ಟಾಕ್ಸಿಕ್' ಸಿನಿಮಾ ಸೋಲು ಹಾಗೂ ಟ್ರೋಲ್‌ಗಳ ಬಗ್ಗೆ ಮಾತನಾಡಿದ ನಟಿ ಕಿಯಾರಾ ಅಡ್ವಾಣಿ 
ನ್ಯೂಸ್

ಯಶ್ ಜತೆಗಿನ ಇಂಟಿಮೇಟ್ ಸೀನ್ಸ್‌: ಪತಿ ಸಿದ್ದಾರ್ಥ್ ರಿಯಾಕ್ಷನ್ ಹೇಗಿತ್ತು ಗೊತ್ತಾ? ಮೌನ ಮುರಿದ ಟಾಕ್ಸಿಕ್ ಚೆಲುವೆ! | Kiara Toxic movie

Yash Toxic Movie: ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಚಿತ್ರದ 'ತಬಾಹಿ' ಹಾಡಿನಲ್ಲಿನ ಆತ್ಮೀಯ ದೃಶ್ಯಗಳ ಕುರಿತು ಮದುವೆಯಾಗಿ ತಾಯಿಯಾದ ಮೇಲೆ ಇಂತಹ ಪಾತ್ರ ಬೇಕಿತ್ತಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿದ್ದು, ಈ ಎಲ್ಲ ಟೀಕೆಗಳಿಗೆ ನಟಿ ಕಿಯಾರಾ ಅಡ್ವಾಣಿ ಸ್ಪಷ್ಟನೆ ನೀಡಿದ್ದಾರೆ.

'ಕಾಫಿ ವಿತ್ ಕರಣ್' ಶೋನಲ್ಲಿ ಮಾತನಾಡಿದ ಕಿಯಾರಾ, ಆತ್ಮೀಯ ದೃಶ್ಯಗಳ ಬಗ್ಗೆ ಪತಿ ಸಿದ್ದಾರ್ಥ್ ಹೇಗೆ ರಿಯಾಕ್ಟ್ ಮಾಡಬಹುದು ಎಂದು ಜನ ಚರ್ಚಿಸುತ್ತಿದ್ದರು ಎಂದರು. ಆದರೆ ‘ಸಿದ್ದಾರ್ಥ್ ಈ ವಿಷಯದ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ನಾವು ಆ ಬಗ್ಗೆ ಮಾತನಾಡಿಯೂ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ನನ್ನ ನಿರ್ಧಾರಕ್ಕೆ ಸ್ಪಷ್ಟನೆ ಕೊಡುವ ಅಗತ್ಯವಿರಲಿಲ್ಲ

ನನ್ನ ಪಾತ್ರದ ಬಗ್ಗೆ ಯಾರಿಗೂ ಸಮಜಾಯಿಷಿ ನೀಡುವ ಅಗತ್ಯವಿಲ್ಲ ಎಂದ ಕಿಯಾರಾ, ಜನರೇ ನಟಿಯರ ಮೇಲಿನ ತಾರತಮ್ಯವನ್ನು ಪ್ರಶ್ನಿಸಿದ್ದರಿಂದ ತಾನು ಸ್ಪಷ್ಟನೆ ನೀಡುವ ಪ್ರಸಂಗ ಬರಲಿಲ್ಲ ಎಂದರು. ಮದುವೆಯಾದ ನಟರ ವಿಚಾರದಲ್ಲಿ ಮೌನವಹಿಸುವ ಜನರು ನಟಿಯರನ್ನು ಮಾತ್ರ ವೈಯಕ್ತಿಕವಾಗಿ ಪ್ರಶ್ನಿಸುವ ಸಮಾಜದ ತಾರತಮ್ಯದ ಬಗ್ಗೆಯೂ ಶೋನಲ್ಲಿ ಚರ್ಚಿಸಲಾಯಿತು.

ಸಿನಿಮಾ ಸೋಲಿನಿಂದ ಬೇಸರ

ಸೋಶಿಯಲ್ ಮೀಡಿಯಾ ಟ್ರೋಲ್‌ಗಿಂತ ಚಿತ್ರದ ಅಂತಿಮ ಫಲಿತಾಂಶ ತಮಗೆ ಹೆಚ್ಚು ಬೇಸರ ತಂದಿದೆ ಎಂದ ಕಿಯಾರಾ, ಭರ್ಜರಿ ಓಪನಿಂಗ್ ಸಿಕ್ಕರೂ 'ಟಾಕ್ಸಿಕ್' ನಿರೀಕ್ಷೆ ಉಳಿಸಿಕೊಳ್ಳಲಿಲ್ಲ ಎಂದರು. "ಮೊದಲ ದಿನದ ಫಲಿತಾಂಶ ಹೃದಯ ವಿದ್ರಾವಕವಾಗಿತ್ತು, ವೀಕೆಂಡ್‌ನಲ್ಲಿ ತುಂಬಾ ಕುಗ್ಗಿಹೋಗಿದ್ದೆ" ಎಂದು ಬೇಸರ ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಕಿರುಕುಳ ಪ್ರಶ್ನಿಸಿದ ಮಹಿಳೆಯನ್ನು ಲೋಕಲ್ ರೈಲಿನಿಂದ ತಳ್ಳಿದ ಕಾಮುಕ: ಕೈ ಕಳೆದುಕೊಂಡ ಸಂತ್ರಸ್ತೆ | Mumbai local train

ಕೆರಿಯರ್‌ನ ವಿಶೇಷ ಪಾತ್ರ

ಸಿನಿಮಾ ನಿರೀಕ್ಷಿತ ಸಕ್ಸಸ್ ಕಾಣದಿದ್ದರೂ, ವಿಭಿನ್ನ ಪಾತ್ರಕ್ಕಾಗಿ ಕಿಯಾರಾಗೆ ಮೆಚ್ಚುಗೆ ಸಿಕ್ಕಿದೆ. ಕಂಫರ್ಟ್ ಝೋನ್ ಮೀರಿ ನಟಿಸಿದ ಈ ಅನುಭವ ಕೆರಿಯರ್‌ನ ಪ್ರಮುಖ ಭಾಗವಾಗಲಿದೆ ಎಂದಿದ್ದಾರೆ. ಗೀತು ಮೋಹನ್‌ದಾಸ್ ನಿರ್ದೇಶನದ ಗ್ಯಾಂಗ್‌ಸ್ಟರ್ ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ಹಾಗೂ ಕಿಯಾರಾ ನಾದಿಯಾ ಪಾತ್ರದಲ್ಲಿ ನಟಿಸಿದ್ದಾರೆ.