ನ್ಯೂಸ್

ಅಮೆರಿಕಾಗೆ ಬುದ್ಧಿ ಕಲಿಸಲು ಮುಂದಾದ ಇರಾನ್​; ಯುಎಸ್​ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ

ಮೋಹನ್​ ಶೆಟ್ಟಿ

Iran: ಅಮೆರಿಕ ನಡೆಸಿದ್ದ ಬಾಂಬರ್ ದಾಳಿಗೆ ಪ್ರತೀಕಾರದ ದಾಳಿ ನಡೆಸಿರುವ ಇರಾನ್​, ಇತರೆ ದೇಶಗಳಲ್ಲಿರುವ ಅಮೆರಿಕಾದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಪ್ರಾರಂಭಿಸಿದೆ. ಇದು ಪ್ರತೀಕಾರದ ದಾಳಿಯಾಗಿದೆ.

ಇಸ್ರೇಲ್​ ದಾಳಿಯ ಬೆನ್ನಲ್ಲೇ ಇರಾನ್ ಮೇಲೆ ಬಾಂಬರ್​ ದಾಳಿ ನಡೆಸಿದ್ದ ಟ್ರಂಪ್​ಗೆ ತಕ್ಕ ಪಾಠ ಕಲಿಸುವುದಾಗಿ ಹೇಳಿದ್ದ ಇರಾನ್​, ಕಡೆಗೂ ಇತರೆ ದೇಶಗಳಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿಯನ್ನು ಕೈಗೊಂಡಿದೆ.