ಕೊನೆಗೂ ಭಾರತದಲ್ಲಿ ಅಶ್ಲೀಲ ಕಂಟೆಂಟ್ಗಳನ್ನು ಬ್ಯಾನ್ ಮಾಡಿದ ಎಕ್ಸ್: ಗ್ರೋಕ್ ಕೊಟ್ಟ ಉತ್ತರ ವೈರಲ್! X Platform
- ವಿಶ್ವದ ನಂಬರ್ 1 ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಒಡೆತನದ ಎಕ್ಸ್ ಪ್ಲಾಟ್‌ಫಾರ್ಮ್
- ತನ್ನ ವೇದಿಕೆಯಲ್ಲಿ ಅಶ್ಲೀಲ ಕಂಟೆಂಟ್ಗಳನ್ನು ನಿಷೇಧಿಸಿದ ಎಕ್ಸ್
- ಕೇಂದ್ರ ಸರ್ಕಾರದ ಸಲಹೆಯನ್ನು ಪಾಲಿಸಿದ ಎಕ್ಸ್ ವೇದಿಕೆ
ನವದೆಹಲಿ: ವಿಶ್ವದ ನಂಬರ್ 1 ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಒಡೆತನದ ಎಕ್ಸ್ ಪ್ಲಾಟ್‌ಫಾರ್ಮ್ ( X Platform ), ಹೊಸ ಐಟಿ ನಿಯಮಗಳಿಗೆ ಅನುಸಾರವಾಗಿ ತನ್ನ ವೇದಿಕೆಯಲ್ಲಿ ಅಶ್ಲೀಲ ಕಂಟೆಂಟ್ಗಳನ್ನು ನಿಷೇಧಿಸುವ ಮೂಲಕ ಕೇಂದ್ರ ಸರ್ಕಾರದ ಸಲಹೆಯನ್ನು ಪಾಲಿಸಿದೆ.
ಅಶ್ಲೀಲ ಕಂಟೆಂಟ್ಗಳನ್ನು ನಿಷೇಧಿಸುವ ಸಂಬಂಧ ಬಳಕೆದಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ, ಎಐ ಚಾಲಿತ ಚಾಟ್‌ಬಾಟ್ ಗ್ರೋಕ್ ಬ್ಯಾನ್ ಮಾಡಿರುವ ಉತ್ತರವನ್ನು ನೀಡಿದೆ.
ಭಾರತದಲ್ಲಿ ವಯಸ್ಕ ಮತ್ತು ಲೈಂಗಿಕ ವಿಷಯವನ್ನು ಬ್ಲಾಕ್ ಮಾಡಲಾಗಿದೆ. ಈ ಒಂದು ಕ್ರಮವು ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಅನುಸರಿಸುತ್ತದೆ. ಇದು ಆನ್‌ಲೈನ್‌ನಲ್ಲಿ ಅಶ್ಲೀಲ ವಸ್ತುಗಳ ಪ್ರಕಟಣೆ ಅಥವಾ ಪ್ರಸರಣವನ್ನು ನಿಷೇಧಿಸುತ್ತದೆ. ಭಾರತದಲ್ಲಿನ ಬಳಕೆದಾರರು ಇನ್ನು ಮುಂದೆ ಅಂತಹ ವಿಷಯವನ್ನು ಎಕ್ಸ್ನಲ್ಲಿ ನೋಡಲು ಸಾಧ್ಯವಾಗುವುದಿಲ್ಲ ಆದರೆ, ಇಂತಹ ಕಂಟೆಂಟ್ಗಳು ಇತರ ದೇಶಗಳಲ್ಲಿ ಗೋಚರಿಸಬಹುದು ಎಂದು ಗ್ರೋಕ್ ಹೇಳಿದೆ.
ಅಂದಹಾಗೆ, ಎಕ್ಸ್ನ ಈ ಕ್ರಮವು ಅನೇಕರಿಂದ ಪ್ರಶಂಸೆಗೆ ಪಾತ್ರವಾದರೆ, ಕೆಲವರು ನೀವು ತಡವಾಗಿ ನಿರ್ಧಾರ ತೆಗೆದುಕೊಂಡಿದ್ದೀರಿ ಎಂದು ಹೇಳಿದ್ದಾರೆ. ಆದರೆ X ಇನ್ನು ಮುಂದೆ ಅಶ್ಲೀಲ ತಾಣವಾಗಿ ಉಳಿಯುತ್ತಿಲ್ಲ ಅನ್ನೋದನ್ನು ನೋಡಿ ಅನೇಕರು ಸಂತೋಷಪಟ್ಟಿದ್ದಾರೆ. ಆದರೆ, ಕೆಲವರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಅದೇನೆಂದರೆ, ಈ ಒಂದು ಕ್ರಮ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಕೃತ್ಯ ಎಂದಿದ್ದಾರೆ. ಇನ್ನು ಕೆಲವರು ಅಶ್ಲೀಲ ಚಿತ್ರಗಳನ್ನು ನಿಷೇಧಿಸುವುದರಿಂದ ಸರ್ಕಾರವು ಭಾವಿಸಿದ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ ಎಂದಿದ್ದಾರೆ, (ಏಜೆನ್ಸೀಸ್).