ಜೆಡಿ ವ್ಯಾನ್ಸ್ ಮತ್ತುಅವರ ಹಾನಿಯಾದ ನಿವಾಸ 
ವಿದೇಶ

ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಓಹೊಯೋ ನಿವಾಸದ ಮೇಲೆ ದಾಳಿ; ಓರ್ವನ ಬಂಧನ | JD Vance

JD Vance: ಅಮೆರಿಕಾದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಓಹಿಯೋ ನಿವಾಸದ ಮೇಲೆ ದಾಳಿ ನಡೆದಿದ್ದು, ದಾಳಿಯ ಶಂಕೆಯ ಆರೋಪದ ಮೇಲೆ ಓರ್ವನನ್ನು ಅಮೆರಿಕಾ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂದು ಸೋಮವಾರ(ಜ. 05) ವರದಿಯಾಗಿದೆ.
ಘಟನೆಯ ಸಮಯದಲ್ಲಿ ವ್ಯಾನ್ಸ್ ಕುಟುಂಬವು ಮನೆಯಲ್ಲಿ ಇರಲಿಲ್ಲ. ಮತ್ತು ಘಟನೆಯಲ್ಲಿ ಭಾಗವಹಿಸಿದ್ದಾನೆ ಎಂಬ ಸಂಶಯದ ಮೇಲೆ ಬಂಧಿಸಿರುವ ವ್ಯಕ್ತಿ ಉಪಾಧ್ಯಕ್ಷರ ನಿವಾಸವನ್ನು ಪ್ರವೇಶಿಸಿದ್ದಾನೆಂದು ಎಂಬುವುದಕ್ಕೆ ಯಾವುದೇ ಆಧಾರಗಳು ಸಿಕ್ಕಿಲ್ಲ ಎನ್ನಲಾಗಿದೆ. ಅದರೆ ಸಾಮಾಜಿಕ ಜಾಲತಾಣಗಳಲ್ಲಿ ಮನೆಯ ಕಿಟಕಿಗಳ ಗಾಜುಗಳು ಪುಡಿಪುಡಿಯಾಗಿರುವುದು ತೋರಿಸುತ್ತಿವೆ.
ಫೆಡರಲ್ ಕಾನೂನು ಜಾರಿ ಅಧಿಕಾರಿಯ ಪ್ರಕಾರ, ವಶಕ್ಕೆ ಪಡೆದಿರುವ ವ್ಯಕ್ತಿ ವ್ಯಾನ್ಸ್ ಅಥವಾ ಅವನ ಕುಟುಂಬವನ್ನು ಗುರಿಯಾಗಿಸಲು ಪ್ರಯತ್ನಿಸುತ್ತಿದ್ದನೇ ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇನ್ನೂ ಘಟನೆ ಬಗ್ಗೆ ಜೆಡಿ ವ್ಯಾನ್ಸ್ ಆಗಲಿ, ಶ್ವೇತ ಭವನ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ (ಏಜೆನ್ಸೀಸ್).