ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು
- 16ನೇ ದಿನಕ್ಕೆ ಕಾಲಿಟ್ಟ ಇಸ್ರೇಲ್-ಅಮೆರಿಕ ಮತ್ತು ಇರಾನ್ ಯುದ್ಧ
- ಇಸ್ರೇಲ್ ಪ್ರಧಾನಿಯನ್ನು ಹುಡುಕಿ ಹೊಡೆಯುತ್ತೇವೆ
- ಇಸ್ರೇಲಿ ಪಡೆಗೆ ಇರಾನ್ ಎಚ್ಚರಿಕೆ ಸಂದೇಶ
ಟೆಹ್ರಾನ್: 16ನೇ ದಿನಕ್ಕೆ ಕಾಲಿಟ್ಟಿರುವ ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಸಂಘರ್ಷ, ಸದ್ಯ ಭಾರೀ ಬೆಳವಣಿಗೆಗೆ ಸಾಕ್ಷಿಯಾಗುತ್ತಿದೆ. ಎರಡೂ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಭೀಕರ ದಾಳಿಗಳು ಇಡೀ ಜಗತ್ತಿನ ಮೇಲೆ ದೊಡ್ಡ ಪರಿಣಾಮ ಬೀರಲಾರಂಭಿಸಿದೆ. ತೈಲ, ಅಡುಗೆ ಎಣ್ಣೆ, ಅಗತ್ಯ ವಸ್ತುಗಳ ಬೆಲೆಗಳು ದಿಢೀರ್ ಏರಿಕೆಯಾಗಿದ್ದು, ಭಾರತದಲ್ಲಿ ಈಗಾಗಲೇ ಗ್ಯಾಸ್ ಸಿಲಿಂಡರ್ಗಳ ಕೊರೆತೆ ಶುರುವಾಗಿದೆ. ಹಲವು ದೇಶಗಳು ತೀರ ಸಂಕಷ್ಟಕ್ಕೆ ಸಿಲುಕಿದ್ದರೂ ಇರಾನ್ ಮತ್ತು ಇಸ್ರೇಲ್ ತಮ್ಮ ಸೇಡಿನ ಬಡಿದಾಟವನ್ನು ಕೊನೆಗೊಳಿಸುವ ಯಾವ ಲಕ್ಷಣಗಳನ್ನು ತೋರುತ್ತಿಲ್ಲ.
ಇರಾನ್ ತನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆಗೈದ ಅಮೆರಿಕ ಮತ್ತು ಇಸ್ರೇಲಿ ಪಡೆಯನ್ನು ಮಟ್ಟ ಹಾಕುವವರೆಗೂ ನಾವು ಸುಮ್ಮನಾಗಲ್ಲ ಎಂದು ಪಟ್ಟು ಹಿಡಿದಿದ್ದರೆ, ಅತ್ತ ಟ್ರಂಪ್, ಸರಣಿ ದಾಳಿಗಳನ್ನು ನಡೆಸುವುದರಿಂದ ನಮಗೆ ಮಜಾ ಸಿಗುತ್ತದೆ ಎಂದು ಇರಾನ್‌ನ ಪ್ರಮುಖ ತೈಲ ದ್ವೀಪವನ್ನು ಉಡೀಸ್ ಮಾಡಲು ಮುಂದಾಗಿದ್ದಾರೆ. ಇದೆಲ್ಲದರ ನಡುವೆ, ಯಾರ ಕಣ್ಣಿಗೂ ಬೀಳದ ಇಸ್ರೇಲಿ ಪ್ರಧಾನಿ ಸಾವಿಗೀಡಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಅದಕ್ಕೆ ತಕ್ಕಂತೆ, ಒಂದಷ್ಟು ವಿಡಿಯೋಗಳು ಸಿಕ್ಕಿವೆ. ಆದರದು ಎಐ ಎನ್ನಲಾಗಿದೆ.
ಹೊಸ ವರದಿ ಪ್ರಕಾರ, ಬೆಂಜಮಿನ್ ನೆತನ್ಯಾಹು ಎಲ್ಲಿಯೂ ಹೋಗಿಲ್ಲ. ಅವರು ಇಲ್ಲೇ ಇದ್ದಾರೆ. ಇರಾನ್ ದಾಳಿಗೆ ಉಸಿರು ಚೆಲ್ಲಿದ್ದಾರೆ ಎಂಬ ಸುದ್ದಿಗಳು ಅಪ್ಪಟ ಸುಳ್ಳು. ಅವರು ಜೀವಂತವಾಗಿ, ಸುರಕ್ಷಿತವಾಗಿದ್ದಾರೆ ಎಂದು ಇಸ್ರೇಲಿ ಪಡೆಗಳು ತಿಳಿಸಿವೆ. "160ಕ್ಕೂ ಅಧಿಕ ಅಮಾಯಕ ಮಕ್ಕಳ ಹತ್ಯೆಯ ಅಪರಾಧಿ ಜೀವಂತವಾಗಿದ್ದರೆ, ಖಂಡಿತ ನಮ್ಮ ಎಲ್ಲಾ ಸಾಮರ್ಥ್ಯದಿಂದ ಆತನನ್ನು ಬೆನ್ನಟ್ಟಿ ಕೊಲ್ಲುವುದು ಖಚಿತ" ಎಂದು ಇರಾನ್‌ನ ಕ್ರಾಂತಿಕಾರಿ ಗಾರ್ಡ್ಸ್ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ,(ಏಜೆನ್ಸೀಸ್).