Elon Musk | ಟೆಕ್ ಬಿಲಿಯನೇರ್ ಎಲಾನ್ ಮಸ್ಕ್
ನ್ಯೂಯಾರ್ಕ್: ಮುಂದಿನ 5 ಅಥವಾ 10 ವರ್ಷಗಳಲ್ಲೇ ಜಗತ್ತು ಜಾಗತಿಕ ಯುದ್ಧಕ್ಕೆ ಸಿಲುಕಬಹುದು ಟೆಕ್ ಬಿಲಿಯನೇರ್ ಎಲಾನ್ ಮಸ್ಕ್(Elon Musk) ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಪರಮಾಣು ಅಸ್ತ್ರಗಳು ಜಾಗತಿಕ ಆಡಳಿತವನ್ನು ಹೇಗೆ ರೂಪಿಸುತ್ತದೆ ಎಂಬುದನ್ನು ಚರ್ಚಿಸುವ ಥ್ರೆಡ್‌ಗೆ ಮಸ್ಕ್ ಪ್ರತಿಕ್ರಿಯಿಸಿದ್ದು, ತಂತ್ರಜ್ಞಾನ ಬಿಲಿಯನೇರ್ ಯುದ್ಧ ಅನಿವಾರ್ಯ ಎಂದು ಹೇಳಿದ್ದಾರೆ. ಅಲ್ಲದೆ, ಜಾಗತಿಕವಾಗಿ 2030 ರ ಆರಂಭದಲ್ಲಿಯೇ ಯುದ್ದ ಭುಗಿಲೆದ್ದಿರಬಹುದು ಎಂದು ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಮಸ್ಕ್, ಮುಂದಿನ 5 ವರ್ಷಗಳು, ಹೆಚ್ಚೆಂದರೆ 10 ವರ್ಷಗಳು ನಂತರ ಯುದ್ಧ ಅನಿವಾರ್ಯವಾಗುತ್ತದೆ. ಅಲ್ಲದೆ, ಈ ಹೇಳಿಕೆಗೆ ಮಸ್ಕ್ ಯಾವುದೇ ಹೆಚ್ಚಿನ ವಿವರಣೆಯನ್ನು ನೀಡದೆ ಬರೆದಿದ್ದಾರೆ.
ಬಹುಶಃ ನನ್ನ ಅತ್ಯಂತ ಕರಾಳ ಅಭಿಪ್ರಾಯವೆಂದರೆ ಎಲ್ಲಾ ಸರ್ಕಾರಗಳು ಈಗ ಕೆಟ್ಟದಾಗಿವೆ. ಏಕೆಂದರೆ ಪರಮಾಣು ಶಸ್ತ್ರಾಸ್ತ್ರಗಳು ಪ್ರಮುಖ ಶಕ್ತಿಗಳ ನಡುವಿನ ಯುದ್ಧ ನಡೆಯಬಹುದು. ಅಲ್ಲದೆ, ಪ್ರಮುಖ ಪರಮಾಣು ರಾಷ್ಟ್ರಗಳು ಬೆದರಿಕೆಯನ್ನು ಸಹ ಹಾಕಬಹುದು ಎಂದು ಮಸ್ಕ್ ತಿಳಿಸಿದ್ದಾರೆ.
ಅದರೆ, ಎಲಾನ್ ಮಸ್ಕ್ ತಮ್ಮ ಕಾಮೆಂಟ್ ಬಗ್ಗೆ ನಿರ್ದಿಷ್ಟ ವಾಗಿ ಹೇಳಲಿಲ್ಲ. ಇದರಿಂದಾಗಿ X ಬಳಕೆದಾರರಿಗೆ ಶೀಘ್ರದಲ್ಲೇ ಏನಾಗಬಹುದು ಎಂಬುದರ ಬಗ್ಗೆ ಕುತಹಲವಿದೆ. ಆದರೆ ಮಸ್ಕ್ ಅವರ ಪ್ರಮುಖ ವ್ಯಕ್ತಿತ್ವದ ಪ್ರಭಾವ ಮತ್ತು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಡಿಯಲ್ಲಿ ಸರ್ಕಾರಿ ದಕ್ಷತೆ ಇಲಾಖೆಯ (DOGE) ಮಾಸ್ಟರ್ ಮೈಂಡ್ ಆಗಿ ಕಾರ್ಯನಿರ್ವಹಿಸಿದರ ಪರಿಗಣಿಸಿ ಈ ಹೇಳಿಕೆಯು ಎಲ್ಲರ ಗಮನ ಸೆಳೆದಿದೆ,(ಏಜೆನ್ಸೀಸ್).