Singapore chewing gum ban
- ಸಿಂಗಾಪುರದಲ್ಲಿ ಚ್ಯೂಯಿಂಗ್ ಗಮ್ ತಿನ್ನೋದು ಬ್ಯಾನ್ ಮಾಡಿದ್ದು ಯಾಕೆ ಗೊತ್ತಾ?
- ವೈದ್ಯರ ಅನುಮತಿ ಇಲ್ಲದೆ ಚೂಯಿಂಗ್ ಗಮ್ ತಿನ್ನುವುದು ಅಪರಾಧ, ಜೈಲೇ ಗತಿ
- ಮೆಟ್ರೋ ರೈಲು, ರಸ್ತೆಯಲ್ಲಿ ಚೂಯಿಂಗ್ ಗಮ್ ಅಂಟಿಸುವುದನ್ನು ತಡೆಯಲು ಈ ನಿರ್ಧಾರ
Singapore chewing gum ban: ಜಗತ್ತಿನಲ್ಲಿ ಮನುಷ್ಯರಿರುವ ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಕಾನೂನುಗಳಿವೆ. ಅದರಂತೆ ಭಾರತದಲ್ಲಿ ಯಾವುದೇ ಚಿಂತೆ ಇಲ್ಲದೆ ಸಿಗರೇಟ್ ಸೇದಿದ ನಂತರ, ಟೈಂಪಾಸ್ಗಾಗಿ, ಪ್ರಯಾಣದ ಸಮಯದಲ್ಲಿ, ನಿದ್ದೆ ಬಂದಾಗ ತಿನ್ನುವ ಚೂಯಿಂಗ್ ಗಮ್ ಸಿಂಗಾಪುರ್ನಲ್ಲಿ ನಿಷೇಧ. ಅಕಸ್ಮಾತ್ ನಿಯಮ ಮೀರಿ ತಿಂದರೆ ಲಕ್ಷ ಲಕ್ಷ ದಂಡ ಪಾವತಿ ಮಾಡಬೇಕಾಗಿರುವುದು ಗ್ಯಾರಂಟಿ. ಈ ದೇಶದಲ್ಲಿ ಈ ಚ್ಯೂಯಿಂಗ್ ಗಮ್ ನಿಷೇಧ ಯಾಕೆ ಅನ್ನೋದನ್ನು ತಿಳಿದುಕೊಳ್ಳೋಣ.
ಸಿಂಗಾಪುರದಲ್ಲಿ ನೀವು ಚ್ಯೂಯಿಂಗ್ ಗಮ್ ಅನ್ನು ವೈದ್ಯರ ಪ್ರಿಸ್ಕ್ರಿಪ್ಶನ್ ಇಲ್ಲದೆ ತಿಂದರೆ, ಬಲೂನ್ನಂತೆ ಬುಡ್ಡೆ ಬಿಟ್ಟರೆ, ಅಲ್ಲಲ್ಲಿ ಮೇಜಿನ ಕೆಳಗೆ ಅಂಟಿಸಿದರೆ ಜೈಲು ಶಿಕ್ಷೆ ಮತ್ತು ಭಾರಿ ದಂಡ ಕಟ್ಟಬೇಕಾಗುವುದು ಗ್ಯಾರಂಟಿ. ಹೌದು ಇಲ್ಲಿನ ಸರ್ಕಾರ ನಗರದ ಅಂದವನ್ನು ಕಾಪಾಡಿಕೊಳ್ಳಲು 1992ರಲ್ಲಿ ಈ ಕಾನೂನನ್ನು ಜಾರಿ ಮಾಡಿತ್ತು.
ನಿಷೇಧಕ್ಕೆ ಕಾರಣ ಏನು?
1987 ರಲ್ಲಿ ಸಿಂಗಾಪುರವು ಬಿಲಿಯನ್ ಡಾಲರ್ ವೆಚ್ಚದಲ್ಲಿ ಅತ್ಯಾಧುನಿಕ ಮಾಸ್ ರೇಪಿಡ್ ಟ್ರಾನ್ಸಿಟ್ ರೈಲು ವ್ಯವಸ್ಥೆಯನ್ನು ಪ್ರಾರಂಭಿಸಿತು. ಆದರೆ, ದುಷ್ಕರ್ಮಿಗಳು ಅಗಿದ ಚೂಯಿಂಗ್ ಗಮ್‌ಗಳನ್ನು ರೈಲಿನ ಸ್ವಯಂಚಾಲಿತ ಬಾಗಿಲುಗಳ ಸೆನ್ಸರ್‌ಗಳ ಮೇಲೆ ಅಂಟಿಸಲು ಪ್ರಾರಂಭಿಸಿದರು. ಇದರಿಂದಾಗಿ ಬಾಗಿಲುಗಳು ಸರಿಯಾಗಿ ಮುಚ್ಚದೆ, ರೈಲು ಸಂಚಾರಕ್ಕೆ ಭಾರಿ ಅಡ್ಡಿಯುಂಟಾಯಿತು ಮತ್ತು ರೈಲುಗಳು ಮಧ್ಯದಲ್ಲೇ ನಿಲ್ಲುವಂತಾಯಿತು. ಇದು ಸರ್ಕಾರದ ತಾಳ್ಮೆ ಕೆಡಿಸಿತು.
ಸ್ವಚ್ಛತೆ ಕಾಪಾಡಿಕೊಳ್ಳಲು ಈ ಕಾನೂನು ಜಾರಿ
ಸಿಂಗಾಪುರದ ಸರ್ಕಾರಿ ಆಸ್ತಿಗಳಿಗೆ ಹಾನಿ ಮಾಡುವುದು, ಪ್ರವಾಸಿ ಸ್ಥಳದಲ್ಲಿ ಗಲೀಜು ಮಾಡಿ ನಗರದ ಅಂದವನ್ನು ಹಾನಿ ಮಾಡುವುದು. ರಸ್ತೆ ಹಾಗೂ ಪಾದಾಚಾರಿ ಮಾರ್ಗದಲ್ಲಿ, ಮೆಟ್ರೋ ರೈಲುಗಳ ಸೀಟಿನಲ್ಲಿ ಕುಳಿತಾಗ ಪ್ರವಾಸಿಗರು ಕೊಳಕು ಮಾಡುವುದನ್ನು ಅಥವಾ ತಿಂದು ಎಸೆಯುವದನ್ನು ಕಡಿಮೆ ಮಾಡಲು ಇಲ್ಲಿನ ಸರ್ಕಾರಗಳು ಈ ಕಾನೂನನ್ನು ಪಾಲನೆ ಮಾಡುತ್ತಾ ಬರುತ್ತಿದೆ ಎನ್ನಲಾಗಿದೆ.
ದಂತ ಚಿಕಿತ್ಸೆಗೆ ಮಾತ್ರ ಬಕೆ ಮಾಡಬೇಕು
ಸಿಂಗಾಪುರದಲ್ಲಿ ಚ್ಯೂಯಿಂಗ್ ಗಮ್ ತಿನ್ನುವುದು ನಿಷೇಧ. ಆದರೆ ಒಂದು ವಿಚಾರಕ್ಕೆ ಮಾತ್ರ ಎಕ್ಸ್ಕ್ಯೂಸ್ ಕೊಡಲಾಗಿದೆ.ಅಮೆರಿಕದೊಂದಿಗೆ ಮುಕ್ತ ವ್ಯಾಪಾರವನ್ನು ಒಪ್ಪಿಕೊಂಡ ನಂತರ 2004ರಲ್ಲಿ ಕಾನೂನನ್ನು ಸಡಲಿಸಲಾಯಿತು.
ಅದೇನೆಂದರೆ, ದಂತ ಚಿಕಿತ್ಸೆಗಾಗಿ. ಹಲ್ಲಿನ ಸೋಂಕು ಅಥವಾ ಹಲ್ಲಿಗೆ ಸಮಸ್ಯೆಯಾದಾಗ ವೈದ್ಯರ ಸಲಹೆ ಮೇರೆಗೆ ಚ್ಯೂಯಿಂಗ್ ಗಮ್ ಬಳಕೆ ಮಾಡಬಹುದು. ಇದಕ್ಕೆ ಪರವಾನಾಗಿ ಪಡೆದ ನುರಿತ ವೈದ್ಯರ ಸಲಹೆ ಹಾಗೂ ಪ್ರಿಸ್ಕ್ರಿಪ್ಶನ್ ಇದ್ದರೆ ಮಾತ್ರ ಅಂಗಡಿಗಳಲ್ಲಿ ಚ್ಯೂಯಿಂಗ್ ಗಮ್ ಖರೀದಿ ಮಾಡಬಹುದಾಗಿದೆ.
ಕಠಿಣ ಕಾನೂನು ಕ್ರಮ
ಸಿಂಗಾಪುರದಲ್ಲಿ ಪ್ರತಿ ರಸ್ತೆ ಗಲ್ಲಿಗಲ್ಲಿಯೂ ಸ್ವಚ್ಛತೆಯಿಂದ ಕೂಡಿರುತ್ತದೆ. ಇದಕ್ಕೆ ಕಾರಣ ಅಲ್ಲಿನ ಸರ್ಕಾರ ಹೇರಿರುವ ಕಠಿಣ ಕಾನೂನು ನಿಯಮ. ಸಿಂಗಾಪುರದಲ್ಲಿ ಭಾರತದಲ್ಲಿ ಬಳಸಿದ ಕಾಗದ ಎಸೆಯಲು ಸಾಧ್ಯವಿಲ್ಲ. ಅಕಸ್ಮಾತ್ ಎಸೆದ ಕಾಗದವನ್ನು ಹೇಗೆಂದರೆ ಹಾಗೆ ಎಸೆದರೆ ದಂಡ ಕಟ್ಟ ಬೇಕಾಗುತ್ತದೆ, (ಏಜೆನ್ಸೀಸ್).