ವಿಜಯವಾಣಿ ಸುದ್ದಿಜಾಲ ಬಾಗೇಪಲ್ಲಿ
ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಶ್ವತ ನೀರಾವರಿ ಹೋರಾಟಗಾರ ಹಾಗೂ ವಿದೇಶದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಮಧುಸೀತಪ್ಪ (57) ಬಾಗೇಪಲ್ಲಿ ತಾಲೂಕಿನ ಶಿವಪುರ ಗ್ರಾಮದ ಾಮ್ರ್ ಹೌಸ್ನಲ್ಲಿ ಗುರುವಾರ ಹೃದಯಘಾತದಿಂದ ನಿಧನರಾದರು. ಶಿಡ್ಲಘಟ್ಟ ತಾಲೂಕಿನ ಚಿಲಕಲನೇರ್ಪು ಗ್ರಾಮದ ನಿವಾಸಿ ಡಾ.ಮಧುಸೀತಪ್ಪ ಅವರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ. ಇಂಗ್ಲೆಂಡ್ನ ಲಂಡನ್ ನಗರದಲ್ಲಿ ವಾಸವಾಗಿದ್ದ ಅವರು ಮೂರು
ದಿನಗಳ ಹಿಂದೆ ಶಿವಪುರಕ್ಕೆ ಆಗಮಿಸಿದ್ದರು.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರ ಕೃಷಿ ಜಮೀನಿಗಳಿಗೆ ಹಾಗೂ ನಾಗರಿಕರಿಗೆ ಪ್ಲೋರೈಡ್ ಮುಕ್ತ ಶುದ್ಧ ನೀರು ಒದಗಿಸಿಕೊಡುವ ಬಗ್ಗೆ ಹಲವು ಕೃಷಿ ವಿಜ್ಞಾನಿಗಳ ಜತೆ ಚರ್ಚಿಸಿ, ಯೋಜನೆಗಳ ಬಗ್ಗೆ ಅಧ್ಯಯನ ಮಾಡಿ ಸಿದ್ಧಪಡಿಸಿರುವ ಮಹತ್ವದ ವರದಿಗಳನ್ನು ಅವರು ಸರ್ಕಾರಕ್ಕೆ ಒಪ್ಪಿಸಿದ್ದರು. ಸರ್ಕಾರದ ವಿರುದ್ಧ ಸತತ 15 ವರ್ಷ ಹೋರಾಟ ನಡೆಸಿ ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಶ್ರಮಿಸಿದ್ದರು.
2016 ರಲ್ಲಿ ಬಾಗೇಪಲ್ಲಿ ತಾಲೂಕು ಪಾತಪಾಳ್ಯ ಹೋಬಳಿಯ ಶಿವಪುರ ಗ್ರಾಮದ ಬಳಿ 100 ಎಕೆರಗೂ ಹೆಚ್ಚು ಜಮೀನುನ್ನು ಖರೀದಿಸಿ ಇಸ್ರೇಲ್ ಕೃಷಿ ಪದ್ಧತಿ ಅಳವಡಿಸಿಕೊಂಡು ವಿವಿಧ ಬಗೆಯ ಹೂವು, ತರಕಾರಿ ಬೆಳೆಯುವ ಕಾಯಕದಲ್ಲಿ ತೊಡಗಸಿಕೊಂಡು, 100 ರಿಂದ 150 ಜನ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವುದರ ಜತೆಗೆ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವು ಕಲ್ಪಿಸಿದ್ದರು. ಪ್ರಸ್ತುತ ರಾಜಕೀಯ ವ್ಯವಸ್ಥೆಗಳ ಬಗ್ಗೆ ಅಸಮಾಧಾನಗೊಂಡ ಡಾ.ಮಧುಸೀತಪ್ಪ 2023ರ ವಿಧಾನಸಭಾ ಚುನಾವಣೆ ಸಮಯದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಥಿಸಿ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಸಾಧನೆಗಳನ್ನು ಪ್ರಚಾರ ಮಾಡಿಕೊಂಡು ಚುನಾವಣಾ ಅಖಾಡದಲ್ಲಿ ಪರಾಭವಗೊಂಡು, ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ಮತಯಾಚಿಸಿದರು.
ನಂತರ ದಿನಗಳಲ್ಲಿ ಪತ್ನಿ ಮತ್ತು ಮಗನೊಂದಿಗೆ ಲಂಡನ್ ನಗರದಲ್ಲಿ ಕಾಲ ಕಳೆಯುತ್ತಿದ್ದು, ಸಮಯ ಸಿಕ್ಕಿದಾಗ ಶಿವಪುರ ಗ್ರಾಮದ ಪಾಮ್ರ್ ಹೌಸ್ನಲ್ಲಿ ಸಮಯ ಕಳೆಯುತ್ತಿದ್ದರು. ಮುಂದಿನ ದಿನಗಳಲ್ಲಿ ಡಾ.ಮಧುಸೀತಪ್ಪನವರ ನೆನಪುಗಳು ಮಾತ್ರ ಉಳಿಯಳಿವೆ. ಬಾಗೇಪಲ್ಲಿಯ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿದ ಸಿಪಿಐಎಂ, ಬಿಜೆಪಿ, ಕಾಂಗ್ರೆಸ್ ಪಕ್ಷದ ಹಲವು ಮುಖಂಡರು, ಅಭಿಮಾನಿಗಳು ಡಾ.ಮಧುಸೀತಪ್ಪ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಡಾ.ಮಧುಸೀತಪ್ಪ ಪತ್ನಿ ಹಾಗೂ ಪುತ್ರ ವಿದೇಶದಿಂದ ಬೆಂಗಳೂರಿಗೆ ಆಗಮಿಸಲು ಎರಡು ದಿನಗಳು
ಬೇಕಾಗಿರುವುದರಿಂದ ಮೃತ ದೇಹವನ್ನು ದೇವನಹಳ್ಳಿಯ ಆಕಾಶ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಕುಟುಂಬ ಸದಸ್ಯರ ತೀಮಾರ್ನದಂತೆ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಾಮ್ರ್ ಹೌಸ್ ವ್ಯವಸ್ಥಾಪಕ ತಿಳಿಸಿದ್ದಾರೆ.