ವಿದೇಶ

ಹಿಂದೂ ದೇವಾಲಯದಲ್ಲಿ ಭಾರತೀಯರ ಸಾಮೂಹಿಕ ಹತ್ಯೆಗೆ ಸಂಚು; ಅಮೆರಿಕದಲ್ಲಿ 19 ವರ್ಷದ ಯುವಕನ ಬಂಧನ..US Teen

  • ಭಾರತೀಯರ ಸಾಮೂಹಿಕ ಹತ್ಯೆಗೆ ಸಂಚು,19 ವರ್ಷದ ಯುವಕ ಬಂಧನ.

  • ಅಮೆರಿಕದ ಅರೋರಾ ಪ್ರದೇಶದ ಹಿಂದೂ ಪ್ರಾರ್ಥನಾ ಮಂದಿರದಲ್ಲಿ ದಾಳಿಗೆ ಸಂಚು.

  • ಕುಕ್ ಕೌಂಟಿ ನ್ಯಾಯಾಲಯದಲ್ಲಿ ಅಕ್ಟೋಬರ್ 30 ರಂದು ಮುಂದಿನ ವಿಚಾರಣೆ ನಡೆಯಲಿದೆ.

ವಾಷಿಂಗ್ಟನ್​ ಡಿಸಿ: ಅಮೆರಿಕದ ದೇವಾಲಯವೊಂದರಲ್ಲಿ ಹಿಂದೂಗಳ ಸಾಮೂಹಿಕ ಹತ್ಯೆಗೆ ಸಂಚು ರೂಪಿಸಿದ್ದ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಯುವಕ 19 ವರ್ಷದ ಪ್ಯಾಲಟೈನ್ ನಿವಾಸಿ ಅಲೆಕ್ಸಾಂಡ್ರೋಸ್ ಪಪೊರಾಕಿಸ್ ಎಂದು ಗುರುತಿಸಲಾಗಿದೆ. ಅಮೆರಿಕದ ಇಲಿನಾಯ್ಸ್‌ನ ಗ್ರೇಟರ್ ಚಿಕಾಗೋ ವ್ಯಾಪ್ತಿಯ ಅರೋರಾ ಪ್ರದೇಶದಲ್ಲಿರುವ ಹಿಂದೂ ದೇವಾಲಯವೊಂದರಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆಸಿ ಭಾರತೀಯ ಮೂಲದವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಎನ್ನಲಾಗಿದೆ.

ನವರಾತ್ರಿ ಹಬ್ಬದ ಆರಂಭದ ಸಂದರ್ಭದಲ್ಲೇ ಈ ಸಂಚು ಬಯಲಿಗೆ ಬಂದಿದ್ದು, ಇದು ಭಾರತೀಯ ಮೂಲದ ಹಿಂದೂ ಸಮುದಾಯದಲ್ಲಿ ಆತಂಕ ಮೂಡಿಸಿದೆ. ಓಹಿಯೋದ ರಿಚ್‌ಮಂಡ್ ಹೈಟ್ಸ್‌ನಲ್ಲಿರುವ ಶ್ರೀ ಸ್ವಾಮಿನಾರಾಯಣ ವತ್ಸಲ್ ಧಾಮ್ ಹಿಂದೂ ಮಂದಿರ ಧ್ವಂಸಗೊಳಿಸಿದ ಘಟನೆ ನಡೆದ ಕೇವಲ ಎರಡು ವಾರಗಳ ಬಳಿಕ ಈ ಕೃತ್ಯ ಬೆಳಕಿಗೆ ಬಂದಿದೆ.

ಭಾರತೀಯರೇ ಗುರಿ

ಯುವಕನ ಬಳಿ ಇದ್ದ ಬಿಳಿಯರ ಪ್ರಾಬಲ್ಯವಾದಿ ಸಿದ್ಧಾಂತ ಮತ್ತು ಭಾರತ ಮೂಲದವರ ವಿರುದ್ಧ ಹಿಂಸಾಚಾರ ಪ್ರಚೋಧಿಸುವ ಲೇಖನವಿದ್ದ ಬರಹಗಳನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳಲಾಗಿದೆ. ಜೊತೆಗೆ ಆತನಿಂದ ಆರೋಪಿಯು ರೈಫಲ್, ಮ್ಯಾಗಜೀನ್‌ಗಳು, ಬಾಡಿ ಆರ್ಮರ್ ಹಾಗೂ ಟ್ಯಾಕ್ಟಿಕಲ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ.

ಅ.10ರಂದು ಮಾಹಿತಿ

ಸಾಮೂಹಿಕ ಗುಂಡಿನ ದಾಳಿ ನಡೆಸಲು ಸಂಚು ರೂಪಿಸಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ ಎಂದು ಅ.10ರಂದು ಪಲಟೈಲ್​ ಪೊಲೀಸ್​ ಇಲಾಖೆ ಮೌಂಡ್​ ಪ್ರಾಸ್ಪೆಟ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಎಲೆಕ್ಟ್ರಾನಿಕ್​​ ಸಂವನದ ಮೂಲಕ ಪಪೊರಕಿಸ್​ನಿಂದ ಮಾಹಿತಿ ಸಿಕ್ಕಿರುವ ಬಗ್ಗೆ ವ್ಯಕ್ತಿಯೊಬ್ಬರು ಬಹಿರಂಗಪಡಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಅಕ್ಟೋಬರ್ 11ರ ಸಂಜೆ ಆರೋಪಿ ತನ್ನ ಮನೆಯಿಂದ ಹೊರಡುತ್ತಿದ್ದಾಗ ಆತನನ್ನು ವಶಕ್ಕೆ ಪಡೆದರು. ಆತನ ಮನೆಯಲ್ಲಿ ನಡೆಸಿದ ಶೋಧದ ವೇಳೆ ಒಂದು ರೈಫಲ್, ಹತ್ತಾರು ಲೋಡೆಡ್ ರೈಫಲ್ ಮ್ಯಾಗಜೀನ್‌ಗಳು, ನೂರಾರು ಸುತ್ತಿನ ಮದ್ದುಗುಂಡುಗಳು ಮತ್ತು ಶ್ವೇತ ವರ್ಣಭೇದ ನೀತಿಯ ನಿಲುವುಗಳನ್ನು ಬಿಂಬಿಸುವ ಪ್ಯಾಚ್‌ಗಳು ದೊರೆತಿವೆ.

'ಗನ್ ಜಾಮ್'ನಿಂದ ತಪ್ಪಿದ ದುರಂತ

ಅರೋರಾ ಪ್ರದೇಶದ ಹಿಂದೂ ದೇವಾಲಯದ ಮೇಲೆ ಅಕ್ಟೋಬರ್ 11 ರಂದು ದಾಳಿ ನಡೆಸಲು ಪಪೋರಾಕಿಸ್ ಯೋಜನೆ ಹಾಕಿದ್ದನು. ತಾನು 'ಸೊಪತಿಕ್ ಶ್ವೇತ ವರ್ಣಭೇದ ನೀತಿಯ ನವ-ನಾಸಿ' ಎಂದು ಕರೆದುಕೊಂಡಿದ್ದ ಈತ, ಪ್ರತಿದಿನ ಸಾಮೂಹಿಕ ಹತ್ಯೆಯ ಬಗ್ಗೆ ಕಲ್ಪನೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದನು. ಹಿಂದೂ ಅಮೆರಿಕನ್ ಫೌಂಡೇಶನ್ ಮಾಹಿತಿಯ ಪ್ರಕಾರ, ಶಸ್ತ್ರಸಜ್ಜಿತನಾಗಿ ದೇವಾಲಯದ ಬಳಿ ತೆರಳಿದ್ದ ಆರೋಪಿ ಗುಂಡು ಹಾರಿಸಲು ಯ ಪ್ರಯತ್ನಿಸಿದ್ದಾನೆ. ಆದರೆ ಅದೃಷ್ಟವಶಾತ್ ಆತನ ಗನ್ ಜಾಮ್ (ಆದ ಕಾರಣ ದೊಡ್ಡ ಅನಾಹುತ ತಪ್ಪಿದೆ.

ಅ.30 ರಂದು ಮತ್ತೆ ವಿಚಾರಣೆ

19 ವರ್ಷದ ಯುವಕ ಸದ್ಯ ಭಯೋತ್ಪಾದನಾ ಬೆದರಿಕೆ ಹಾಗೂ ಪರವಾನಗಿ ಇಲ್ಲದ ಅಥವಾ ನಿರ್ಬಂಧಿತ ಶಸ್ತ್ರಾಸ್ತ್ರ ಹೊಂದಿರುವ ಆರೋಪದ ಮೇಲೆ ಮೊಕದ್ದಮೆ ಎದುರಿಸುತ್ತಿದ್ದಾನೆ. ರೋಲಿಂಗ್ ಮೆಡೋಸ್‌ನಲ್ಲಿರುವ ಕುಕ್ ಕೌಂಟಿ ನ್ಯಾಯಾಲಯದಲ್ಲಿ ಆತನನ್ನು ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆರೋಪಿಯನ್ನು ಬಂಧನದಲ್ಲಿಡಲು ಆದೇಶಿಸಿದ್ದಾರೆ. ನ್ಯಾಯಾಲಯವು ಜಾಮೀನು ರಹಿತ ಬಂಧನಕ್ಕೆ ಆದೇಶಿಸಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ನಿಗದಿಪಡಿಸಿದೆ, (ಏಜೆನ್ಸೀಸ್).