- ವೆನೆಜುವೆಲಾದಲ್ಲಿ ಪ್ರತ್ಯೇಕ ಎರಡು ಕಡೆ ಪ್ರಬಲ ಭೂಕಂಪ
- ಕನಿಷ್ಠ 32 ಮಂದಿ ಸಾವು, 700ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರ
Venezuela Earthquake: ಕೇವಲ 40 ಸೆಕೆಂಡ್ಗಳಲ್ಲಿ ಪ್ರತ್ಯೇಕವಾಗಿ ಎರಡು ಬಾರಿ ಭೂಮಿ ಕಂಪಿಸಿದ್ದಕ್ಕೆ ಇಡೀ ವೆನೆಜುವೆಲಾ ನಗರವೇ ಸದ್ಯ ಸ್ಮಶಾನದಂತಾಗಿದೆ. ಈ ಘೋರ ದುರಂತದಲ್ಲಿ 700ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರೆ, ಇಲ್ಲಿಯವರೆಗೆ ಕನಿಷ್ಠ 32 ಮಂದಿ ಉಸಿರು ಚೆಲ್ಲಿದ್ದಾರೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ರಾಜಧಾನಿ ಕ್ಯಾರಕಾಸ್ ಬಳಿ ಭಾರಿ ಭೂಕಂಪ ಸಂಭವಿಸಿದ್ದು, ನಗರದ ಮೇಲೆ ತೀವ್ರ ಪರಿಣಾಮ ಬೀರಿದೆ. ರಿಕ್ಟರ್ ಮಾಪಕದಲ್ಲಿ 7.2 ಮತ್ತು 7.5 ತೀವ್ರತೆಯ ಎರಡು ಭೂಕಂಪಗಳು ಇಡೀ ನಗರವನ್ನೇ ಅಕ್ಷರಶಃ ನಡುಗಿಸಿವೆ. ಮನೆಗಳು, ಬೃಹತ್ ಕಟ್ಟಡಗಳು, ರಸ್ತೆಗಳು, ಏರ್ಪೋರ್ಟ್ ಮತ್ತು ಬಹುಮಹಡಿ ಅಪಾರ್ಟ್‌ಮೆಂಟ್‌ಗಳು ನೋಡ ನೋಡುತ್ತಿದ್ದಂತೆ ನೆಲಕ್ಕೆ ಉರುಳಿವೆ. ಭೂಕಂಪದ ತೀವ್ರತೆಯನ್ನು ತೋರಿಸುವ ಫೋಟೋ, ವಿಡಿಯೋಗಳು ಘಟನೆಯ ಭೀಕರತೆಯನ್ನು ಒತ್ತಿ ಹೇಳುತ್ತಿವೆ.
ಕ್ಯಾರಕಾಸ್‌ನ ಕ್ರೀಡಾಂಗಣದಲ್ಲಿ ಬೇಸ್‌ಬಾಲ್ ಪಂದ್ಯ ನಡೆಯುತ್ತಿರುವಾಗ ಭೂಮಿ ಕಂಪಿಸಿತು ಎನ್ನಲಾಗಿದೆ. ಇದು ಕ್ರೀಡಾಂಗಣದಲ್ಲಿ ಆಟಗಾರರು ಮತ್ತು ಪ್ರೇಕ್ಷಕರಲ್ಲಿ ಭಯಭೀತಿಯನ್ನು ಸೃಷ್ಟಿಸಿತು. ಒಂದು ಕ್ಷಣ ಏನಾಗುತ್ತಿದೆ ಎಂದು ಯಾರಿಗೂ ಅರ್ಥವಾಗದೆ, ಮೈದಾನ ಬಿಟ್ಟು ಜನರು ಓಡುತ್ತಿರುವ ದೃಶ್ಯಗಳು ಸದ್ಯ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮತ್ತೊಂದೆಡೆ, ಕಣ್ಣೆದುರೇ ಬೃಹತ್ ಕಟ್ಟಡಗಳು ಕುಸಿಯುವ ದೃಶ್ಯಗಳು ನೋಡುಗರ ಮೈ ಜುಂ ಎನ್ನುವಂತಿವೆ.
ವೆನೆಜುವೆಲಾದ ಲಾ ಗೈರಾ ಕರಾವಳಿಯಲ್ಲಿಯೂ ಭೂಕಂಪದ ಅನುಭವವಾಯಿತು. ಇದ್ದಕ್ಕಿದ್ದಂತೆ ಅಲೆಗಳು ಎದ್ದಾಗ ಮೀನುಗಾರನೊಬ್ಬ ಸಮುದ್ರದಲ್ಲಿ ಮೀನುಗಾರಿಕೆಗೆ ಹೋದನು. ಅವರು ತಮ್ಮ ಮೊಬೈಲ್ ಫೋನ್‌ನಲ್ಲಿ ಈ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಅವು ಪ್ರಸ್ತುತ ವೈರಲ್ ಆಗುತ್ತಿವೆ.
ಮತ್ತೊಂದು ದೃಶ್ಯದಲ್ಲಿ, ಕಟ್ಟಡದ ರೇಲಿಂಗ್ ಇದ್ದಕ್ಕಿದ್ದಂತೆ ಕುಸಿದಿದೆ. ಇದನ್ನು ಮುಂಚಿತವಾಗಿಯೇ ಗಮನಿಸಿದ ಮಹಿಳೆಯೊಬ್ಬರು, ಕಟ್ಟಡದಿಂದ ಓಡಿಹೋಗುವ ಮೂಲಕ ಜೀವ ಉಳಿಸಿಕೊಂಡಿದ್ದಾರೆ. ರಾಜಧಾನಿ ಕ್ಯಾರಕಾಸ್ ಬಳಿ 39 ಸೆಕೆಂಡುಗಳಲ್ಲಿ ಸಂಭವಿಸಿದ ಬೃಹತ್ ಭೂಕಂಪದಲ್ಲಿ ಇಲ್ಲಿಯವರೆಗೆ 32 ಜನರು ಸಾವನ್ನಪ್ಪಿದ್ದಾರೆ ಎಂದು ದೇಶದ ಅಧ್ಯಕ್ಷ ಡೆಲ್ಸಿ ರೊಡ್ರಿಗಸ್ ಅಧಿಕೃತವಾಗಿ ಘೋಷಿಸಿದ್ದಾರೆ. ಅನೇಕರು ಇನ್ನೂ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳಿವೆ.
ಪ್ರಸ್ತುತ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಅಧಿಕೃತ ಸರ್ಕಾರಿ ಅಂಕಿಅಂಶಗಳ ಹೊರತಾಗಿಯೂ, ಯುಎಸ್ ಭೂವೈಜ್ಞಾನಿಕ ಸಮೀಕ್ಷೆ, ಸಾವಿನ ಸಂಖ್ಯೆ ಇನ್ನೂ ಹೆಚ್ಚಿರಲಿದೆ ಎಂದು ಅಂದಾಜಿಸಿದೆ. ಇದು ಸುಮಾರು 10,000ದಿಂದ 1 ಲಕ್ಷ ಮಂದಿ ಸಾವಿಗೀಡಾಗಿರುವ ಶಂಕೆಯನ್ನು ವ್ಯಕ್ತಪಡಿಸಿದೆ,(ಏಜೆನ್ಸೀಸ್).