ಮರಣಹೊಂದಿದ ಇರಾನಿನ ಸವೋಚ್ಚ ನಾಯಕ ಅಯತೊಲ್ಲಾ ಖಮೇನಿ, ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್
- ಅಮೆರಿಕ - ಇಸ್ರೇಲ್ ದಾಳಿಗೆ ಇರಾನಿನ ಸವೋಚ್ಚ ನಾಯಕ ಅಯತೊಲ್ಲಾ ಖಮೇನಿ ಸಾವು
- ನಮ್ಮ ನಾಯಕನನ್ನು ಕೊಂದವರನ್ನು ಸುಮ್ಮನೆ ಬಿಡುವುದಿಲ್ಲ: ಇರಾನ್ ಅಧ್ಯಕ್ಷ
- ನಮ್ಮ ಪ್ರತೀಕಾರ ಭೀಕರವಾಗಿರಲಿದೆ: ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್
ಇರಾನ್: ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಗೆ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (86) ನಿಧನವಾದ ಬಳಿಕ ಇರಾನಿನ ಅಧ್ಯಕ್ಷರಿಂದ ಸ್ಪೋಟಕ ಹೇಳಿಕೆ ಕೇಳಿಬಂದಿದೆ.
ನಮ್ಮ ದೇಶದ ಸರ್ವೋಚ್ಚ ನಾಯಕನನ್ನು ಯುರೋಪಿನ ಶಕ್ತಿಗಳು ಕೊಲೆ ಮಾಡಿವೆ. ಈ ಕೊಲೆಗೆ ಇರಾನ್ ಪ್ರತೀಕಾರ ತೀರಿಸಿಕೊಳ್ಳುವುದು ಕಾನೂನಾತ್ಮಕವಾದ ಹಕ್ಕಾಗಿದೆ ಎಂದು ಇರಾನಿನ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ (Masoud Pezeshkian) ಹೇಳಿದ್ದಾರೆ.
ನಾವು ನಮ್ಮ ಸೇಡನ್ನು ತೀರಿಸಿಕೊಳ್ಳಲು ಯಾವ ಹಂತವನ್ನು ತಲುಪಲು ಹಿಂಜರಿಯುವುದಿಲ್ಲ, ವಿದೇಶಿ ಶಕ್ತಿಗಳನ್ನು ಎದುರಿಸುವ ಶಕ್ತಿ ಮತ್ತು ಸಾಮರ್ಥ್ಯ ನಮಗಿದ್ದು ಇದು ಪ್ರತಿಯೊಬ್ಬ ಇರಾನಿಯನ್ನನ ಆದ್ಯ ಕರ್ತವ್ಯವಾಗಿದೆ ಎಂದು ಗುಡುಗಿದ್ದಾರೆ.
ನಮ್ಮ ಪ್ರತೀಕಾರ ಭೀಕರವಾಗಲಿದೆ!
ಖಮೇನಿ ಅವರ ಸಾವಿಗೆ ಯಾವುದೇ ಉತ್ತರ ಕೊಡದೆ ಇರಾನ್ ಸುಮ್ಮನಿರುವುದಿಲ್ಲ, ನಮ್ಮ ಪ್ರತೀಕಾರದ ಜ್ವಾಲೆ ಭಯಂಕರವಾಗಲಿದೆ ಎಂದು ಇರಾನ್ ಅಧ್ಯಕ್ಷರು ಹೇಳಿದ್ದಾರೆ.
ತಮ್ಮ ವಿರೋಧಿ ದೇಶಗಳ ಮೇಲೆ ಪೂರ್ಣ ಪ್ರಮಾಣದ ಯುದ್ಧಕ್ಕೆ ಇರಾನ್ ತಯಾರಾಗುತ್ತಿದ್ದು, ಸೈನ್ಯದ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದಿರುವುದಾಗಿ ಇರಾನಿನ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.
ತೈಲ ಮಾರ್ಗಗಳೇ ಟಾರ್ಗೆಟ್
ಇರಾನ್ ಮೇಲಿನ ಅಮರಿಕ- ಇಸ್ರೇಲ್ ದಾಳಿಯು ಜಾಗತಿಕ ತೈಲ ಮಾರುಕಟ್ಟೆಯನ್ನು ಅಲುಗಾಡಿಸಿದ್ದು, ಈ ದಾಳಿಯಲ್ಲಿ ಹಲವಾರು ತೈಲ್ ಟ್ಯಾಂಕರ್ಗಳು ನಾಶವಾಗಿರುವುದಾಗಿ ತಿಳಿದು ಬಂದಿದೆ.
ತೈಲ ಮಾರುಕಟ್ಟೆಯ ಐದನೇಯ ಒಂದು ಭಾಗವನ್ನು ನಿಂಯಂತ್ರಿಸುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಏನಾದರೂ ಮುಚ್ಚಿದರೆ, ಜಾಗತಿಕವಾಗಿ ತೈಲ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಯ ಸಂಭವಹಿಸಲಿದೆ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.
ಈ ಯುದ್ಧ ಏನಾದರೂ ಧೀರ್ಘಕಾಲದ ವರೆಗೆ ನಡೆದರೆ ಕಚ್ಚಾ ತೈಲದ ಬೆಲೆ 100 ಡಾಲರ್ನ್ನು ದಾಟಲಿದ್ದು, ಇದು ಕೇವಲ ಮೂರೇ ದೇಶಗಳಿಗೆ ಸಮಸ್ಯೆಯಾಗಿದರೆ, ಈಡೀ ಪ್ರಪಂಚಕ್ಕೆ ತಲೆನೋವನ್ನು ಉಂಟುಮಾಡಲಿದೆ,(ಏಜನ್ಸೀಸ್).