ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಾರ್ಮುಜ್ ಜಲಸಂಧಿ 
ವಿದೇಶ

ಹಾರ್ಮುಜ್ ಜಲಸಂಧಿಗೆ ನುಗ್ಗಲಿದೆ ಅಮೆರಿಕ ಸೈನ್ಯ: ತೈಲ ಟ್ಯಾಂಕರ್‌ಗಳಿಗೆ ಯುಎಸ್ ನೌಕಾಪಡೆ ಬೆಂಗಾವಲು; ಡೊನಾಲ್ಡ್ ಟ್ರಂಪ್ ಆದೇಶ | Strait Of Hormuz

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಮುಂದುವರೆದ ಮಹಾಯುದ್ಧ
  • ನಾಲ್ಕು ದಿನದಿಂದ ಸ್ಥಗಿತವಾಗಿರುವ ಹಾರ್ಮುಜ್ ಜಲಸಂಧಿ
  • ಹಾರ್ಮುಜ್ ಜಲಸಂಧಿಯಲ್ಲಿ ಸಾಗುವ ಹಡಗುಗಳಿಗೆ ಅಮೆರಿಕ ಸೇನೆ ಬೆಂಗಾವಲು
  • ಹಾರ್ಮುಜ್ ಜಲಸಂಧಿ ಸ್ಥಗಿತದಿಂದ ತೈಲ ಮಾರುಕಟ್ಟೆಯಲ್ಲಿ ಭಾರೀ ತಲ್ಲಳ
ವಾಷಿಂಗ್​ಟನ್​: ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಮುಂದುವರೆದಿದ್ದು, ಜಾಗತಿಕ ತೈಲ ಸರಬರಾಜಿನ ಮಾರ್ಗವಾದ ಹಾರ್ಮುಜ್ ಜಲಸಂಧಿ(Strait Of Hormuz)ಯಲ್ಲಿ ಸಂಚರಿಸುವ ತೈಲ ಟ್ಯಾಂಕರ್​​ಗಳಿಗೆ ಬೆಂಗಾವಲವನ್ನು ನೀಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಯುಎಸ್​ ನೌಕಾಪಡೆಗೆ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ಇರಾನ್​ ಮತ್ತು ಅಮೆರಿಕ ನಡುವಿನ ಸಂಘರ್ಷದಲ್ಲಿ ಇತರೆ ರಾಷ್ಟ್ರಗಳ ಆರ್ಥಿಕತೆಗೆ ತೊಂದರೆ ಉಂಟಾಗುವ ಮತ್ತು ತೈಲ ಟ್ಯಾಂಕರ್​ಗಳು ಮಿಸೈಲ್​ ಮತ್ತು ಡ್ರೋನ್​ ದಾಳಿಗೆ ತುತ್ತಾದರೆ ಭಾರಿ ಅನಾಉತ ಸಂಭವಿಸುವ ಸಾಧ್ಯತೆಯಿರುವ ಕಾರಣ, ಯುನೈಟೆಡ್ ಸ್ಟೇಟ್ಸ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (DFC) ಗೆ ಕೊಲ್ಲಿ ಮೂಲಕ ಪ್ರಯಾಣಿಸುವ ಎಲ್ಲಾ ಸಮುದ್ರ ವ್ಯಾಪಾರದ, ವಿಶೇಷವಾಗಿ ಇಂಧನದ, ಆರ್ಥಿಕ ಭದ್ರತೆಗಾಗಿ ರಾಜಕೀಯ ಅಪಾಯ ವಿಮೆ ನೀಡುವಂತೆ ತಿಳಿಸಲಾಗಿದೆ.

ಬೆಂಗಾವಲಿಗೆ ಅಮೆರಿಕದ ನೌಕಾಪಡೆ

ಹಾರ್ಮುಜ್ ಜಲಸಂಧಿ ಮಾರ್ಗದಲ್ಲಿ ಸಂಚರಿಸುವ ತೈಲ್ ಟ್ಯಾಂಕರ್​ ಮತ್ತು ವ್ಯಾಪಾರಿ ಸಾಮಾಗ್ರಿಗಳನ್ನು ಹೊತ್ತೊಯ್ಯುವ ವಾಹನಗಳಿಗೆ ಯುನೈಟೆಡ್ ಸ್ಟೇಟ್ಸ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್(DFC), ಆರ್ಥಿಕ ಭದ್ರತೆಗಾಗಿ ರಾಜಕೀಯ ಅಪಾಯ ವಿಮೆ ನೀಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಆದೇಶಿಸಿದ್ದಾರೆ.
ಅಗತ್ಯವಿದ್ದರೆ, ಹಾರ್ಮುಜ್ ಜಲಸಂಧಿ ಮಾರ್ಗದಲ್ಲಿ ಸಂಚರಿಸುವ ತೈಲ್ ಟ್ಯಾಂಕರ್​ಗಳಿಗೆ ರಕ್ಷಣೆಯ ಬೆಂಗಾವಲನ್ನು ನೀಡಲು ಅಮೆರಿಕದ ನೌಕಾಪಡೆಯನ್ನು ಬಳಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಅಮೆರಿಕವು ಜಗತ್ತಿನ ಶಕ್ತಿಶಾಲಿ ಮಿಲಿಟರಿಯಾಗಿದ್ದು, ಈ ಮಾರ್ಗದಲ್ಲಿ ವ್ಯಾಪರಕ್ಕೆ ಯಾವುದೇ ಅಪಾಯವಾಗದಂತೆ ನಾವು ನೋಡಿಕೊಳ್ಳುತ್ತೆವೆ, ಇನ್ನೂ ಹೆಚ್ಚಿನ ಮಿಲಿಟರಿ ಕ್ರಮಗಳನ್ನು ನಾವು ತೆಗೆದುಕೊಳ್ಳಲಿದ್ದೆವೆ ಎಂದು ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತಿಳಿಸಿದ್ದಾರೆ.

ತೈಲ ಬೆಲೆ ಹೆಚ್ಚಳ!

ಸತತ ನಾಲ್ಕನೇ ದಿನವೂ ಹಾರ್ಮುಜ್ ಜಲಸಂಧಿ ಮುಚ್ಚಿರುವ ಕಾರಣ, ಕಚ್ಚಾ ತೈಲದ ಬೆಲೆ ಬ್ಯಾರೆಲ್​ಗೆ 80 ಡಾಲರ್​ ದಾಟಿದ್ದು, ಈ ಪರಿಸ್ಥಿತಿ ಹೀಗೆ ಮುಂದುವರೆದರೆ ಆದಷ್ಟು ಬೇಗ 100 ಡಾಲರ್​ ದಾಟಲಿದೆ ಎಂದು ಹೇಳಲಾಗುತ್ತಿದೆ.
ಇಂಧನ ಮಾರುಕಟ್ಟೆಯಲ್ಲಿ ಈ ಹಾರ್ಮುಜ್ ಜಲಸಂಧಿ ಪ್ರಮುಖ ಚೆಕ್​ಪಾಯಿಂಟ್​ ಆಗಿದ್ದು, ವಿಶ್ವದ 20 ಶೇ. ತೈಲ ಟ್ಯಾಂಕರ್​ಗಳು ಈ ಮಾರ್ಗದ ಮೂಲಕವೇ ಸಾಗುತ್ತವೆ. ದೀರ್ಘಕಾಲದವರೆಗೆ ಈ ಜಲಸಂಧಿ ಕಾರ್ಯನಿರ್ವಹಿಸದೇ ಹೋದರೆ ಅಂತರಾಷ್ಟ್ರೀ ಮಾರುಕಟ್ಟೆಯಲ್ಲಿ ಭಾರೀ ತಲ್ಲಳ ಉಂಟಾಗಲಿದೆ ಎನ್ನುವದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ,(ಏಜನ್ಸೀಸ್​).