸನಾತನ ಧರ್ಮದಲ್ಲಿ ಇದನ್ನು ಶುಭ ಮತ್ತು ಅಶುಭ ಶಕುನ ಎಂದು ಪರಿಗಣಿಸಲಾಗಿದೆ.
ದೇಹದ ಕೆಲವು ಭಾಗಗಳ ಮೇಲೆ ಹಲ್ಲಿ ಬಿದ್ದರೆ ಅದು ಆ ವ್ಯಕ್ತಿಗೆ ಸಂಪತ್ತು ತರಬಹುದು ಹಾಗೆಯೇ ಇನ್ನೂ ಬೇರೆ ಜಾಗದಲ್ಲಿ ಬಿದ್ದರೆ ಇದು ಮುಂದಿನ ದಿನಗಳಲ್ಲಿ ಜೀವನದಲ್ಲಿ ಏನಾದರೂ ಸಮಸ್ಯೆ ಎದುರಾಗಲಿದೆ ಎಂಬುದರ ಸೂಚನೆಯಾಗಿರಬಹುದು ಎನ್ನುವ ನಂಬಿಕೆ ಭಾರತೀಯರಲ್ಲಿದೆ. ಈ ರೀತಿ ಈ ಶುಭ ಮತ್ತು ಅಶುಭ ಚಿಹ್ನೆಗಳನ್ನು ಗುರುತಿಸುವ ಮೂಲಕ ನಾವು ಎಚ್ಚರವಾಗಿರಬಹುದು. ಹಾಗಾದ್ರೆ ಹಲ್ಲಿ ದೇಹದ ಯಾವ ಭಾಗಗಳ ಮೇಲೆ ಬೀಳುವುದು ಶುಭ ಮತ್ತು ದೇಹದ ಯಾವ ಭಾಗಗಳ ಮೇಲೆ ಬೀಳುವುದು ಒಳ್ಳೆಯದಲ್ಲ ಎನ್ನುವ ಬಗ್ಗೆ ತಿಳಿಯೋಣ ಬನ್ನಿ
ಇದನ್ನೂ ಓದಿ: 1 ಲಕ್ಷ ರೂ. ಗಡಿ ದಾಟಿದ ಚಿನ್ನದ ದರ! ತೀವ್ರ ಬೆಲೆ ಏರಿಕೆಗೆ ಕಾರಣವೇನು? ದರ ಇಳಿಕೆಯಾಗುತ್ತಾ? ಇಲ್ಲಿದೆ ಮಾಹಿತಿ...
ಹಲ್ಲಿ ತೋಳಿನ ಮೇಲೆ ಬಿದ್ದರೆ
ಹಲ್ಲಿ ಇದ್ದಕ್ಕಿದ್ದಂತೆ ವ್ಯಕ್ತಿಯ ಬಲಗೈಯ ಮೇಲೆ ಬಿದ್ದರೆ, ಅದನ್ನು ಶುಭ ಸೂಚನೆ ಎಂದು ಪರಿಗಣಿಸಲಾಗುತ್ತದೆ. ಇದರರ್ಥ ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಮುಂಬರುವ ದಿನಗಳಲ್ಲಿ ನೀವು ರಾಜನಂತೆ ಸಂತೋಷದಿಂದ ಇರಬಹುದು, ನಿಮಗೆ ಐಷಾರಾಮಿಗಳು ಮತ್ತು ಸೌಕರ್ಯಗಳು ಸಹ ಹೆಚ್ಚಾಗುತ್ತವೆ ಎಂದು ಇದು ಸೂಚಿಸುತ್ತದೆ. ಇದಲ್ಲದೆ ಹಲ್ಲಿ ವ್ಯಕ್ತಿಯ ಎಡಗೈಯ ಮೇಲೆ ಹಲ್ಲಿ ಬಿದ್ದರೆ, ಅದನ್ನು ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗುವುದಿಲ್ಲ. ಇದರರ್ಥ ನೀವು ಮುಂಬರುವ ದಿನಗಳಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ಜೀವನದಲ್ಲಿ ತೊಂದರೆಗಳನ್ನು ಎದುರಿಸಬಹುದು ಎಂದು ತಿಳಿಸುತ್ತದೆ.
ಹಲ್ಲಿ ತಲೆಯ ಮೇಲೆ ಬಿದ್ದರೆ
ಹಲ್ಲಿ ಇದ್ದಕ್ಕಿದ್ದಂತೆ ವ್ಯಕ್ತಿಯ ತಲೆಯ ಮೇಲೆ ಬಿದ್ದರೆ ಅದು ಒಳ್ಳೆಯ ಸೂಚನೆ ಎಂದು ನಂಬಲಾಗಿದೆ. ಇದರರ್ಥ ಮುಂಬರುವ ದಿನಗಳಲ್ಲಿ ಸಮಾಜದಲ್ಲಿ ನಿಮ್ಮ ಗೌರವವೂ ಹೆಚ್ಚಾಗಿ ನೀವು ಸಂತೋಷವನ್ನು ಆನಂದಿಸಬಹುದು ಎಂದು ಇದು ಸೂಚಿಸುತ್ತದೆ. ಅಲ್ಲದೆ ಇದನ್ನು ಭವಿಷ್ಯದಲ್ಲಿ ಆರ್ಥಿಕ ಲಾಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರರ್ಥ ನಿಮ್ಮ ಜೀವನದಲ್ಲಿ ಸದಾ ಸಂತೋಷ ಮತ್ತು ಸಮೃದ್ಧಿ ಉಳಿಯುತ್ತದೆ.
ಹಲ್ಲಿ ಸೊಂಟದ ಮೇಲೆ ಬಿದ್ದರೆ
ಒಬ್ಬ ವ್ಯಕ್ತಿಯು ಮಲಗಿರುವಾಗ ಹಲ್ಲಿ ಸೊಂಟದ ಎಡಭಾಗದಲ್ಲಿ ಬಿದ್ದರೆ, ಅದು ಆರೋಗ್ಯಕ್ಕೆ ಸಂಬಂಧಿಸಿದ ಸಂಕೇತ ಎಂದು ನಂಬಲಾಗಿದೆ. ಇದರರ್ಥ ಭವಿಷ್ಯದಲ್ಲಿ ದೇಹಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಇದಲ್ಲದೆ ವ್ಯಕ್ತಿಯ ಸೊಂಟದ ಮಧ್ಯ ಭಾಗದಲ್ಲಿ ಹಲ್ಲಿ ಬಿದ್ದರೆ, ಅದನ್ನು ಅಶುಭ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಇದರರ್ಥ ನಿಮ್ಮ ಕುಟುಂಬದಲ್ಲಿ ಯಾವುದೋ ವಿಷಯದ ಬಗ್ಗೆ ಜಗಳ ಅಥವಾ ಭಿನ್ನಾಭಿಪ್ರಾಯ ಉಂಟಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ವ್ಯಕ್ತಿಯು ಎಚ್ಚರವಾಗಿರಬೇಕು. ಹಲ್ಲಿ ಸೊಂಟದ ಬಲಭಾಗದಲ್ಲಿ ಬಿದ್ದರೆ, ಅದನ್ನು ತುಂಬಾ ಶುಭ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಇದರರ್ಥ ನೀವು ಜೀವನದಲ್ಲಿ ಎಲ್ಲಾ ಸಂತೋಷವನ್ನು ಪಡೆಯಲಿದ್ದೀರಿ ಮತ್ತು ನೀವು ಆರ್ಥಿಕ ಲಾಭಗಳನ್ನು ಸಹ ಪಡೆಯಬಹುದು.
ಹಲ್ಲಿ ಕಾಲಿನ ಮೇಲೆ ಬಿದ್ದರೆ
ಒಬ್ಬ ವ್ಯಕ್ತಿಯ ಬಲಗಾಲಿನ ಮೇಲೆ ಹಲ್ಲಿ ಬಿದ್ದರೆ, ಅದು ಪ್ರಯಾಣದ ಸೂಚನೆಯಾಗಿರಬಹುದು. ಹಾಗೆಯೇ ಹಲ್ಲಿ ಎಡಗಾಲಿನಲ್ಲಿ ಬೀಳುವುದು ಒಳ್ಳೆಯ ಸಂಕೇತವಲ್ಲ ಎಂದು ಪರಿಗಣಿಸಲಾಗಿದೆ. ಭವಿಷ್ಯದಲ್ಲಿ ನೀವು ದೇಹಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳಿಂದ ತೊಂದರೆಗೊಳಗಾಗಬಹುದು ಮತ್ತು ಕುಟುಂಬದಲ್ಲಿ ಕೆಲವು ವಿಷಯದ ಬಗ್ಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು ಎಂದು ಇದು ತಿಳಿಸುತ್ತದೆ. ಒಬ್ಬ ವ್ಯಕ್ತಿಯ ಕಾಲಿನ ಬೆರಳಿನ ಮೇಲೆ ಹಲ್ಲಿ ಬಿದ್ದರೆ ಅದು ಭವಿಷ್ಯದಲ್ಲಿ ಎಲ್ಲೋ ಪ್ರವಾಸಕ್ಕೆ ಹೋಗುವುದರ ಸೂಚನೆಯಾಗಿರಬಹುದು.
ಹಲ್ಲಿ ಕೈ ಮೇಲೆ ಬಿದ್ದರೆ
ಒಬ್ಬ ವ್ಯಕ್ತಿಯ ಬಲಗೈ ಮೇಲೆ ಹಲ್ಲಿ ಬಿದ್ದರೆ ಅದನ್ನು ತುಂಬಾ ಶುಭ ಸಂಕೇತವೆಂದು ನಂಬಲಾಗಿದೆ. ಇದರರ್ಥ ಮುಂಬರುವ ಸಮಯದಲ್ಲಿ ನಿಮಗೆ ಹಣಕಾಸಿನ ಪ್ರಯೋಜನಗಳು ಸಿಗಬಹುದು ಮತ್ತು ಮನೆಯ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ನಿಮ್ಮ ಬಲಗೈ ಮೇಲೆ ಬೀಳುವ ಹಲ್ಲಿ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರಲಿದೆ ಎಂದು ಸೂಚಿಸುತ್ತದೆ. ಆದರೆ ಹಲ್ಲಿ ವ್ಯಕ್ತಿಯ ಎಡಗೈ ಮೇಲೆ ಬಿದ್ದರೆ ಅದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ. ಇದು ಮುಂದಿನ ದಿನಗಳಲ್ಲಿ ಆರ್ಥಿಕ ನಷ್ಟದ ಸೂಚನೆಯಾಗಿರಬಹುದು. ಇದರರ್ಥ ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. (ಏಜೆನ್ಸೀಸ್)