Hotpot Danger AI ಚಿತ್ರ 
ವಿದೇಶ

ಬಿಸಿ ಆಹಾರ ತಿಂದ ತಕ್ಷಣ ತಣ್ಣೀರು ಕುಡಿದ ಮಹಿಳೆ! ಮುಂದೆ ಆಗಿದ್ದೇ ರೋಚಕ.. ವೈದ್ಯರನ್ನೇ ಬೆಚ್ಚಿಬೀಳಿಸಿದ ಘಟನೆ.. Hotpot Danger

ಚೀನಾ: ಬಿಸಿ ಆಹಾರವನ್ನು ತಿನ್ನುವುದು ಸಾಮಾನ್ಯವಾಗಿ ಆರೋಗ್ಯಕರ ಮತ್ತು ತೃಪ್ತಿಕರ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಆತುರದಲ್ಲಿ ತುಂಬಾ ಬಿಸಿಯಾದ ಆಹಾರವನ್ನು ತಿನ್ನುವುದು ಕೆಲವೊಮ್ಮೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬುದು. ಆದಾಗ್ಯೂ, ಚೀನಾದ ಮಹಿಳೆಯೊಬ್ಬಳು ಬಿಸಿ ಇರುವ ಹಾಟ್​ಪಾಟ್​ (Hotpot Danger) ತಿಂದ ನಂತರ ಅವರ ಅನ್ನನಾಳದಲ್ಲಿ 8 ಸೆಂಟಿ ಮೀಟರ್​ಗಳಷ್ಟು ಅಲ್ಸರ್​ ಆಗಿದೆ ಎಂದು ವರದಿಯಾಗಿದೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ , ಹುನಾನ್ ಪ್ರಾಂತ್ಯದ ಮಹಿಳೆ ತನ್ನ ಸ್ನೇಹಿತರೊಂದಿಗೆ ಊಟಕ್ಕೆ ತೆರಳಿದ್ದಾಗ ಬಿಸಿಯಾದ ಹಾಟ್​ಪಾಟ್​ನ್ನು ಸೇವಿಸಿದ್ದಾಳೆ. ಊಟವಾದ ನಂತರ ಅವಳಿಗೆ ಎದೆ ಮತ್ತು ಗಂಟಲಲ್ಲಿ ತೀವ್ರ ನೋವು ಕಾಣಿಸಿಕೊಳ್ಳಲು ಪ್ರಾರಂಭಿಸಿದೆ. ಆಗ ಇದು ಅಸ್ವಸ್ಥತೆ ಎಂದು ನಂಬಿ, ನೋವು ಕಡಿಮೆ ಮಾಡಲೆಂದು ಅವಳಿಗೆ ಐಸ್​ ನೀರನ್ನು ಕುಡಿಸಿದ್ದಾರೆ.
ಆದರೆ, ರಾತ್ರಿಯಿಡೀ ಆಕೆಯ ಸ್ಥಿತಿ ಹದಗೆಟ್ಟಿತು. ಮರುದಿನ ಆಕೆಗೆ ನೀರು ಕೂಡಾ ನುಂಗಲು ಕಷ್ಟವಾದುದ್ದರಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದಾಗ್ಯೂ, ವೈದ್ಯರು ಎಂಡೋಸ್ಕೋಪಿ ನಡೆಸಿ ಆಕೆಯ ಅನ್ನನಾಳದಲ್ಲಿ 8 ಸೆಂ.ಮೀ. ಉದ್ದದ ಹುಣ್ಣನ್ನು ಪತ್ತೆಹಚ್ಚಿದರು. ಇದು ಆಹಾರ ಕೊಳವೆಯ ಸೂಮಾರು ಮೂರನೇ ಒಂದು ಭಾಗದಷ್ಟು ಉದ್ದವಾಗಿರುವುದನ್ನು ಕಂಡುಕೊಂಡರು.
ಅನೇಕ ಜನರು ಗಂಟಲು ಹೆಚ್ಚಿನ ತಾಪಮಾನವನ್ನು ತಡೆದುಕೊಳ್ಳಬಲ್ಲದು ಎಂದು ಭಾವಿಸುತ್ತಾರೆ. ಆದರೆ, ಅನ್ನನಾಳದ ಒಳಪದರವು ಸುಮಾರು 50-60 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಮಾತ್ರ ತಡೆದುಕೊಳ್ಳಬಲ್ಲದು ಎಂದು ವೈದ್ಯರು ಸೂಚಿಸುತ್ತಾರೆ. ಹೊಸದಾಗಿ ಬೇಯಿಸಿದ ಹಾಟ್‌ಪಾಟ್ ವಸ್ತುಗಳು 80 ರಿಂದ 90 ಡಿಗ್ರಿ ಸೆಲ್ಸಿಯಸ್ ನಡುವಿನ ತಾಪಮಾನವನ್ನು ತಲುಪಬಹುದು. ಈ ರೀತಿಯ ಆಹಾರಗಳನ್ನು ಸೇವಿಸುವುದರಿಂದ ದೇಹದ ಒಳಭಾಗದಲ್ಲಿ ಸುಟ್ಟಗಾಯಗಳಾಗಬಹುದು.
ತುಂಬಾ ಬಿಸಿಯಾದ ಆಹಾರವನ್ನು ಸೇವಿಸಿದ ನಂತರ ಇದ್ದಕ್ಕಿದ್ದಂತೆ ಐಸ್ ಅಥವಾ ತಣ್ಣನೆಯ ನೀರನ್ನು ಸೇವಿಸುವುದರಿಂದ ಪರಿಹಾರ ನೀಡುವ ಬದಲು ಹಾನಿಗೊಳಗಾದ ಅಂಗಾಂಶಗಳನ್ನು ಮತ್ತಷ್ಟು ಕೆರಳಿಸಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಬಿಸಿ ಬಿಸಿ 'ಹಾಟ್‌ಪಾಟ್' ಪ್ರೀತಿ: ಚೀನಾದಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಭೀತಿ!

ಎಸ್​ಸಿಪಿಎಂ ಪ್ರಕಾರ , ಹಾಟ್‌ಪಾಟ್ ಎಂಬುದು ಚೀನಾದಾದ್ಯಂತ ಅತ್ಯಂತ ಜನಪ್ರಿಯ ಆಹಾರಗಳಲ್ಲಿ ಒಂದಾಗಿದೆ. ಇದನ್ನು ಸಿಚುವಾನ್ ಮತ್ತು ಚಾಂಗ್‌ಕಿಂಗ್ ಶೈಲಿಯ ಹಾಟ್‌ಪಾಟ್‌ಗಳು ಕೇವಲ ಆಹಾರವಲ್ಲ, ಅದೊಂದು ಅನುಭವ. ಅಲ್ಲಿ ಬಳಸುವ ವಿಶೇಷ ಮೆಣಸಿನಕಾಯಿಗಳು ನಾಲಿಗೆಯನ್ನು ಮರಗಟ್ಟಿಸುವ ಮತ್ತು ಸುಡುವಂತಹ ವಿಶಿಷ್ಟ ಸಂವೇದನೆಯನ್ನು ನೀಡುತ್ತವೆ. ಇದು ಅಲ್ಲಿನ ಜನರಿಗೆ ಅಪಾರ ಆನಂದವನ್ನು ನೀಡುತ್ತದೆ.
ವೈದ್ಯರು ಸೂಚಿಸುವಂತೆ, ಅತಿ ಹೆಚ್ಚಿನ ತಾಪಮಾನದಲ್ಲಿ ಸೇವಿಸಿದಾಗ ಆಹಾರವು ಉತ್ತಮವಾಗಿರುವುದಿಲ್ಲ ಎಂಬ ಅರಿವು ಬೆಳೆದಿದೆ. ವಾಸ್ತವವಾಗಿ, ವಿಶ್ವ ಆರೋಗ್ಯ ಸಂಸ್ಥೆಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯು 65 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ಪಾನೀಯಗಳನ್ನು ಮನುಷ್ಯರು ಸೇವಿಸುವುದರಿಂದ ಕ್ಯಾನ್ಸರ್​ ಕಾರಕ ಎಂದು ಹೇಳಿದ್ದಾರೆ (ಏಜೆನ್ಸೀಸ್).