ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಟ್ರಂಪ್ ಆಕ್ರೋಶ: ಅಮೆರಿಕದಿಂದ ಮತ್ತೆ ಭೀಕರ ವೈಮಾನಿಕ ದಾಳಿ ಆರಂಭ! US Strikes  
ವಿದೇಶ

ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಟ್ರಂಪ್ ಆಕ್ರೋಶ: ಅಮೆರಿಕದಿಂದ ಮತ್ತೆ ಭೀಕರ ವೈಮಾನಿಕ ದಾಳಿ ಆರಂಭ! US Strikes

ಪ್ರಮುಖ ಮುಖ್ಯಾಂಶಗಳು

  • ಜೋರ್ಡಾನ್ ವಾಯುನೆಲೆ ಮೇಲೆ ಇರಾನ್ ಕ್ಷಿಪಣಿ ದಾಳಿ ಅಮೆರಿಕ ಸೇನಾ ಕಾರ್ಯಾಚರಣೆ ಪುನಾರಂಭ
  • ಇರಾನ್ ಕ್ಷಿಪಣಿ ದಾಳಿಗೆ ಟ್ರಂಪ್ ಆಕ್ರೋಶ ಅಮೆರಿಕದಿಂದ ಭೀಕರ ವೈಮಾನಿಕ ದಾಳಿ ಆರಂಭ
  • ಇರಾನ್ ಪಡೆಗಳಿಗೆ ತಕ್ಕೇಟು ನೀಡಲು ಮುಂದಾದ ಅಮೆರಿಕ, ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಉದ್ವಿಗ್ನತೆ
  • ಜೋರ್ಡಾನ್ ನೆಲೆ ಮೇಲೆ ಇರಾನ್ ದಾಳಿ ಮಾಡಿದ ಬೆನ್ನಲ್ಲೇ ಯುದ್ಧ ವಿರಾಮ ಮುರಿದು ಮುನ್ನುಗ್ಗಿದ ಅಮೆರಿಕ
ವಾಷಿಂಗ್ಟನ್​: ಅಮೆರಿಕದ ಸೇನಾ ನೆಲೆಯೊಂದರ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಅಮೆರಿಕ ಸೇನೆಯು ಇರಾನ್ ಮೇಲೆ ವೈಮಾನಿಕ ದಾಳಿಗಳನ್ನು ( US Strikes ) ನಡೆಸಿದ್ದು, ಮತ್ತೆ ತನ್ನ ದಾಳಿಯನ್ನು ಆರಂಭಿಸಿದೆ. 
ಮಾತುಕತೆಗಾಗಿ ಕಳೆದ ವಾರವಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು  ಬಾಂಬ್ ದಾಳಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದರು. ರಾಜತಾಂತ್ರಿಕ ಮಾತುಕತೆಗೆ ಅವಕಾಶ ಕಲ್ಪಿಸಿದ ನಂತರ ಇರಾನ್ ಮೇಲೆ ನಡೆದ ಮೊದಲ ನೇರ ಅಮೆರಿಕದ ದಾಳಿ ಇದಾಗಿದೆ.
ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ತಕ್ಕ ತಿರುಗೇಟು ನೀಡಲು ಈ ವೈಮಾನಿಕ ದಾಳಿಗಳನ್ನು ನಡೆಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಸ್ಪಷ್ಟಪಡಿಸಿದ್ದು, ನಿಖರವಾಗಿ ರಾತ್ರಿ 8 ಗಂಟೆಗೆ ಈ ಕಾರ್ಯಾಚರಣೆ ಆರಂಭವಾಯಿತು ಎಂದು ತಿಳಿಸಿದೆ.
ಇರಾನ್‌ನ ದಾಳಿಗೆ ತೀವ್ರವಾಗಿ ತಿರುಗೇಟು ನೀಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಈ ದಾಳಿಗಳು ನಡೆದಿವೆ. ಈ ಕುರಿತು ಫಾಕ್ಸ್ ನ್ಯೂಸ್ ಜತೆಗೆ ಮಾತನಾಡಿದ್ದ ಟ್ರಂಪ್​, ಇರಾನ್ ಮೇಲೆ ತೀವ್ರವಾಗಿ ಪ್ರಹಾರ ನಡೆಸುವುದಾಗಿ ಎಚ್ಚರಿಸಿದರು. ಅಲ್ಲದೆ, ಇರಾನ್ ತನ್ನ ದಾಳಿಯನ್ನು ಒಪ್ಪಿಕೊಂಡು ದೊಡ್ಡ ತಪ್ಪು ಮಾಡಿದೆ ಎಂದು ಟ್ರಂಪ್​ ಗುಡುಗಿದರು.
ಅಮೆರಿಕದ ಜೊತೆಗಿನ ಮಾತುಕತೆಗಾಗಿ ಕಳೆದ ಶುಕ್ರವಾರವಷ್ಟೇ ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದ ಯುದ್ಧದ ವಿರಾಮವನ್ನು ಇರಾನ್‌ನ ಜೋರ್ಡಾನ್ ಮೇಲೆ ಕ್ಷಿಪಣಿ ದಾಳಿ ಮಾಡುವ ಮೂಲಕ ಅಮೆರಿಕ ಮತ್ತೆ ಯುದ್ಧವನ್ನು ಆರಂಭಿಸಿದೆ. ಕೇವಲ ಐದು ದಿನಗಳ ಅಂತರದಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸೇನಾ ದಾಳಿಯನ್ನು ಪುನರಾರಂಭಿಸಿದ್ದಾರೆ.
ಅಂದಹಾಗೆ, ಜೋರ್ಡಾನ್‌ನಲ್ಲಿರುವ ಅಮೆರಿಕದ ವಾಯುನೆಲೆ ಹಾಗೂ ಕಮಾಂಡ್ ಸೆಂಟರ್ ಅನ್ನು ಗುರಿಯಾಗಿಸಿಕೊಂಡು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (IRGC) ಮಿಲಿಟರಿ ಕಾರ್ಯಾಚರಣೆ ನಡೆಸಿತ್ತು. ಆದಾಗ್ಯೂ, ಇರಾನ್ ಹಾರಿಸಿದ ಎಲ್ಲಾ ಕ್ಷಿಪಣಿಗಳನ್ನು ಅಮೆರಿಕದ ಸೇನೆಯು ಯಶಸ್ವಿಯಾಗಿ ತಡೆದು ನಾಶಪಡಿಸಿದೆ ಎಂದು ವರದಿಯಾಗಿದೆ. 
ಮತ್ತೊಂದೆಡೆ, ಅಮೆರಿಕದ ಬೆದರಿಕೆಗಳು ಮುಂದುವರಿದರೆ ಟೆಹರಾನ್​ ಕಡೆಯಿಂದಲೂ ಪ್ರತಿರೋಧ ಮುಂದುವರಿಯಲಿದೆ ಎಂದು ಇರಾನ್ ಎಚ್ಚರಿಸಿದೆ. ಇದರ ಬೆನ್ನಲ್ಲೇ, ಹಾರ್ಮುಜ್ ಜಲಸಂಧಿಯ ಅನಧಿಕೃತ ಮಾರ್ಗದ ಮೂಲಕ ಸಾಗಲು ಯತ್ನಿಸಿದ ಮೂರು ತೈಲ ಟ್ಯಾಂಕರ್‌ಗಳನ್ನು ತಮ್ಮ ನೌಕಾಪಡೆಯು ಗುರಿಯಾಗಿಸಿರುವುದಾಗಿ ಐಆರ್‌ಜಿಸಿ (IRGC) ತಿಳಿಸಿದೆ, (ಏಜೆನ್ಸೀಸ್​).