ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತಣಿಸಲು ಚೀನಾ ಮಧ್ಯಸ್ಥಿಕೆಯಲ್ಲಿ ಕತಾರ್‌ನ ದೋಹಾದಲ್ಲಿ ಆಯೋಜನೆಗೊಳ್ಳುತ್ತಿರುವ ಅಮೆರಿಕ ಮತ್ತು ಇರಾನ್ ಶಾಂತಿ ಸಭೆ. 
ವಿದೇಶ

ಚೀನಾ ಮಧ್ಯಸ್ಥಿಕೆಯಲ್ಲಿ ಅಮೆರಿಕ-ಇರಾನ್ ಶಾಂತಿ ಮಂತ್ರ: ಕತಾರ್‌ನಲ್ಲಿ ಮಹತ್ವದ ಸಭೆಗೆ ಸಜ್ಜಾದ ವೇದಿಕೆ! US Iran Talks

ವಾಷಿಂಗ್ಟನ್​: ಹೆಚ್ಚು ಕಡಿಮೆ ಒಂದು ವರ್ಷದಿಂದ ನಡೆಯುತ್ತಿರುವ ಅಮೆರಿಕ ಮತ್ತು ಇರಾನ್​ ಸಂಘರ್ಷ ಈಗ ರಾಜತಾಂತ್ರಿಕ ಒಪ್ಪಂದತ್ತ ಮುಖ ಮಾಡುತ್ತಿದೆ. ಮಿಸೈಲ್​ಗಳ ಬದಲಾಗಿ ಮಾತುಕತೆ ನಡೆಸಿದರೆ ಮಾತ್ರ ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯಾಗಲಿದೆ ಎಂದು ಉಭಯ ದೇಶಗಳಿಗೆ ಮನವರಿಕೆಯಾಗಿದೆ.

ಹೀಗಾಗಿ, ಇನ್ನೇನು ಕೆಲವೇ ದಿನಗಳಲ್ಲಿ ಅಮೆರಿಕ ಮತ್ತು ಇರಾನ್​ ಮಾತುಕತೆಗೆ ಮುಂದಾಗಲಿದ್ದು, ಚೀನಾ ಈ ಮಾತುಕತೆಯ ನೇತೃತ್ವ ವಹಿಸಲಿದೆ ಎಂಬ ವದಂತಿ ಕೇಳಿಬರುತ್ತಿದೆ. ಈ ಶಾಂತಿ ಸಭೆಯನ್ನು ಟರ್ಕಿಯ ಇಸ್ತಾನ್​ಬುಲ್​ ಬದಲಿಗೆ ಕತಾರ್​ ದೇಶದ ದೋಹಾನಲ್ಲಿ ನಡೆಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಪರಮಾಣು ತ್ಯಜಿಸಿ, ಹೊರ್ಮುಜ್​ ದ್ವಾರ ತೆರೆಯಿರಿ!

ಈ ಒಪ್ಪಂದಲ್ಲಿ ಈ ಮೊದಲೇ ತಿಳಿಸಿದಂತೆ, ಇರಾನ್​ ಪರಮಾಣು ದೇಶವಾಗಬಾರದು, ಬೇರೆ ದೇಶಗಳಿಂದ ಯುರೇನಿಯಂ ಅನ್ನು ಪಡೆಯಬಾರದು ಹಾಗೂ ಸಂಗ್ರಹಿಸ ಕೂಡದು. ಅಂತೆಯೇ ವಿಶ್ವದ ಪ್ರಮುಖ ವ್ಯಾಪಾರಿ ಮಾರ್ಗವಾಗಿರುವ ಹೊರ್ಮುಜ್​ ಜಲಸಂಧಿಯನ್ನು ಕೂಡಲೇ ತೆರೆಯಬೇಕೆನ್ನುವುದು ಅಮೆರಿಕದ ಷರತ್ತಾಗಿದೆ. ಈ ಷರತ್ತುಗಳಿಗೆ ಇರಾನ್​ ಒಪ್ಪಿಕೊಂಡರೆ, ಈಗ ಹೇರಿರುವ ಆರ್ಥಿಕ ದಿಗ್ಭಂದನವನ್ನು ಹಿಂಪಡೆಯುವುದಾಗಿ ಅಮೆರಿಕ ಆಶ್ವಾಸನೆ ನೀಡಿದೆ ಎನ್ನಲಾಗಿದೆ.

ಕತಾರ್​ ತಲುಪಿದ ಇರಾನ್​ ಡೆಲಿಗೇಷನ್​!

ಇನ್ನೂ ಕರಾತ್​ ದೇಶಕ್ಕೆ ಇರಾನ್​ ಡೆಲಿಗೇಷನ್​ ಸದಸ್ಯರು ತಲುಪಿದ್ದು, ಅವರು ಅಮೆರಿಕ ನೀಡಿರುವ ಆಫರ್​ ಹಾಗೂ ಷರತ್ತುಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಆದರೆ, ಈ ಸಭೆಗೆ ಇರಾನ್​ನ ಮಿತ್ರ ದೇಶವಾದ ಟರ್ಕಿ, ಪಾಕಿಸ್ತಾನ ಹಾಗೂ ಲೆಬನಾನ್​ ಅನ್ನು ಆಮಂತ್ರಿಸಿಲ್ಲ ಎನ್ನುವುದು ವಿಷೇಶವಾಗಿದೆ. ಆದರೆ, ಈ ಮೊದಲೂ ಅಮೆರಿಕ ಇದೇ ಷರತ್ತನ್ನು ಇರಾನ್​ ಮುಂದಿಟ್ಟಿತ್ತು. ಆದರೆ ಆಗ ಈ ಮಾತುಕತೆ ಮುರಿದು ಬಿದ್ದಿತ್ತು. ಈಗ ಚೀನಾ ಮಧ್ಯಸ್ಥಿಕೆಯಲ್ಲಿ ನಡೆಯಲಿರುವ ಈ ಶಾಂತಿ ಒಪ್ಪಂದ ನಿಜಕ್ಕೂ ಶಾಂತಿ ಸ್ಥಾಪನೆಗೆ ನಾಂದಿ ಹಾಡುತ್ತದೆಯೇ ಎಂದು ಜಗತ್ತು ಎದುರು ನೋಡುತ್ತಿದೆ.

ನಮಗೆ ಯುದ್ಧ ಮುಗಿಸುವ ಆತುರವಿಲ್ಲ!

ಆದರೆ, ಇರಾನ್​ ಜತೆಗಿನ ಸಂಘರ್ಷದ ಬಗ್ಗೆ ಈ ಹಿಂದೆ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ನಮಗೆ ಈ ಯುದ್ಧವನ್ನು ಕೂಡಲೇ ಮುಗಿಸುವ ಯಾವುದೇ ಆತುರವಿಲ್ಲ. ಅಮೆರಿಕದ ಷರತ್ತುಗಳನ್ನು ಇರಾನ್​ ಇಪ್ಪಿಕೊಳ್ಳುವವರೆಗೆ ನಾನು ಯುದ್ಧವನ್ನು ನಡೆಸುತ್ತಿರುತ್ತೇವೆ ಎಂದು ಹೇಳಿಕೆ ನೀಡಿದ್ದರು.

ಸಂಘರ್ಷ ಎಷ್ಟು ದೀರ್ಘವಾಗುತ್ತೋ, ಇರಾನ್​ಗೆ ಮಿಲಿಟರಿ ಖರ್ಚು ಹಾಗೂ ಸೇನಾ ಸಿಬ್ಬಂದಿಗಳ ವೇತನ ಅಷ್ಟೇ ಹೆಚ್ಚಾಗುತ್ತಾ ಹೋಗುತ್ತದೆ. ಹೀಗಾಗಿ ಅವರು ನಮ್ಮ ಷರತ್ತುಗಳಿಗೆ ಮಣಿಯಲೇ ಬೇಕಾಗುತ್ತದೆ ಎಂದು ಟ್ರಂಪ್ ಹೇಳಿದ್ದರು. ಹೀಗಾಗಿ ನಮಗೆ ಈ ಯುದ್ಧದಿಂದ ಯಾವುದೇ ನಷ್ಟವಿಲ್ಲವೆಂದು ಅವರು ಹೇಳಿದ್ದರು. ಈಗ ಕತಾರ್​ನಲ್ಲಿ ನಡೆಯಲಿರುವ ಈ ಮಾತುಕತೆ ಎತ್ತ ಸಾಗಲಿದೆ ಎಂದು ಕಾಲವೇ ಉತ್ತರಿಸಲಿದೆ, (ಏಜೆನ್ಸೀಸ್​).