Iran: ಪ್ರಸ್ತುತ ಇರಾನ್ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ಘೋಷಿಸಿದ್ದೇ ಆದರೂ ಒಳಗಿನ ಕಿಚ್ಚು ಇನ್ನೂ ಆರಿಲ್ಲ. ಇದಕ್ಕೆ ಇತ್ತೀಚಿನ ಬೆಳವಣಿಗಗಳೇ ಜ್ವಲಂತ ಸಾಕ್ಷಿ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿಗಳ ಸೊಕ್ಕು ಮತ್ತು ಜಂಭದ ಮಾತುಗಳು ಸದ್ಯ ಇರಾನ್‌ನ ಮತ್ತಷ್ಟು ಕೆರಳಿಸಿದೆ. ಇದಕ್ಕೆ ಈಗಾಗಲೇ ಮಾತಿನ ಟಕ್ಕರ್ಗಳು ಎರಡೂ ಕಡೆಯಿಂದ ಬಂದಿವೆ. ಈ ಮಧ್ಯೆ ಟ್ರಂಪ್ ಮತ್ತು ನೆತನ್ಯಾಹು ವಿರುದ್ಧ ಇರಾನ್‌ನ ಧರ್ಮಗುರು ಫತ್ವಾ ಹೊರಡಿಸಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ಕಸದ ಲಾರಿಯಲ್ಲಿತ್ತು ಮಹಿಳೆ ಶವ: ಪ್ರಿಯಕರನನ್ನು ವಶಕ್ಕೆ ಪಡೆದ ಪೊಲೀಸರು! BBMP Garbage Truck
ಇರಾನ್‌ನ ಪರಮಾಣು ಕೇಂದ್ರಗಳ ಮೇಲಿನ ನಿರಂತರ ವೈಮಾನಿಕ ದಾಳಿಯಿಂದಾಗಿ ಇರಾನ್, ಇಸ್ರೇಲ್ ಮತ್ತು ಅಮೆರಿಕ ಮೇಲೆ ತೀವ್ರ ಸಿಟ್ಟಾಗಿದೆ. ಈ ಸಂದರ್ಭದಲ್ಲಿ, ಇರಾನ್‌ನ ಶಿಯಾ ಧರ್ಮಗುರು ಗ್ರ್ಯಾಂಡ್ ಅಯತೊಲ್ಲಾ ನಾಸರ್ ಮಕರೆಮ್ ಶಿರಾಜಿ ಅವರು, ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ 'ಫತ್ವಾ' ಹೊರಡಿಸಿದ್ದಾರೆ. ಇವರಿಬ್ಬರೂ ದೇವರ ಶತ್ರುಗಳು ಎಂದು ಬಣ್ಣಿಸಿದ್ದಾರೆ. ಇಸ್ಲಾಮಿಕ್ ಗಣರಾಜ್ಯದ ನಾಯಕತ್ವಕ್ಕೆ ಬೆದರಿಕೆ ಹಾಕುತ್ತಿರುವ ಅಮೆರಿಕ ಮತ್ತು ಇಸ್ರೇಲಿ ನಾಯಕರ ಸಾಮ್ರಾಜ್ಯಗಳನ್ನು ಉರುಳಿಸಲು ಮಕರೆಮ್ ಶಿರಾಜಿ ಒಂದು ಆದೇಶದಲ್ಲಿ ಪ್ರಪಂಚದಾದ್ಯಂತದ ಮುಸ್ಲಿಮರಿಗೆ ಕರೆ ನೀಡಿದ್ದಾರೆ.
ಇರಾನಿನ ನಾಯಕರಿಗೆ ಬೆದರಿಕೆಯೊಡ್ಡುವ ಯಾರನ್ನಾದರೂ ಯುದ್ಧನಾಯಕ ಎಂದು ಪರಿಗಣಿಸಲಾಗುತ್ತದೆಯೇ ಎಂದು ಮಕರೆಮ್ ತನ್ನ ತೀರ್ಪಿನಲ್ಲಿ ಹೇಳಿದ್ದಾರೆ. ದೇವರ ವಿರುದ್ಧ ಯುದ್ಧ ಮಾಡುವ ವ್ಯಕ್ತಿ ಮೊಹರೆಬ್. ಇರಾನಿನ ಕಾನೂನಿನ ಪ್ರಕಾರ, ಮೊಹರೆಬ್ ಎಂದು ಗುರುತಿಸಲ್ಪಟ್ಟವರು ಮರಣದಂಡನೆ, ಶಿಲುಬೆಗೇರಿಸುವಿಕೆ, ಅಂಗಚ್ಛೇದನ ಅಥವಾ ಗಡಿಪಾರು ಎದುರಿಸುತ್ತಾರೆ ಎಂದು ಫಾಕ್ಸ್ ನ್ಯೂಸ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಜಾಗತಿಕವಾಗಿ ಎಲ್ಲಾ ಮುಸ್ಲಿಮರು ಈ ಶತ್ರುಗಳು ತಮ್ಮ ಮಾತುಗಳು ಮತ್ತು ತಪ್ಪುಗಳಿಗೆ ಕ್ಷಮೆಯಾಚಿಸಿ, ಪಶ್ಚಾತಾಪ ಪಡುವಂತೆ ಮಾಡಬೇಕು ಎಂದು ಫತ್ವಾ ಹೇಳಿದೆ,(ಏಜೆನ್ಸೀಸ್).