ಅಮೆರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​ಗೆ ಇರಾನ್​ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ತಿರುಗೇಟು 
ವಿದೇಶ

ನಾವು ಅಮೆರಿಕವನ್ನು ಸೋಲಿಸಿದ್ದೇವೆ! ಶೀಘ್ರದಲ್ಲೇ ಸಂಘರ್ಷ ಅಂತ್ಯವಾಗಲಿದೆ; ಡೊನಾಲ್ಡ್​ ಟ್ರಂಪ್​ಗೆ ಇರಾನ್​ ಅಧ್ಯಕ್ಷ ಮಸೂದ್ ಕೌಂಟರ್​! Masoud Pezeshkian on Donald Trump

ಪ್ರಮುಖ ಮುಖ್ಯಾಂಶಗಳು

  • ಅಮೆರಿಕ - ಇರಾನ್​ ಯುದ್ಧ
  • ನಾವು ಈಗಾಗಲೇ ಯುದ್ಧವನ್ನು ಗೆದ್ದಿದ್ದೇವೆ; ಆದಷ್ಟು ಬೇಗ ಸಂಘರ್ಷ ಕೊನೆಗೊಳ್ಳಲಿದೆ
  • ಅಮೆರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​ಗೆ ಇರಾನ್​ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ತಿರುಗೇಟು
ಟೆಹ್ರಾನ್​: ಕಳೆದ ನಾಲ್ಕೈದು ತಿಂಗಳಿನಿಂದ ನಡೆಯುತ್ತಿರುವ ಅಮೆರಿಕ-ಇರಾನ್ ನಡುವಿನ ಸಂಘರ್ಷ ಯಾವಾಗ ಮುಕ್ತಾಯವಾಗುತ್ತೋ? ಎಂದು ಈಡೀ ಪ್ರಪಂಚ ಕಾಯುತ್ತಿರುವಾಗ, ಇರಾನ್​ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ( Masoud Pezeshkian on Donald Trump) ಶುಭ ಸುದ್ದಿ ಕೊಟ್ಟಿದ್ದಾರೆ.
ಈ ಯುದ್ಧದಲ್ಲಿ ನಾವು ಅಮೆರಿಕವನ್ನು ಸೋಲಿಸಿದ್ದೆವೆಂದು ಈಡೀ ಜಗತ್ತು ಒಪ್ಪಿಕೊಂಡಿದೆ. ಆದರೆ ಅಮೆರಿಕ ಮಾತ್ರ ನಮ್ಮ ಶಾಲೆ, ಆಸ್ಪತ್ರೆ ಮೇಲೆ ದಾಳಿ ನಡೆಸಿದೆ. ಆದರೂ ಈ ಸಂಘರ್ಷದಲ್ಲಿ ನಾವು ಮೇಲ್ಗೈ ಸಾಧಿಸಿರುವ ಕಾರಣ ಈ ಯುದ್ಧವನ್ನು ಆದಷ್ಟು ಬೇಗ ಕೊನೆಗೊಳಿಸುವುದು ಉತ್ತಮ ಎಂದು ಅವರು ಹೇಳಿದ್ದಾರೆ.

ನಾವು ಯಾರಿಗೂ ತಲೆಬಾಗಲ್ಲ!

ಕಾರ್ಯಕ್ರಮವೊಂದರಲ್ಲಿ, ಅಮೆರಿಕ ಇರಾನ್​ ಮೇಲೆ ಆರ್ಥಿಕ ದಿಗ್ಬಂಧನ ಹಾಕಲು ಮುಂದಾಗಿದ್ದು, ಇದಕ್ಕೆ ಅಧ್ಯಕ್ಷರ ಅಭಿಪ್ರಾಯ ಕೇಳಲಾಗಿದೆ.

ನಾವು ಯಾರ ಮೇಲೆ ಸಹ ದಾಳಿ ಮಾಡಲಿಲ್ಲ, ಹಾಗೆಯೇ ನಮ್ಮ ಮೇಲೆ ದಾಳಿ ಮಾಡಿದವರನ್ನು ಸಮರ್ಥವಾಗಿ ಎದುರಿಸಿದ್ದೇವೆ. ಕದನ ವಿರಾಮವನ್ನು ಯಾರು ಘೋಷಿಸಿದರು? ಯಾರು ಎರಡೆರಡು ಬಾರಿ ಮಾತುಕತೆಗೆ ಮುಂದಾದರೆಂದು ಈಡೀ ಜಗತ್ತು ನೋಡಿದೆ. ನಾವು ಯಾರಿಗೂ ತಲೆ ಬಗ್ಗಿಸಿಲ್ಲ, ಮುಂದೆಯೂ ಬಾಗಿಸಲ್ಲ ಎಂದು ಮಸೂದ್ ಪೆಜೆಶ್ಕಿಯನ್ ಹೇಳಿದ್ದಾರೆ.


ನಾವು ಈ ಯುದ್ಧವನ್ನು ಈಗಾಗಲೇ ಗೆದ್ದಾಗಿದೆ. ಅದನ್ನು ಈಡೀ ಜಗತ್ತು ಗುರುತಿಸಿದೆ, ಹಾಗೆಯೇ ಅಮೆರಿಕಾದ ಮೇಲೆ ತಮ್ಮ ಕೋಪ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿವೆ. ಹೀಗಾಗಿ ಈ ಸಂಘರ್ಷವನ್ನು ಆದಷ್ಟು ಬೇಗ ಅಂತ್ಯಗೊಳಿಸುವತ್ತ ಗಮನ ಹರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಆರ್ಥಿಕ ಯುದ್ಧಕ್ಕೆ ಮುಂದಾದ ದೊಡ್ಡಣ್ಣ!

ಮಿಸೈಲ್​, ಡ್ರೋನ್​ ಹಾಗೂ ಜಲಸಂಧಿ ಜಲಯುದ್ಧದ ಬಳಿಕ ಅಮೆರಿಕ, ಇರಾನ್​ ಮೇಲೆ ಆರ್ಥಿಕ ಸಂಘರ್ಷಕ್ಕೆ ಮುಂದಾಗಿದೆ. ಕಳೆದ ಕೆಲ ದಿನಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಇರಾನ್​ನ ವಿಮಾನ ನಿಲ್ದಾಣ, ಹಣಕಾಸು ಸಂಸ್ಥೆಳು, ಸರ್ಕಾರಿ ಘಟಕಗಳಿಗೆ ಯಾವುದೇ ರೀತಿಯ ಆರ್ಥಿಕ ಸಹಕಾರ ನೀಡದಂತೆ ವಿಶ್ವಕ್ಕೆ ಅಮೆರಿಕ ಆದೇಶಿಸಿದೆ.
ಈ ನಿಯಮವನ್ನು ಮೀರಿ ಇರಾನ್​ಗೆ ಸಹಾಯ ಮಾಡುವ ದೇಶಗಳು ಕೂಡ ಆರ್ಥಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಒಂಧರ್ಥದಲ್ಲಿ ಇರಾನ್​ ಅನ್ನು ಆರ್ಥಿಕವಾಗಿ ಕುಂಟಿಸಿ, ಏಕಾಂಗಿ ಮಾಡುವುದು ಅಮೆರಿಕದ ಯೋಜನೆಯಾಗಿದೆ ಎಂದು ಹೇಳಬಹುದಾಗಿದೆ, (ಏಜನ್ಸೀಸ್​).