ರೋಮ್: ವಿಶ್ವ ವಿಖ್ಯಾತ ಇಟಾಲಿಯನ್ ಫ್ಯಾಷನ್ ಡಿಸೈನರ್ ವ್ಯಾಲೆಂಟಿನೊ ಗರವಾನಿಯವರು ತಮ್ಮ 93ನೇ ವಯಸ್ಸಿನಲ್ಲಿ ಸೋಮವಾರ(ಜ. 19) ನಿಧನರಾಗಿದ್ದಾರೆ. ಹೆಂಡತಿ, ಮಕ್ಕಳಿಲ್ಲದ ಅವಋಊ 1.5 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನು ಬಿಟ್ಟು ಹೋಗಿದ್ದು, ಅದರ ವಾರಸುದಾರಿಕೆ ಬಗ್ಗೆ ಕೂತುಹಲ ಮೂಡಿಸಿದೆ.
ಕಳೆದ ಐದು ದಶಕಗಳಿಂದ ಫ್ಯಾಷನ್ ಲೋಕದ ದಿಗ್ಗಜರಾಗಿದ್ದ ಅವರು, 'ವ್ಯಾಲೆಂಟಿನೋ ರೆಡ್' ಎಂಬ ತಮ್ಮದೇ ವಿಶಿಷ್ಟ ಕೆಂಪು ಬಣ್ಣದ ವಿನ್ಯಾಸಗಳ ಮೂಲಕ ವಿಶ್ವದಾದ್ಯಂತ ಗುರುತಿಸಿಕೊಂಡಿದ್ದರು. ಹಾಲಿವುಡ್ ನಟಿಯರಾದ ಎಲಿಜಬೆತ್ ಟೇಲರ್ ಜೂಲಿಯಾ ರಾಬರ್ಟ್ಸ್ ಹಾಗೂ ಬ್ರಿಟನ್ ರಾಜಕುಮಾರಿ ಡಯಾನಾರಂತಹ ಗಣ್ಯರಿಗೆ ವಸ್ತ್ರ ವಿನ್ಯಾಸ ಮಾಡಿದ್ದರು. ಆಧುನಿಕ ಫ್ಯಾಷನ್ ಇತಿಹಾಸದಲ್ಲಿ ಅವರು ತಮ್ಮದೇ ಆದ ಅಳಿಸಲಾಗದ ಛಾಪನ್ನು ಮೂಡಿಸಿದ್ದಾರೆ.
ಹೆಂಡತಿ-ಮಕ್ಕಳಿಲ್ಲದ 1.5 ಬಿಲಿಯನ್ ಡಾಲರ್ ಒಡೆಯ
ವ್ಯಾಲಿಂಟಿನೊ ಗರವಾನಿಯವರಿಗೆ ವೈಯಕ್ತಿಕವಾಗಿ ಅವರಿಗೆ ಯಾರು ಪತ್ನಿ ಮತ್ತು ಮಕ್ಕಳಿಲ್ಲ. ಜೀವನದಲ್ಲಿ ಅವರು ಮದುವೆಯೇ ಆಗಿಲ್ಲ. ಅವರು ಒಮ್ಮೆ ಇಟಾಲಿಯನ್ ನಟಿ ಮರಿಲೋ ಟೋಲೋ ಅವರೊಂದಿಗೆ ನಿಶ್ಚಿತಾರ್ಥವಾಗಿತ್ತು, ಅವಳನ್ನು ನಾನು ಪ್ರೀತಿಸಿದ ಏಕೈಕ ಮಹಿಳೆ ಎಂದು ಹೇಳಿದ್ದರು. ಆದರೆ ಮುಂದೆ ಅವರ ವಿವಾಹ ನಡೆಯಲಿಲ್ಲ ಎನ್ನಲಾಗಿದೆ.
ವ್ಯಾಲಿಂಟಿನೊ ಜೀವನದಲ್ಲಿ ಅತ್ಯಂತ ಮುಖ್ಯ ವ್ಯಕ್ತಿ ಅವರ ಗೆಳೆಯ ಜಿಯಾನ್ಕಾರ್ಲೊ ಗಿಯಾಮೆಟ್ಟಿ. ಅವರ ದೀರ್ಘಕಾಲದ ಜೀವನ ಸಹಚರ ಮತ್ತು ಬಿಜಿನೆಸ್ ಪಾರ್ಟನರ್. 1960ರಿಂದ 2026ರವರೆಗೆ ಸುಮಾರು 65 ವರ್ಷಗಳ ಕಾಲ ಇಬ್ಬರೂ ಒಟ್ಟಿಗೆ ಇದ್ದರು. ಜಿಯಾನ್ಕಾರ್ಲೊ ಗಿಯಾಮೆಟ್ಟಿ ಅವರು ವ್ಯಾಲಿಂಟಿನೊ ಬ್ರ್ಯಾಂಡ್‌ನ ಸಹ-ಸ್ಥಾಪಕರಾಗಿದ್ದಾರೆ.
ಸೆಲೆಬ್ರಿಟಿ ನಿವ್ವಳ ಮೌಲ್ಯದ ಪ್ರಕಾರ, ವ್ಯಾಲೆಂಟಿನೋ ಗರವಾನಿ ಅವರ ಆಸ್ತಿ ಮೌಲ್ಯವು 2026ರ ವೇಳೆಗೆ 1.5 ಬಿಲಿಯನ್ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ. ಇದು ಅವರ ದಶಕಗಳ ಸ್ಮಾರ್ಟ್ ವ್ಯವಹಾರ ಮತ್ತು ವ್ಯಾಲೆಂಟಿನೋ ಹೆಸರಿನ ಬ್ರಾಂಡ್ಗಳನ್ನು ಒಳಗೊಂಡಿದೆ.
ಜೊತೆಗೆ ಅವರ ದೀರ್ಘಕಾಲದ ಪಾಲುದಾರ ಜಿಯಾನ್ಕಾರ್ಲೊ ಗಿಯಾಮೆಟ್ಟಿ ಅವರ ರಿಯಲ್ ಎಸ್ಟೇಟ್ ಪೋರ್ಟ್‌ಫೋಲಿಯೊದಲ್ಲೂ ಪಾಲು ಹೊಂದಿದೆ. ಅವರ ಆಸ್ತಿಗಳಲ್ಲಿ ರೋಮ್, ಲಂಡನ್, ಪ್ಯಾರಿಸ್, ಮ್ಯಾನ್‌ಹ್ಯಾಟನ್, ಸ್ವಿಟ್ಜರ್‌ಲ್ಯಾಂಡ್‌ನಲ್ಲಿರುವ ಐಷಾರಾಮಿ ಮನೆಗಳು ಮತ್ತು ಪ್ಯಾರಿಸ್‌ನ ಹೊರಗಿನ ಪ್ರಸಿದ್ಧ ಅರಮನೆ ಸೇರಿವೆ. ಈ ಆಸ್ತಿಗಳು ಮಾತ್ರ ನೂರಾರು ಮಿಲಿಯನ್ ಡಾಲರ್‌ಗಳ ಮೌಲ್ಯದ್ದಾಗಿವೆ.
ಅಪಾರ ಸಂಪತ್ತಿನ ಹೊರತಾಗಿಯೂ ವ್ಯಾಲೆಂಟಿನೋ ಗರವಾನಿ ತನ್ನದೇ ಆದ ರೀತಿಯಲ್ಲಿ ಬದುಕುವುದಕ್ಕೆ ಹೆಸರುವಾಸಿಯಾಗಿದ್ದರು. ಅವರು ಆಗಾಗ್ಗೆ ತಮ್ಮ ಮನೆಗಳ ನಡುವೆ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸುತ್ತಿದ್ದರು. ಜಾಗತಿಕ ಗಣ್ಯರು ಭಾಗವಹಿಸುವ ವಿಶೇಷ ಪಾರ್ಟಿಗಳನ್ನು ಆಯೋಜಿಸುತ್ತಿದ್ದರು ಎನ್ನಲಾಗಿದೆ.
ಬಿಲಿಯನ್ ಆಸ್ತಿ ವಾರಿಸುದಾರಿಕೆ
ವ್ಯಾಲಿಂಟಿನೊ ಅವರಿಗೆ ಮಕ್ಕಳಿಲ್ಲದ ಕಾರಣ, ಆಸ್ತಿಯನ್ನು ದೀರ್ಘಕಾಲದ ಪಾಲುದಾರ ಜಿಯಾನ್ಕಾರ್ಲೊ ಗಿಯಾಮೆಟ್ಟಿ ಜೊತೆಗೆ ಪ್ರೈವೇಟ್ ಟ್ರಸ್ಟ್‌ಗಳ ಮೂಲಕ ವ್ಯವಸ್ಥೆಗೊಳಿಸಲಾಗಿದೆ. ಇಟಾಲಿಯನ್ ಇನ್‌ಹೆರಿಟೆನ್ಸ್ ಕಾನೂನುಗಳು ಮತ್ತು ಕ್ರಾಸ್-ಬಾರ್ಡರ್ ಪ್ಲಾನಿಂಗ್ ಮೂಲಕ ಆಸ್ತಿಯ ಚೌಕಟ್ಟನ್ನು ರೂಪಿಸಲಾಗಿದೆ ಎನ್ನಲಾಗಿದೆ. ಇದರಿಂದ ಆಸ್ತಿಯು ತುಂಡಾಗದೆ, ವಿವಾದಗಳಿಗೆ ಒಳಗಾಗದೆ, ಸಾಂಸ್ಕೃತಿಕ ಮತ್ತು ಆರ್ಥಿಕ ಲೆಗಸಿಯನ್ನು ಉಳಿಸಿಕೊಳ್ಳಬಹುದು ಎನ್ನಲಾಗಿದೆ (ಏಜೆನ್ಸೀಸ್).