ಜರ್ಮನ್​ರಿಗೆ ಕಾಡುತ್ತಿರುವ ಅತಿದೊಡ್ಡ ಭಯ ಅಂದ್ರೆ ಇದೇ ಅಂತೆ! ಸಮೀಕ್ಷೆಯಲ್ಲಿ ಸಿಕ್ಕ ಉತ್ತರದ ಹಿಂದಿದೆ ವಾಸ್ತವ | Germans Fears  
ವಿದೇಶ

ಜರ್ಮನ್​ರಿಗೆ ಕಾಡುತ್ತಿರುವ ಅತಿದೊಡ್ಡ ಭಯ ಅಂದ್ರೆ ಇದೇ ಅಂತೆ! ಸಮೀಕ್ಷೆಯಲ್ಲಿ ಸಿಕ್ಕ ಉತ್ತರದ ಹಿಂದಿದೆ ವಾಸ್ತವ | Germans Fears

ಉಕ್ರೇನ್​-ರಷ್ಯಾ ಯುದ್ಧ, ಹವಾಮಾನ ವೈಪರೀತ್ಯ ಅಥವಾ ಇನ್ನಿತರ ಘರ್ಷಣೆಗಳಲ್ಲ. ಬದಲಿಗೆ ವಾಸ್ತವವಾಗಿ, ಜರ್ಮನ್ನರು ದ್ವಿಗುಣವಾಗಿ ಏರುತ್ತಿರುವ ಬೆಲೆಗಳಿಗೆ ಹೆಚ್ಚು ಹೆದರುತ್ತಾರೆ ಎಂದು ಇತ್ತೀಚಿನ ಸಮೀಕ್ಷೆಯು ಸ್ಪಷ್ಟಪಡಿಸಿದೆ.

Germans: ಜರ್ಮನಿ ದೇಶಗಳಂತಹ ರಾಷ್ಟ್ರಗಳಲ್ಲಿ ನಾವೂ ಕೂಡ ಜೀವನ ಸಾಗಿಸಬೇಕು, ಬದುಕು ಕಟ್ಟಿಕೊಳ್ಳಬೇಕು ಎಂಬುದು ಇಂದಿಗೂ ಹಲವರ ಆಸೆಯೇ. ಆದರೆ, ಇಲ್ಲಿನ ಪ್ರಜೆಗಳಿಗೇ ಒಂದು ಭಯ ಬೆಂಬಿಡದೆ ಕಾಡಲಾರಂಭಿಸಿದ್ದು, ಅದು ಇತ್ತೀಚಿನ ಸಮೀಕ್ಷೆಯ ಮೂಲಕ ಹೊರಬಿದ್ದಿರುವುದು ಸದ್ಯ ಅಚ್ಚರಿ ಮೂಡಿಸುವಂತಿದೆ.

ಒಳ್ಳೆಯ ಉದ್ಯೋಗ, ದಾಂಪತ್ಯ ಜೀವನ ಮತ್ತು ವಾಸಿಸಲು ಒಂದು ಮನೆಯಿದ್ದರೆ ಮಾತ್ರವಲ್ಲ, ಜರ್ಮನ್​ಗಳಿಗೆ ಕಾಡುತ್ತಿರುವ ಭಯ ಎಂದರೆ ಅದುವೇ ಉಕ್ರೇನ್​-ರಷ್ಯಾ ಯುದ್ಧ, ಹವಾಮಾನ ವೈಪರೀತ್ಯ ಅಥವಾ ಇನ್ನಿತರ ಘರ್ಷಣೆಗಳಲ್ಲ. ಬದಲಿಗೆ ವಾಸ್ತವವಾಗಿ, ಜರ್ಮನ್ನರು ದ್ವಿಗುಣವಾಗಿ ಏರುತ್ತಿರುವ ಬೆಲೆಗಳಿಗೆ ಹೆಚ್ಚು ಹೆದರುತ್ತಾರೆ ಎಂದು ಇತ್ತೀಚಿನ ಸಮೀಕ್ಷೆಯು ಸ್ಪಷ್ಟಪಡಿಸಿದೆ.

ಸಮೀಕ್ಷೆಯ ಫಲಿತಾಂಶದಲ್ಲಿ ಏನಿದೆ?

ಇತ್ತೀಚೆಗೆ, 14 ವರ್ಷಕ್ಕಿಂತ ಮೇಲ್ಪಟ್ಟ 2,400 ಜರ್ಮನ್ನರು ಅವರು ಹೆಚ್ಚು ಭಯಪಡುವ ಮತ್ತು ಚಿಂತೆಗೀಡಾವ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಲಾಯಿತು. ಹೆಚ್ಚುತ್ತಿರುವ ಬೆಲೆಗಳಿಗೆ ಜರ್ಮನ್​ ಜನರು ಹೆಚ್ಚಾಗಿ ಹೆದರುತ್ತಾರೆ ಎಂದು ಸಮೀಕ್ಷೆಯ ಫಲಿತಾಂಶಗಳು ತೋರಿಸಿವೆ. ಕಳೆದ ವರ್ಷ, ಇದೇ ರೀತಿಯ ಸಮೀಕ್ಷೆಯನ್ನು ನಡೆಸಿದಾಗ, ಶೇ.52ರಷ್ಟು ಜನರು ಬೆಲೆ ಏರಿಕೆಯ ಬಗ್ಗೆ ತುಂಬಾ ಹೆದರುತ್ತಿದ್ದರು ಎಂದು ಹೇಳಲಾಗಿತ್ತು. ಅದೇ ಸಂಖ್ಯೆ ಈಗ, ಶೇ.59ಕ್ಕೆ ಏರಿದೆ.

ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ಲೇಷಕರಲ್ಲಿ ಒಬ್ಬರಾದ ಇಸಾಬೆಲ್ಲೆ ಬೊರುಕಿ, ಇಂಧನ, ಬಾಡಿಗೆ ಮತ್ತು ಆಹಾರದಂತಹ ಪ್ರಮುಖ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರ ಪರಿಣಾಮವಾಗಿ, ಮನರಂಜನೆ, ರಜಾ ದಿನಗಳು ಮತ್ತು ಶಾಪಿಂಗ್‌ನಂತಹ ವಿಷಯಗಳು ಜನರ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ. ಹೀಗಾಗಿ, ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ ಎಂದು ಹೇಳಿದ್ದಾರೆ.

ಇದರೊಟ್ಟಿಗೆ, ಪಿಂಚಣಿ ಮತ್ತು ವಿಮೆ ಬಗ್ಗೆಯೂ ಜನರು ಚಿಂತಿತರಾಗಿದ್ದಾರೆ. ತೆರಿಗೆಗಳು ಮತ್ತು ವಿಮಾ ಕೊಡುಗೆಗಳು ಹೆಚ್ಚಾಗಬಹುದು ಎಂಬ ಭಯವು ಜರ್ಮನ್​ರಲ್ಲಿ ಕಾಡುತ್ತಿದೆ. ಹೆಚ್ಚುವರಿಯಾಗಿ, ಶೇ.52ರಷ್ಟು ಜನರು ಹೆಚ್ಚುತ್ತಿರುವ ನಿರಾಶ್ರಿತರ ಬಗ್ಗೆಯೂ ಚಿಂತಿಸುತ್ತಿದ್ದಾರೆ ಎಂದು ವಿವರಿಸಲಾಗಿದೆ. ಒಟ್ಟಾರೆ, ಜರ್ಮನ್ನರು ಯುದ್ಧಗಳಂತಹ ಸಮಸ್ಯೆಗಳಿಗಿಂತ ಅತ್ಯಗತ್ಯ ವಸ್ತುಗಳ ದರ, ಪಿಂಚಣಿ, ವಿಮೆ, ತೆರಿಗೆಗಳು ಸೇರಿದಂತೆ ಇತ್ಯಾದಿಗಳ ಏರಿಕೆಗೆ ಹೆದರುತ್ತಾರೆ ಎಂದು ತಿಳಿಸಲಾಗಿದೆ,(ಏಜೆನ್ಸೀಸ್).