- ಉದ್ಯೋಗ ಕಸಿಯುತ್ತಿರುವ ಎಐಯಿಂದ ಹೀಗೊಂದು ಸಹಾಯ
- ಮಧ್ಯರಾತ್ರಿಯಲ್ಲಿ ಉಂಟಾದ ಸಮಸ್ಯೆಗೆ ಕೃತಕ ಬುದ್ಧಿಮತ್ತೆಯಿಂದ ಸಿಕ್ಕಿತು ಉತ್ತರ
AI: ಇದು ಡಿಜಿಲಟ್ ಯುಗ. ಅದರಲ್ಲೂ ಆರು ಇಂಚಿನ ಸ್ಮಾರ್ಟ್ಫೋನ್ ಕೈಯುಲ್ಲಿದ್ದರೆ, ಪ್ರಪಂಚವೇ ಬೇಡ ಎನ್ನುವ ಕಾಲ. ಈ ಮಧ್ಯೆ, ಹೊಚ್ಚ ಹೊಸ ಆವಿಷ್ಕಾರಗಳು ಜಗತ್ತಿಗೆ ಪರಿಚಯವಾಗುತ್ತಿದ್ದು, ಇದಕ್ಕೆಲ್ಲ ಜನರು ಬಹಳ ವೇಗವಾಗಿ ಒಗ್ಗಿಕೊಳ್ಳುತ್ತಿದ್ದಾರೆ. ಇನ್ನು ಕೃತಕ ಬುದ್ಧಿಮತ್ತೆ (ಎಐ) ಕೆಲಸ ಮಾಡಲು ಆರಂಭಿಸಿದ ಮೇಲಂತು, ಬಹುತೇಕರ ಉದ್ಯೋಗಗಳೇ ಮಾಯಾವಾಗಿಬಿಟ್ಟಿದೆ.
ಎಐ ಟೆಕ್ನಾಲಜಿ ಈಗಾಗಲೇ ಸಾಫ್ಟ್ವೇರ್ ಉದ್ಯೋಗಿಗಳ ಕೆಲಸವನ್ನು ಕಸಿದುಕೊಂಡಿದೆ. ಅದರೊಟ್ಟಿಗೆ, ಹಲವು ಕೆಲಸಗಳನ್ನು ತಾನೇ ಸುಲಭವಾಗಿ, ಕಡಿಮೆ ಸಮಯದಲ್ಲಿ ಮುಗಿಸುವ ಸಾಮರ್ಥ್ಯವನ್ನು ಬಳಕೆದಾರರಿಗೆ ಸಾಬೀತುಪಡಿಸಿದೆ. ಇದು ಉದ್ಯೋಗಿಗಳ ಜೀವನೋಪಾಯಕ್ಕೆ ಕೊಡಲಿ ಪೆಟ್ಟು ನೀಡಿರುವುದು ಸದ್ಯ ಚಿಂತಾತೀತ. ಈ ಮಧ್ಯೆ, ಕೃತಕ ಬುದ್ಧಿಮತ್ತೆಯಿಂದ ಸಾಕಷ್ಟು ಲಾಭ ಕೂಡ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಉಪಯುಕ್ತ ಕೆಲಸಗಳಿಗೆ ಬಳಕೆಯಾಗುತ್ತಿದೆ. ಗೊತ್ತಿರದ ಪ್ರಶ್ನೆಗಳು ಅಥವಾ ಇದೇನಿದು ಎಂದು ತಿಳಿದುಕೊಳ್ಳಲು ಎಐ ಸಹಾಯ ಮಾಡುತ್ತಿದೆ. ಇದಕ್ಕೆ ಇಲ್ಲೊಂದು ಘಟನೆ ಜ್ವಲಂತ ಸಾಕ್ಷಿ.
ಅಮೆರಿಕ ಮೂಲದ ಪ್ರಯಾಣಿಕರೊಬ್ಬರು, ಜಪಾನ್ಗೆ ತೆರಳಿದ್ದಾಗ, ಅಲ್ಲಿನ ಹೋಟೆಲ್ ರೂಮ್ನಲ್ಲಿ ಉಳಿದುಕೊಂಡಿದ್ದರು. ಈ ವೇಳೆ, ಜಪಾನಿನ ಭಾಷೆ ಗೊತ್ತಿರದ ಅವರು, ಇಂಗ್ಲಿಷ್ನಲ್ಲೇ ಸಿಬ್ಬಂದಿಗಳೊಂದಿಗೆ ವ್ಯವಹರಿಸಿದ್ದಾರೆ. ಆದರೆ, ರೂಮ್ನಲ್ಲಿದ್ದ ಎಸಿ ರಿಮೋಟ್ ಮೇಲಿದ್ದ ಜಪಾನ್ ಭಾಷೆಯನ್ನು ಕಂಡು ಒಂದು ನಿಮಿಷ ತಲೆಕೆಡಿಸಿಕೊಂಡಿದ್ದಾರೆ. ಮಧ್ಯರಾತ್ರಿಯಲ್ಲಿ ನಿದ್ರೆಗೆ ಭಂಗ ಉಂಟಾದ ಕಾರಣ, ಎಸಿ ಬೇಕೆನ್ನಿಸಿದೆ. ಆದರೆ, ಆ ಸಮಯದಲ್ಲಿ ಯಾರನ್ನೂ ಕರೆಯೋದು? ಏನು ಮಾಡೋದು ಎಂದು ಯೋಚಿಸಿದ ವ್ಯಕ್ತಿ, ರಿಮೋಟ್ನ ಫೋಟೋವನ್ನು ಎಐಗೆ ಹಾಕಿದ್ದೇ ತಡ ಕ್ಷಣಮಾತ್ರದಲ್ಲಿ ಸಮಸ್ಯೆ ಬಗೆಹರಿದಿದೆ.
ರಿಮೋಟ್ನ ಬಟನ್ಗಳ ಮೇಲೆ ಜಪಾನ್ ಭಾಷೆಯಿತ್ತು. ಹೀಗಾಗಿ, ಯಾವುದು ಆನ್, ಕಂಟ್ರೋಲ್ ಎಂಬುದು ಅವರಿಗೆ ತಿಳಿಯಲಿಲ್ಲ. ಈ ನಿಟ್ಟಿನಲ್ಲಿ, ಅದರ ಫೋಟೋವನ್ನು ತೆಗೆದು ಎಐಗೆ ಹಾಕಿದ ವ್ಯಕ್ತಿ, ಇದನ್ನು ಇಂಗ್ಲಿಷ್ನಲ್ಲಿ ಕೊಡು ಎಂದಿದ್ದಾರೆ. ಕೂಡಲೇ ಅದೇ ಇಮೇಜ್ ಅನ್ನು ಆಂಗ್ಲ ಭಾಷೆಯಲ್ಲಿ ಕೃತಕ ಬುದ್ಧಿಮತ್ತೆ ನೀಡಿತು. ಈ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವ್ಯಕ್ತಿ, ಎಐ ತನಗೆ ಮಾಡಿದ ಸಹಾಯವನ್ನು ಇತರರಿಗೂ ತಿಳಿಸಿದ್ದಾರೆ,(ಏಜೆನ್ಸೀಸ್).