ಅಮೆರಿಕ: ಅಮೆರಿಕ ಮತ್ತು ಇರಾನ್ ನಡುವೆ(US-Iran Talks) ನಡೆಯುತ್ತಿರುವ ತೀವ್ರ ಸಂಘರ್ಷದ ನಡುವೆ, ಶಾಂತಿ ಮಾತುಕತೆ ಕುರಿತು ಮಹತ್ವದ ಬೆಳವಣಿಗೆಗಳು ಕಂಡುಬರುತ್ತಿವೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇರಾನ್ ಜೊತೆ ನಡೆಯುತ್ತಿರುವ ಮಾತುಕತೆಗಳು ಉತ್ತಮ ದಿಕ್ಕಿನಲ್ಲಿ ಸಾಗುತ್ತಿದ್ದು, ಶುಕ್ರವಾರದೊಳಗೆ ಒಳ್ಳೆಯ ಸುದ್ದಿಯು ಬರಬಹುದು ಎಂದು ಸೂಚನೆ ನೀಡಿದ್ದಾರೆ.
ಇತ್ತೀಚಿನ ಹೇಳಿಕೆಯಲ್ಲಿ ಟ್ರಂಪ್, ಮಾತುಕತೆಗಳು “positive direction”ನಲ್ಲಿ ಸಾಗುತ್ತಿವೆ ಎಂದು ಹೇಳಿದ್ದು, ಮುಂದಿನ ಕೆಲ ದಿನಗಳು ಅತ್ಯಂತ ಮಹತ್ವದ್ದಾಗಿರಲಿವೆ ಎಂದು ತಿಳಿಸಿದ್ದಾರೆ.
ಯುದ್ಧ ಮತ್ತು ಮಾತುಕತೆ ಒಂದೇ ಸಮಯದಲ್ಲಿ
ಅಮೆರಿಕಾ–ಇರಾನ್ ನಡುವಿನ ಉದ್ವಿಗ್ನತೆ ಇನ್ನೂ ಕಡಿಮೆಯಾಗಿಲ್ಲ. ಇತ್ತೀಚೆಗೆ ಎರಡು ರಾಷ್ಟ್ರಗಳ ನಡುವೆ ನಡೆದ ಸಂಘರ್ಷವು ಮಧ್ಯಪ್ರಾಚ್ಯ ಪ್ರದೇಶದಲ್ಲಿ ಆತಂಕ ಹೆಚ್ಚಿಸಿದೆ. ಈ ನಡುವೆ, ಅಮೆರಿಕಾ ಸರ್ಕಾರವು ಇರಾನ್ ವಿರುದ್ಧ ಸೈನಿಕ ಕ್ರಮಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿ ceasefire ಮುಂದುವರಿಸುವ ನಿರ್ಧಾರ ಕೈಗೊಂಡಿದೆ. ಆದರೆ, ಈ ceasefire ಶಾಶ್ವತವಲ್ಲ ಎಂಬುದನ್ನು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಅವರು ಇರಾನ್ ಸರ್ಕಾರದಿಂದ ಒಂದು “unified proposal” ಬರಲು ಕಾಯುತ್ತಿರುವುದಾಗಿ ಹೇಳಿದ್ದು, ಅದರ ಆಧಾರದ ಮೇಲೆ ಮುಂದಿನ ಮಾತುಕತೆ ನಡೆಯಲಿದೆ.
ಶುಕ್ರವಾರ ಮಹತ್ವದ ದಿನ ಯಾಕೆ?
ಮಾಹಿತಿಗಳ ಪ್ರಕಾರ, ಅಮೆರಿಕಾ ಮತ್ತು ಇರಾನ್ ನಡುವೆ ಮುಂದಿನ ಹಂತದ ಮಾತುಕತೆಗಳು ಈ ವಾರವೇ ನಡೆಯುವ ಸಾಧ್ಯತೆ ಇದೆ. ಪಾಕಿಸ್ತಾನ ಮಧ್ಯವರ್ತಿತ್ವದಲ್ಲಿ ಚರ್ಚೆಗಳು ನಡೆಯಬಹುದು. ಅಲ್ಲದೆ, ಎರಡೂ ದೇಶಗಳು ಒಪ್ಪಂದದತ್ತ ಸಾಗುವ ಸೂಚನೆ. ಟ್ರಂಪ್ “good news” ಸೂಚನೆ ನೀಡಿರುವುದು ಕುತೂಹಲ ಹೆಚ್ಚಿಸಿದೆ. ಕೆಲ ವರದಿಗಳ ಪ್ರಕಾರ, ಶುಕ್ರವಾರದೊಳಗೆ ಮಹತ್ವದ ಪ್ರಗತಿ ಅಥವಾ ಒಪ್ಪಂದದ ಸುಳಿವು ಹೊರಬರುವ ಸಾಧ್ಯತೆ ಇದೆ,(ಏಜೆನ್ಸೀಸ್).