ವೆನೆಜುವೆಲಾ ತೈಲ ನಿಕ್ಷೇಪಗಳ ಮೇಲೆ ಅಮೆರಿಕ ನಿಯಂತ್ರಣ; ನಾವು ಭಾರಿ ಹಣ ಗಳಿಸಲಿದ್ದೇವೆ ಎಂದು ಡೊನಾಲ್ಡ್ ಟ್ರಂಪ್
ನ್ಯೂಯಾರ್ಕ್: ಜಾಗತಿಕ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ಆಗುತ್ತಿದ್ದು, ಯುನೈಟೆಡ್ ಸ್ಟೇಟ್ಸ್ ವೆನೆಜುವೆಲಾದ ತೈಲ ಮಾರಾಟ ಮತ್ತು ನಿಕ್ಷೇಪಗಳ ಮೇಲೆ ಅನಿರ್ದಿಷ್ಟ ನಿಯಂತ್ರಣ ಮಾಡುತ್ತೇವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಹೇಳಿದ್ದಾರೆ. ಅಲ್ಲದೆ, ವಿಶ್ವದ ಅತಿದೊಡ್ಡ ತೈಲ ನಿಕ್ಷೇಪಗಳ ಮೇಲಿನ ಹಿಡಿತವನ್ನು ಸಾಧಿಸಲು ಅಮೆರಿಕದ ಮುಂದಾಗಿದೆ.
ಈ ಬಗ್ಗೆ ಮಾತನಾಡಿದ ಟ್ರಂಪ್, ಇದನ್ನು ಅಮೆರಿಕದ ತೆರಿಗೆದಾರರು ಮತ್ತು ದೇಶೀಯ ಆರ್ಥಿಕತೆಗೆ ದೊರೆತ ಪ್ರಮುಖ ಗೆಲುವು ಎಂದು ತಿಳಿಸಿದ್ದಾರೆ.
ಆ ಹಣವನ್ನು ಅಧ್ಯಕ್ಷನಾಗಿ ನಾನು ನಿಯಂತ್ರಿಸುತ್ತೇನೆ. ನಾವು ತೈಲ ಮೂಲಸೌಕರ್ಯವನ್ನು ಪುನರ್ನಿರ್ಮಿಸಲಿದ್ದೇವೆ ಮತ್ತು ಅದನ್ನು ತೈಲ ಕಂಪನಿಗಳು ನೇರವಾಗಿ ಪಾವತಿಸಲಿವೆ. ನಾವು ಬಹಳಷ್ಟು ಹಣವನ್ನು ಗಳಿಸಲಿದ್ದೇವೆ ಮತ್ತು ನಾವು ಮತ್ತೆ ತೈಲವನ್ನು ಹರಿಯುವಂತೆ ಮಾಡಲಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.
ಅಮೆರಿಕದ ಉದ್ದೇಶಗಳು
ಇಂಧನ ಬೆಲೆಗಳನ್ನು ಕಡಿಮೆ ಮಾಡುವುದು
ದೇಶೀಯ ಹಣದುಬ್ಬರವನ್ನು ನಿಗ್ರಹಿಸಲು ಮತ್ತು ಗ್ರಾಹಕರ ಇಂಧನ ಬಿಲ್‌ಗಳನ್ನು ಕಡಿಮೆ ಮಾಡಲು ಆಡಳಿತವು ಜಾಗತಿಕ ತೈಲ ಬೆಲೆಯನ್ನು ಬ್ಯಾರೆಲ್‌ಗೆ $50 ಗುರಿಯನ್ನು ಹೊಂದಿದೆ ಎಂದು ವರದಿಯಾಗಿದೆ.
ಚೀನಾ ಮತ್ತು ರಷ್ಯಾದ ಪ್ರಭಾವವನ್ನು ಕಡಿತಗೊಳಿಸುವುದು
ವೆನೆಜುವೆಲಾದ ಉತ್ಪಾದನೆಯನ್ನು ನಿಯಂತ್ರಿಸುವ ಮೂಲಕ, ಐತಿಹಾಸಿಕವಾಗಿ PDVSA (ವೆನೆಜುವೆಲಾದ ರಾಜ್ಯ ತೈಲ ಕಂಪನಿ) ಗೆ ಪ್ರಮುಖ ಪಾಲುದಾರರಾಗಿರುವ ಚೀನಾ ಮತ್ತು ರಷ್ಯಾದ ಪ್ರಭಾವವನ್ನು ಮಿತಿಗೊಳಿಸುವ ಗುರಿಯನ್ನು US ಹೊಂದಿದೆ. ಅಲ್ಲದೆ, ಈ ಬಗ್ಗೆ ಮಾತನಾಡಿರುವ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್, ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ವೆನೆಜುವೆಲಾದ ತೈಲ ಮಾರಾಟವನ್ನು ಅನಿರ್ದಿಷ್ಟವಾಗಿ ನಿರ್ವಹಿಸುವ ನಮ್ಮ ಯೋಜನೆಯಾಗಿದೆ ಎಂದಿದ್ದಾರೆ.
ಜಾಗತಿಕ ಕಾನೂನಿ ಮೇಲಾಗುವ ಪರಿಣಾಮಗಳು
ಈ ನೀತಿ ಬದಲಾವಣೆಯೊಂದಿಗೆ, ಅಮೆರಿಕವು ಉತ್ತರ ಅಟ್ಲಾಂಟಿಕ್‌ನಲ್ಲಿ ರಷ್ಯಾದ ಧ್ವಜ ಹೊತ್ತ ಟ್ಯಾಂಕರ್ ಬೆಲ್ಲಾ 1 ಮತ್ತು ಕೆರಿಬಿಯನ್‌ನಲ್ಲಿ ಎಂ ಸೋಫಿಯಾವನ್ನು ವಶಪಡಿಸಿಕೊಂಡಿತು. ಅಲ್ಲದೆ, ದಿಗ್ಬಂಧನಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿತು.
ಅಂತರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ
ವಿಶ್ವಸಂಸ್ಥೆಯ ಕಾನೂನು ತಜ್ಞರು ಹೇಳಿರುವಂತೆ ಸಾರ್ವಭೌಮ ರಾಷ್ಟ್ರದ ಸಂಪನ್ಮೂಲಗಳನ್ನು ವಶಪಡಿಸಿಕೊಳ್ಳುವುದನ್ನು ಅಕ್ರಮ ವಸಾಹತುಶಾಹಿ ಎಂದು ಕರೆಯಲಾಗುತ್ತದೆ. ಆದರೆ ಯುಎಸ್ ಸೆನೆಟ್‌ನಲ್ಲಿ ವಿಮರ್ಶಕರು ಈ ಯೋಜನೆಯನ್ನು ಹುಚ್ಚುತನ ಎಂದು ಕರೆದಿದ್ದಾರೆ.
ಮಾರುಕಟ್ಟೆ ಪ್ರತಿಕ್ರಿಯೆ
ಜಾಗತಿಕ ತೈಲ ಬೆಲೆಗಳು ಗಮನಾರ್ಹ ಏರಿಳಿತವನ್ನು ಕಂಡಿವೆ. ಈ ಪ್ರದೇಶದಲ್ಲಿ ಹೊಸ ಹೂಡಿಕೆ ಅವಕಾಶಗಳ ನಿರೀಕ್ಷೆಯಲ್ಲಿ US ನಲ್ಲಿ ಚೆವ್ರಾನ್, ಎಕ್ಸಾನ್‌ಮೊಬಿಲ್ ಮತ್ತು ಕೊನೊಕೊಫಿಲಿಪ್ಸ್ ಸೇರಿದಂತೆ ಇಂಧನ ಷೇರುಗಳು ಏರಿಕೆಯಾಗಿವೆ ಎಂದು ತಿಳಿದು ಬಂದಿದೆ,(ಏಜೆನ್ಸೀಸ್).