ಇರಾನ್ ಸುಪ್ರೀಂ ಲೀಡರ್ ಅಂತ್ಯಕ್ರಿಯೆ ಕ್ಷಣಗಳು
- ಕುವೈತ್, ಕತಾರ್ ಮತ್ತು ಬಹ್ರೇನ್ ಮೇಲೆ ಇರಾನ್ ದಾಳಿ
- ಯುಎಸ್ ದಾಳಿಯಲ್ಲಿ ಇರಾನ್14 ಸಾವು, 78 ಮಂದಿಗೆ ಗಾಯ
- ಅಮೆರಿಕ ನಡೆಸಿದ ದಾಳಿಗೆ ಇದು ಪ್ರತಿಕಾರ ಎಂದ ಇರಾನ್
US-Iran War: ಕೆಲವು ವಾರಗಳ ಹಿಂದೆಯಷ್ಟೇ ಇರಾನ್ ಮತ್ತು ಅಮೆರಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿ, ಹೊರ್ಮುಜ್ ಜಲಮಾರ್ಗವನ್ನು ಸಂಚಾರಕ್ಕೆ ಮುಕ್ತ ಮಾಡಿತ್ತು. ಆದರೀಗ, ಡೀಲ್ ಕೇವಲ ಮಾತಿಗಷ್ಟೇ ಎನ್ನುವಂತೆ ಮತ್ತೊಮ್ಮೆ ಪರಸ್ಪರ ದಾಳಿ ಪ್ರಾರಂಭಿಸಿರುವ ಎರಡೂ ರಾಷ್ಟ್ರಗಳು, ಇದೀಗ ಎರಡನೇ ಬಾರಿಗೆ ಯುದ್ಧದ ಕಾರ್ಮೋಡಕ್ಕೆ ಸಾಕ್ಷಿಯಾಗಿವೆ.
ಅಮೆರಿಕ ಎರಡು ರಾತ್ರಿ ತಮ್ಮ ದೇಶದ ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿದ್ದಕ್ಕೆ ಪ್ರತಿಕಾರವಾಗಿ ಇದೀಗ ಟ್ರಂಪ್ನ ಮಿತ್ರ ರಾಷ್ಟ್ರಗಳಾದ ಬಹ್ರೇನ್, ಕುವೈತ್ ಮತ್ತು ಕತಾರ್‌ನಲ್ಲಿನ ಯುಎಸ್ ನೆಲೆ ಮತ್ತು ಕಾರ್ಯತಂತ್ರದ ಕೇಂದ್ರಗಳ ಮೇಲೆ ಅಟ್ಯಾಕ್ ಮಾಡಿರುವುದಾಗಿ ಇರಾನ್ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಬುಶೆಹರ್, ಚಬಹಾರ್, ಬಂದರ್ ಅಬ್ಬಾಸ್ ಮತ್ತು ಸಿರಿಕ್ ಸೇರಿದಂತೆ ಹೊರ್ಮುಜ್ ಜಲಸಂಧಿಯ ಉದ್ದಕ್ಕೂ ಅಮೆರಿಕ ನಡೆಸಿದ ಎರಡು ದಿನಗಳ ದಾಳಿಯಲ್ಲಿ 14 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 78 ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ ತಿಳಿಸಿದೆ. ಅತ್ತ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹೊರ್ಮುಜ್ ಮೂಲಕ ಸಾಗಿಸುವ ಹಡಗುಗಳ ಮೇಲೆ ಇರಾನಿನ ದಾಳಿಗೆ ಇದು ಪ್ರತ್ಯುತ್ತರ ಎಂದು ಹೇಳಿದ್ದಾರೆ.