ನ್ಯೂಸ್

ಕೋಳಿ ಪ್ರಾಣಿಯೋ, ಪಕ್ಷಿಯೋ?; ನಿಮಗೇನಾದರೂ ಗೊತ್ತಾ!; ಇಲ್ಲವಾದರೆ ತಿಳಿಯಿರಿ | Chicken

Chicken:ಮೊಟ್ಟೆ ಮೊದಲ.. ಕೋಳಿ ಮೊದಲ.. ಸಾಮಾನ್ಯವಾಗಿ ಚಿಕ್ಕ ವಯಸ್ಸಿನಿಂದ ಇಲ್ಲಿಯವರೆಗೂ ಈ ವ್ಯಾಕ್ಯವನ್ನು ಕೇಳಿಕೊಂಡು ಬಂದಿದ್ದೇವೆ. ಆದರೆ, ಈ ಮಿಲಿಯನ್​ ಡಾಲರ್​ ಪ್ರಶ್ನೆಗೆ ವಿಜ್ಞಾನಿಗಳು ಉತ್ತರ ಹುಡುಕುತ್ತಲೇ ಇದ್ದಾರೆ. ಆದರೀಗ ಎಲ್ಲರಿಗೂ ತಿಳಿದಿರುವಂತೆ ಕೋಳಿ ಪ್ರಾಣಿಯೋ ಅಥವಾ ಪಕ್ಷಿಯೋ ಎಂಬ ಪ್ರಶ್ನೆ ಮೂಡಿರುತ್ತೇ?. ಇದು ಕೆಲವರಿಗೆ ಗೊತ್ತಿದೆಯಾದರೂ ಇನ್ನು ಕೆಲವರಿಗೆ ತಿಳಿದಿಲ್ಲ. ಆದರೆ, ಕೋಳಿ ಯಾವ ವರ್ಗಕ್ಕೆ ಸೇರುತ್ತದೆ ಎಂದು ತಿಳಿಯೋಣ ಬನ್ನಿ..

ಪ್ರಂಪಚದ ಎಲ್ಲ ಪ್ರಾಣಿಗಳು ತಮ್ಮದೇ ವೈಶಿಷ್ಟ್ಯಮತ್ತು ವಿಶೇಶತೆಯನ್ನು ಹೊಂದಿವೆ. ಅದಕ್ಕಾಗಿಯೇ ಅವು ಪ್ರಸಿದ್ಧಿಹೊಂದಿವೆ. ಮಾಂಸಹಾರಿ ಪ್ರಿಯರಿಗೆ ಕೋಳಿ ಎಂದರೆ ಎಲ್ಲಿಲ್ಲದ ಪ್ರೀತಿ. ಮನುಷ್ಯರಿಗೆ ಬಹಳ ಹತ್ತಿರವಾದಂತಹ ಮತ್ತು ಇಷ್ಟಪಟ್ಟು ತಿನ್ನುವಂತಹ(ಮಾಂಸಹಾರಿಗಳಿಗೆ) ಆಹಾರ ಎಂದರೆ ಅದು ಕೋಳಿ. ಕೋಳಿಯನ್ನು ಸಾಮಾನ್ಯವಾಗಿ ಮಾಂಸ ವರ್ಗಕ್ಕೆ ಸೇರಿಸುತ್ತೇವೆ. ಆದರೆ, ಇದು ಪ್ರಾಣಿ ಮತ್ತು ಪಕ್ಷಿ ಎರಡು ವರ್ಗಕ್ಕೆ ಸೇರಿದೆ.

ಹೌದು, ಇದರ ಮಾಂಸ ಸೇವನೆಯ ಕಾರಣದಿಂದ ಆಹಾರ ಮತ್ತು ಸುರಕ್ಷತಾ ಮಾನದಂಡಗಳ ಕಾಯ್ದೆಯಡಿ ಕೋಳಿಯನ್ನು ಪಕ್ಷಿಯಲ್ಲ, ಪ್ರಾಣಿ ಎಂದು ಪರಿಗಣಿಸಲಾಗುತ್ತದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಅದಕ್ಕಾಗಿಯೇ ಕೋಳಿ ಪ್ರಾಣಿ ವರ್ಗದಲ್ಲಿ ಬರುತ್ತದೆ. ಹೀಗಾಗಿ, ಸರ್ಕಾರದ ವಾದ ಪ್ರಕಾರ, ಕೋಳಿ ಪ್ರಾಣಿ ಎಂದೇ ಪರಿಗಣಿಸಲ್ಪಟ್ಟಿದೆ.

ಆದರೆ, ವಿಜ್ಞಾನದ ಪ್ರಕಾರ, ಕೋಳಿ ಹಾರುವ ಮತ್ತು ಮೊಟ್ಟೆ ಇಡುವ ಜೀವಿಯಾಗಿರುವುದರಿಂದ ಪಕ್ಷಿ ಎಂದು ಪರಿಗಣಿಸಲಾಗಿದೆ. ಅಲ್ಲದೆ, ಇಂತಹ ಹಾರುವ, ಮೊಟ್ಟೆ ಡುವ ಜೀವಿಗಳನ್ನು ಎವಿಎಸ್​ ವರ್ಗ ಎಂದು ಕರೆಯಲಾಗಿದ್ದು, ವಿಜ್ಞಾನದ ಮತ್ತು ವಿಜ್ಞಾನಿಗಳ ಪ್ರಕಾರ, ಕೋಳಿ ಒಂದು ಪಕ್ಷಿ ಎಂದು ಹೇಳಲಾಗಿದೆ.(ಏಜೆನ್ಸೀಸ್​)