ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಮೇಲೆ ಗುಂಡಿನ ದಾಳಿ 
ವಿದೇಶ

ಟ್ರಂಪ್​ ಮೇಲಿನ ಗುಂಡಿನ ದಾಳಿಯಲ್ಲಿ ಅತಿಥಿಗಳಿಂದ ಇದೆಂಥಾ ಕೆಲಸ? ನೆಟ್ಟಿಗರಿಂದ ಛೀಮಾರಿ! ವಿಡಿಯೋ ವೈರಲ್​

ಪ್ರಮುಖ ಮುಖ್ಯಾಂಶಗಳು

  • ಶ್ವೇತಭವನದಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಟ್ರಂಪ್ ಮೇಲೆ ಗುಂಡಿನ ದಾಳಿ
  • ಅಮೆರಿಕ ಅಧ್ಯಕ್ಷನ ಕೊಲೆಗೆ ಯತ್ನಿಸಿದ ಆರೋಪಿ ಥಾಮಸ್​ ಸೆರೆ
  • ಸಮಾರಂಭದಲ್ಲಿ ನಡೆದ ಗುಂಡಿನ ದಾಳಿಯ ಸಂದರ್ಭದಲ್ಲಿ ಅತಿಥಿಗಳ ನಡೆಗೆ ಹಲವರ ಛೀಮಾರಿ
ವಾಷಿಂಗ್ಟನ್: ಶ್ವೇತಭವನದ ಪತ್ರಿಕಾ ಔತಣಕೂಟದಲ್ಲಿ ಭಾಗಿಯಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರನ್ನು ಮುಗಿಸಲು ಹಾರಿಸಿದ ಗುಂಡಿನ ದಾಳಿ ಘಟನೆ ಸದ್ಯ ಜಾಗತಿಕವಾಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಟ್ರಂಪ್​ರನ್ನು ಮುಗಿಸಲು ಹಾಕಿಕೊಂಡಿದ್ದ ಸ್ಕೆಚ್​, ಕಡೆಗೂ ವಿಫಲಗೊಂಡಿದ್ದು, ಅಮೆರಿಕ ಸೇನೆಯನ್ನು ಹೈಅಲರ್ಟ್​ ಆಗಿರುವಂತೆ ಮಾಡಿದೆ.
ಗುಂಡಿನ ದಾಳಿಯಲ್ಲಿ ಪವಾಡದಂತೆ ಸಾವಿನಿಂದ ಪಾರಾದ ಟ್ರಂಪ್​, ಸ್ಥಳದಿಂದ ಕೆಲವೇ ನಿಮಿಷಗಳಲ್ಲಿ ಎಸ್ಕೇಪ್​ ಆದರು. ಆದರೆ, ಅದೇ ಔತಣಕೂಟಕ್ಕೆ ಬಂದಿದ್ದ ಅತಿಥಿಗಳು ಮಾಡಿದ ನಾಚಿಕೆಗೇಡಿನ ಕೆಲಸ ಸದ್ಯ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಈಗ ಇಡೀ ಜಗತ್ತೇ ನೋಡಿ ಛೀಮಾರಿ ಹಾಕಿದೆ.
ಟ್ರಂಪ್​ರನ್ನು ಮುಗಿಸಲು ಗುಂಡು ಹಾರಿಸಿದ ಆರೋಪಿ ಥಾಮಸ್​ನನ್ನು ಸದ್ಯ ವಶಕ್ಕೆ ಪಡೆದಿರುವ ಅಮೆರಿಕ ಸೇನೆ, ಮುಂದೆ ಏನು ಮಾಡಬೇಕು ಎಂಬುದಕ್ಕೆ ಟ್ರಂಪ್​ರ ಆದೇಶಕ್ಕೆ ಕಾಯುತ್ತಿದ್ದಾರೆ. ಘಟನೆಯಲ್ಲಿ ಯಾರಿಗೂ ಪ್ರಾಣಹಾನಿ ಅಥವಾ ಗಾಯಗಳು ಸಂಭವಿಸಿಲ್ಲ. ಅದೃಷ್ಟವಶಾತ್​ ಎಲ್ಲರೂ ಬಚಾವ್ ಆಗಿದ್ದಾರೆ. ಸ್ಥಳದಿಂದ ಎಲ್ಲರೂ ಕಾಲ್ಕೀಳುವ ವೇಳೆ ಕಾಯ್ರಕ್ರಮಕ್ಕೆ ಆಗಮಿಸಿದ್ದ ಕೆಲ ಆತಿಥಿಗಳು, ಟೇಬಲ್​ ಮೇಲಿದ್ದ ಮದ್ಯದ ಬಾಟಲಿಗಳನ್ನು ಎತ್ತುಕೊಂಡು ಹೋಗಿರುವುದು ದೃಶ್ಯದಲ್ಲಿ ಸೆರೆಯಾಗಿದೆ.
ದಾಳಿಕೋರರ ಫೈರಿಂಗ್​ನಿಂದ ಎಲ್ಲರೂ ದಿಕ್ಕಾಪಾಲಾಗಿ ಓಡುವ ಸಂದರ್ಭದಲ್ಲಿ, ಅಲ್ಲೇ ಇದ್ದ ಕೆಲವು ಮಹಿಳಾ ಮಣಿಯರು ಅತಿಥಿಗಳಿಗೆಂದು ಟೇಬಲ್​ ಮೇಲಿಟ್ಟಿದ್ದ ವೈನ್​ ಮತ್ತು ಮದ್ಯದ ಬಾಟಲಿಗಳನ್ನು ಹೊತ್ತುಕೊಂಡು ಸ್ಥಳದಿಂದ ಹೊರಟುಹೋಗಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದ್ದಂತೆ, ನೆಟ್ಟಿಗರು ಕೆಲವರ ನಡೆಗೆ ಛೀಮಾರಿ ಹಾಕಿದ್ದಾರೆ,(ಏಜೆನ್ಸೀಸ್).