ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಲಿ ಲಾರಿಜಾನಿ
ಟೆಹ್ರಾನ್: ಇರಾನ್ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಲೆ ತೆರಬೇಕಾಗುತ್ತದೆ. ಚೆಲ್ಲಿದ ನಮ್ಮವರ ರಕ್ತಕ್ಕೆ ಸೇಡು ತೀರಿಸಿಕೊಳ್ಳದೇ ನಾವು ಬಿಡಲ್ಲ ಎಂದು ಇರಾನ್ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ನಮ್ಮ ನಾಯಕ ಮತ್ತು ನಮ್ಮ ಜನರ ರಕ್ತದ ಸೇಡನ್ನು ನಾವು ಪಟ್ಟುಬಿಡದೆ ಸೇಡು ತೀರಿಸಿಕೊಳ್ಳುತ್ತೇವೆ. ಟ್ರಂಪ್ ಬೆಲೆ ತೆರಬೇಕು, ಬೆಲೆ ತೆರುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ, ಇರಾನ್ ವಿರುದ್ಧ ನೆರೆಹೊರೆಯ ದೇಶಗಳು ಅಮೆರಿಕಾಗೆ ತಮ್ಮ ಪ್ರದೇಶ ಬಳಸುವುದನ್ನು ತಡೆಯಬೇಕು. ಇಲ್ಲದಿದ್ದರೇ ಖಂಡಿತವಾಗಿ ನಾವುಗಳು ಆ ದೇಶಗಳ ಮೇಲೆ ದಾಳಿ ಮಾಡದೇ ಬೇರೆ ದಾರಿಯಿಲ್ಲ. ಆ ಪ್ರದೇಶದಿಂದ ಶತ್ರುಗಳ ನಮ್ಮ ಮೇಲೆ ದಾಳಿ ಮಾಡಿದ್ರೆ ನಾವು ತಿರುಗಿ ಪ್ರತಿಕ್ರಿಯೆ ಕೊಡ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಕೆಲವು ಅಮೆರಿಕನ್ ಸೈನಿಕರನ್ನು ಸೆರೆ ಹಿಡಿದಿದೆ ಎಂದು ಹೇಳಿದೆ. ಆದಾಗ್ಯೂ ನಮ್ಮ ನಾಯಕನನ್ನು ಕೊಂದು, ನಮ್ಮ 1,000ಕ್ಕೂ ಹೆಚ್ಚು ಜನರನ್ನು ಹುತಾತ್ಮರನ್ನಾಗಿ ಮಾಡಿದ್ದಕ್ಕೆ ನಾವು ಟ್ರಂಪ್ ಅವರನ್ನು ಒಂಟಿಯಾಗಿ ಓಡಾಡಲು ಬಿಡಲ್ಲ. ಅದಕ್ಕೆ ಅವನು ಬೆಲೆ ತೆರಲೇಬೇಕು ಎಂದಿದ್ದಾರೆ (ಏಜೆನ್ಸೀಸ್).