ಟೆಹರಾನ್: ಉಕ್ರೇನಿಯನ್ ವಿಮಾನ ಪತನದ ಹೊಣೆ ಹೊತ್ತುಕೊಂಡ ಬೆನ್ನಲ್ಲೇ ದುರಂತದಲ್ಲಿ ಸಾವಿಗೀಡಾದ ಕುಟುಂಬದವರ ಬಳಿ ಇರಾನ್ ಕ್ಷಮೆಯಾಚಿಸಿ, ಸಂತಾಪ ಸೂಚಿಸಿದೆ.
ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಇರಾನ್ ವಿದೇಶಾಂಗ ಸಚಿವ ಜಾವದ್ ಜರೀಫ್, ಇದೊಂದು ದುಃಖದ ದಿನವಾಗಿದೆ. ನಮ್ಮ ಸೇನಾಪಡೆ ತನಿಖೆಯ ಪ್ರಾಥಮಿಕ ನಿರ್ಣಯ ಪ್ರಕಾರ ಇದೊಂದು ಮಾನವ ಪ್ರಮಾದವಾಗಿದ್ದು, ಅಮೆರಿಕ ಸೃಷ್ಟಿ ಮಾಡಿದ ಬಿಕ್ಕಟ್ಟಿನ ಕಾರಣ ಈ ಘನಘೋರ ವಿಪತ್ತು ಸಂಭವಿಸಿದೆ ಎಂದು ಆರೋಪಿಸಿದ್ದಾರೆ.
ಬಳಿಕ ಕ್ಷಮೆಯಾಚಿಸಿರುವ ಜರೀಫ್, ಈ ಘಟನೆಯಿಂದ ಪಶ್ಚಾತಾಪ ಕಾಡುತ್ತಿದೆ. ವಿಮಾನ ದರಂತದಲ್ಲಿ ಮೃತಪಟ್ಟ ನಮ್ಮವರಿಗೂ ಹಾಗೂ ಇತರೆ ದೇಶದ ಸಂತ್ರಸ್ತ ಕುಟುಂಬಗಳ ಬಳಿ ಕ್ಷಮೆಯಾಚಿಸಿ, ಸಂತಾಪ ಸೂಚಿಸುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್)