ಚೀನಾ: ( soldier) 2008 ರ ವೆಂಚುವಾನ್ ಭೂಕಂಪದ ಸಮಯದಲ್ಲಿ ಅವಶೇಷಗಳಿಂದ ರಕ್ಷಿಸಲ್ಪಟ್ಟ 27 ವರ್ಷದ ಚೀನಾದ ಯುವತಿಯೊಬ್ಬಳು (Chinese woman) ಈಗ ತನ್ನನ್ನು ರಕ್ಷಿಸಿದ ಸೈನಿಕನನ್ನೇ ಮದುವೆಯಾಗಿದ್ದಾಳೆ.
ಲಿಯಾಂಗ್ ಝಿಬಿನ್ ಮತ್ತು ಲಿಯು ಕ್ಷಿಮೆಯಿ ನವೆಂಬರ್ 29 ರಂದು ಹುನಾನ್ ಪ್ರಾಂತ್ಯದ ಚಾಂಗ್ಯಾದಲ್ಲಿ ಐದನೇ ವಾರ್ಷಿಕ ಹಾನ್ ಶೈಲಿಯ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಿವಾಹವಾದರು, ನೈಸರ್ಗಿಕ ವಿಕೋಪದ ಸಮಯದಲ್ಲಿ ಅವರು ಮೊದಲ ಬಾರಿಗೆ ಭೇಟಿಯಾಗಿದ್ದರು. 17 ವರ್ಷಗಳ ನಂತರ ಅದೇ ಯೋಧನನ್ನು ಯುವತಿ ವರಿಸಿದ್ದಾಳೆ.
ಲಿಯಾಂಗ್ ಝಿಬಿನ್ ಮತ್ತು ಲಿಯು ಕ್ಸಿಮೆಯ್ 15 ವರ್ಷಗಳ ಹಿಂದೆ ಅಸಾಧಾರಣ ಸಂದರ್ಭಗಳಲ್ಲಿ ಪ್ರಾರಂಭವಾದ ಪ್ರೇಮಕಥೆಯನ್ನು ಹಂಚಿಕೊಂಡರು.
2008 ರಲ್ಲಿ, ವೆಂಚುವಾನ್ ಭೂಕಂಪ ಸಂಭವಿಸಿದಾಗ, 22 ವರ್ಷದ ಲಿಯಾಂಗ್ ತುರ್ತು ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾದ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದ. ಆಗ ಕೇವಲ ಹತ್ತು ವರ್ಷದ ಲಿಯು ಕುಸಿದ ಕಟ್ಟಡದ ಎರಡನೇ ಮಹಡಿಯಲ್ಲಿ ಉಕ್ಕಿನ ಸರಳುಗಳು ಮತ್ತು ಇಟ್ಟಿಗೆಗಳ ಕೆಳಗೆ ಸಿಲುಕಿಕೊಂಡಿದ್ದಳು. ಲಿಯಾಂಗ್ ಮತ್ತು ಅವನ ತಂಡವು ನಾಲ್ಕು ಗಂಟೆಗಳ ಕಾಲ ದಣಿವರಿಯಿಲ್ಲದೆ ಅಗೆದು ಅವಳನ್ನು ರಕ್ಷಿಸಿದ್ದರು. ಅವಳ ಚೇತರಿಕೆಯ ನಂತರ, ಲಿಯು ಮತ್ತು ಅವಳ ಕುಟುಂಬವು ಹುನಾನ್‌ನ ಝುಝೌಗೆ ಹಿಂತಿರುಗಿತು. ಹಲವು ವರ್ಷಗಳ ಕಾಲ, ಅವನ ಮುಖ ಹೇಗಿತ್ತು ಎಂದು ಲಿಯು ಕ್ಸಿಮೆಯ್ ( ಆಕೆಗೆ) ನೆನಪಿರಲಿಲ್ಲ.
2020 ರಲ್ಲಿ 22 ವರ್ಷದ ಲಿಯು ತನ್ನ ಹೆತ್ತವರೊಂದಿಗೆ ಚಾಂಗ್ಶಾದಲ್ಲಿ ಊಟ ಮಾಡುತ್ತಿದ್ದಾಗ ಆಕೆಯ ತಾಯಿ ಹತ್ತಿರದ ಮೇಜಿನ ಬಳಿ ಒಬ್ಬ ವ್ಯಕ್ತಿಯನ್ನು ಗಮನಿಸಿ, ಒಮ್ಮೆ ತನ್ನ ಜೀವವನ್ನು ಉಳಿಸಿದ ಸೈನಿಕನಂತೆಯೇ ಕಾಣುತ್ತಿದ್ದಾನೆ ಎಂದು ಹೋಗಿ ಕೇಳಿದಾಗ ಆತನೇ ಲಿಯಾಂಗ್ ಎನ್ನುವುದು ಖಚಿತವಾಗಿದೆ. ಲಿಯು ಅವನೊಂದಿಗೆ ಚಾಟ್ ಮಾಡಲು ಪ್ರಾರಂಭಿಸಿದಳು. ನಂತರ ಇಬ್ಬರ ಸ್ನೇಹ ಪ್ರೀತಿಯಾಗಿದೆ. ಇದೀಗ ಈ ಜೋಡಿ ಮದುವೆ ಹಂತಕ್ಕೆ ಬಂದು ನಿಂತಿದೆ.
ತಮ್ಮ ಪ್ರಯಾಣವನ್ನು ನೆನಪಿಸಿಕೊಳ್ಳುತ್ತಾ ಲಿಯಾಂಗ್ ಹೇಳಿದರು, "ಆಗ ಜನರನ್ನು ಉಳಿಸುವುದು ನನ್ನ ಕರ್ತವ್ಯವಾಗಿತ್ತು, ಆದರೆ ಈಗ ನಾನು ಅವಳನ್ನು ನಿಜವಾಗಿಯೂ ಪ್ರೀತಿಸುತ್ತೇನೆ. ಇವು ಎರಡು ವಿಭಿನ್ನ ವಿಷಯಗಳು. ವಿಧಿ ನಿಜವಾಗಿಯೂ ಅದ್ಭುತವಾಗಿದೆ. ಹನ್ನೆರಡು ವರ್ಷಗಳ ಹಿಂದೆ, ನಾನು ಅವಳನ್ನು ಉಳಿಸಿದೆ. ಹನ್ನೆರಡು ವರ್ಷಗಳ ನಂತರ, ಅವಳು ನನ್ನ ಜೀವನದಲ್ಲಿ ಬೆಳಕಾದಳು." ಎಂದಿದ್ದಾರೆ.