ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ವಯಸ್ಕರಿಗೆ $5,000 ಲಾಭಾಂಶ ಪಾವತಿಯನ್ನು ಘೋಷಿಸಿದ್ದಾರೆ. 
ವಿದೇಶ

ಅಮೆರಿಕ ಚುನಾವಣೆ: ರಿಪಬ್ಲಿಕನ್ ಪಕ್ಷ ಗೆದ್ದರೆ ಪ್ರತಿಯೊಬ್ಬ ವಯಸ್ಕನ ಖಾತೆಗೆ 5 ಸಾವಿರ ಡಾಲರ್​; ಡೊನಾಲ್ಡ್​ ಟ್ರಂಪ್ ಘೋಷಣೆ! Donald Trump

ವಾಷಿಂಗ್​ಟನ್​: ಇದೇ ನವೆಂಬರ್​ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಆಡಳಿತಾರೂಢ ರಿಪಬ್ಲಿಕ್​ ಪಕ್ಷಕ್ಕೆ ಬಹುಮತ ದೊರೆತರೆ ಅಮೆರಿಕದ ಪ್ರತಿಯೊಬ್ಬ ವಯಸ್ಕನ ಖಾತೆಗೆ 5,000 ಡಾಲರ್​ (ಅಂದಾಜು 4. 76 ಲಕ್ಷ) ನೀಡುವುದಾಗಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ (Donald Trump)​ ಘೋಷಿಸಿದ್ದಾರೆ.
ನವೆಂಬರ್​ ತಿಂಗಳಿನಲ್ಲಿ ನಡೆಯಲಿರುವ ಚುನಾವಣೆಯಲ್ಲಿ, ಉಭಯ ಸದನಗಳಾದ ಪ್ರತಿನಿಧಿಗಳ ಸಭೆ (House of Representatives) ಹಾಗೂ ಸೆನೆಟ್​​ನಲ್ಲಿ ರಿಪಬ್ಲಿಕ್​ ಪಕ್ಷಕ್ಕೆ ಬಹುಮತ ದೊರೆತರೆ ತಲಾ 5,000 ಡಾಲರ್​ ನೀಡಲು ಟ್ರಂಪ್ ಮುಂದಾಗಿದ್ದಾರೆ. ಆದರೆ, ನೀಡಲಾಗುವ ಈ ಹಣವನ್ನು ವಿದೇಶದ ಬದಲು ಅಮೆರಿಕಾದಲ್ಲಿಯೇ ಖರ್ಚುಮಾಡಬೇಕೆಂದು ಅಧ್ಯಕ್ಷರು ಷರತ್ತೊಂದನ್ನು ವಿಧಿಸಿದ್ದಾರೆ.

ದೇಶವನ್ನು ಕಮ್ಯೂನಿಷ್ಟ್​​ ಮಾಡಬೇಡಿ!

ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡಿರುವ ಡೊನಾಲ್ಡ್​ ಟ್ರಂಪ್​, ನೀವು ರಿಪಬ್ಲಿಕ್​ ಪಕ್ಷಕ್ಕೆ ಮತ ನೀಡಿದರೆ ಮಾತ್ರ ದೇಶ ಸುಭಿಕ್ಷವಾಗಿ, ಮುಂದಿನ 200-250 ವರ್ಷಗಳ ಕಾಲ ಸದೃಡ ಆಡಳಿತವನ್ನು ಕಾಣಲಿದೆ. ಒಂದು ವೇಳೆ ನಮ್ಮನ್ನು ಬಿಟ್ಟು ಬೇರೆ ಪಕ್ಷಕ್ಕೆ ಮತ ನೀಡಿದರೆ, ಅಲ್ಲಿಗೆ ಅಮೆರಿಕದಲ್ಲಿ ಕಮ್ಯೂನಿಸ್ಟ್​ ಸಿದ್ಧಾಂತದ ಜನರಿಗೆ ಅಧಿಕಾರ ದೊರೆತು, ದೇಶ ನಾಶವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಇರಾನ್​ ಯುದ್ಧ ಅನಿವಾರ್ಯ!
ಇದೇ ಸಂದರ್ಭದಲ್ಲಿ ಇರಾನ್​ ಜೊತೆಗಿನ ಸಂಘರ್ಷದ ಬಗ್ಗೆ ಮಾತನಾಡಿದ ಅಮೆರಿಕದ ಅಧ್ಯಕ್ಷರು, ನನಗೆ ನಿಜವಾಗಿ ಈ ಯುದ್ಧ ಬೇಕಾಗಿಲ್ಲ. ಆದರೆ, ಇರಾನ್​ ಪರಮಾಣು ಅಸ್ತ್ರವನ್ನು ಹೊಂದಿದರೆ, ಜಗತ್ತಿಗೆ ಮಾನವಕುಲಕ್ಕೆ ಅಪಾಯವನ್ನುಂಟು ಮಾಡಲಿದೆ. ಹೀಗಾಗಿ ಪ್ರತಿಯೊಬ್ಬ ಅಮೆರಿಕನ್​ ಪ್ರಜೆ ರಿಪಬ್ಲಿಕ್​ ಪಾರ್ಟಿಯನ್ನು ಗೆಲ್ಲಿಸಿ ಎಂದು ಮವವಿ ಮಾಡಿದ್ದಾರೆ, (ಏಜನ್ಸೀಸ್​).