ಇದು ವಿಶ್ವದ ಒಣ ಗ್ರಾಮ... ನಮಗೆ ಮೋಡಗಳು ಆಕಾಶದಲ್ಲಿ ಕಂಡರೆ ಇಲ್ಲಿ ಕೆಳಗೆ ಕಾಣುತ್ತವೆ! Unknown Facts 
ವಿದೇಶ

ಇದು ವಿಶ್ವದ ಒಣ ಗ್ರಾಮ... ನಮಗೆ ಮೋಡಗಳು ಆಕಾಶದಲ್ಲಿ ಕಂಡರೆ ಇಲ್ಲಿ ಕೆಳಗೆ ಕಾಣುತ್ತವೆ! Unknown Facts

ಪ್ರಮುಖ ಮುಖ್ಯಾಂಶಗಳು

  • ಸಾಮಾನ್ಯವಾಗಿ, ಬೆಟ್ಟಗುಡ್ಡಗಳಂತಹ ತುಂಬಾ ಎತ್ತರದ ಪ್ರದೇಶದಲ್ಲಿ ಮಳೆಯಾಗುವುದು ಸಾಮಾನ್ಯ
  • ಏಕೆಂದರೆ, ಮೋಡಗಳು ಆ ಬೆಟ್ಟಗಳಿಗೆ ಅಂಟಿಕೊಂಡಂತೆ ಇರುತ್ತವೆ
  • ಆದರೆ, ಈ ಒಂದು ಹಳ್ಳಿಯಲ್ಲಿ ಮೋಡಗಳು ನಿಮ್ಮ ಪಾದಗಳ ಕೆಳಗೆ ತೇಲುತ್ತವೆ
  • ನಾವೀಗ ಯೆಮೆನ್‌ನಲ್ಲಿರುವ ಒಂದು ವಿಚಿತ್ರ ಹಳ್ಳಿಯ ಬಗ್ಗೆ ತಿಳಿದುಕೊಳ್ಳೋಣ
Unknown Facts : ಪ್ರಕೃತಿ ಸೃಷ್ಟಿಸಿದ ಸಾಕಷ್ಟು ಅದ್ಭುತಗಳು ನಮ್ಮ ನಡುವೆ ಇವೆ. ಆ ಅದ್ಭುತಗಳು ನಮ್ಮ ಊಹೆಗೂ ನಿಲುಕದ್ದು. ಸಾಮಾನ್ಯವಾಗಿ, ಬೆಟ್ಟಗುಡ್ಡಗಳಂತಹ ತುಂಬಾ ಎತ್ತರದ ಪ್ರದೇಶದಲ್ಲಿ ಮಳೆಯಾಗುವುದು ಸಾಮಾನ್ಯ. ಏಕೆಂದರೆ, ಮೋಡಗಳು ಆ ಬೆಟ್ಟಗಳಿಗೆ ಅಂಟಿಕೊಂಡಂತೆ ಇರುತ್ತವೆ. ನಂದಿ ಬೆಟ್ಟ ಹಾಗೂ ಹಿಮವದ್​ ಗೋಪಾಲಸ್ವಾಮಿ ಬೆಟ್ಟದಂತಹ ಎತ್ತರದ ಪ್ರದೇಶಗಳಿಗೆ ಹೋದವರಿಗೆ ಇದರ ಅನುಭವ ಆಗಿರುತ್ತದೆ. ಆದರೆ, ಈ ಒಂದು ಹಳ್ಳಿಯಲ್ಲಿ ಮೋಡಗಳು ನಿಮ್ಮ ಪಾದಗಳ ಕೆಳಗೆ ತೇಲುತ್ತವೆ ಮತ್ತು ನಿಮ್ಮ ಕೈಗಳಿಂದ ಅವುಗಳನ್ನು ಸ್ಪರ್ಶಿಸಬಹುದು. ಕೇಳಲು ಇದು ಸಿನಿಮಾ ಕತೆಯಂತೆ ಭಾಸವಾಗಬಹುದು ಆದರೆ, ಇದು ಅಕ್ಷರಶಃ ನಿಜ. ನಾವೀಗ ಯೆಮೆನ್‌ನಲ್ಲಿರುವ ಒಂದು ವಿಚಿತ್ರ ಹಳ್ಳಿಯ ಬಗ್ಗೆ ತಿಳಿದುಕೊಳ್ಳೋಣ.
ಯೆಮೆನ್ ರಾಜಧಾನಿ ಸನಾದಿಂದ ಪಶ್ಚಿಮಕ್ಕೆ ಇರುವ 'ಅಲ್ ಹುತೈಬ್' ಗ್ರಾಮವು ವಿಶ್ವದ ಅತ್ಯಂತ ವಿಚಿತ್ರ ಸ್ಥಳವಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 3,200 ಮೀಟರ್ ಎತ್ತರದಲ್ಲಿರುವ ಪರ್ವತ ಶಿಖರದ ಮೇಲೆ ಇದೆ. ಇಲ್ಲಿನ ವಿಶೇಷವೆಂದರೆ, ಈ ಗ್ರಾಮ ಮೋಡಗಳ ಮೇಲೆಯೇ ಇದೆ. ಅಂದರೆ, ನಾವು ಆಕಾಶವನ್ನು ನೋಡಿದಾಗ ನಮಗೆ ಮೋಡಗಳು ಕಾಣುತ್ತವೆ, ಆದರೆ ಈ ಹಳ್ಳಿಯ ಜನರು ಕೆಳಗೆ ನೋಡಿದಾಗ ಮೋಡಗಳು ಕಾಣುತ್ತವೆ.

ಮಳೆ ಏಕೆ ಬರುವುದಿಲ್ಲ?

ಸಾಮಾನ್ಯವಾಗಿ ಎತ್ತರದ ಪ್ರದೇಶಗಳಲ್ಲಿ ಹೆಚ್ಚಾಗಿ ಮಳೆಯಾಗುತ್ತವೆ. ಏಕೆಂದರೆ, ಮೋಡಗಳು ಸಮೀಪ ಇರುತ್ತವೆ. ಆದಾಗ್ಯೂ, ಅಲ್ ಹುತೈಬ್ ಗ್ರಾಮ ಇದಕ್ಕೆ ತದ್ವಿರುದ್ಧವಾಗಿದೆ. ಇಲ್ಲಿ ಮಳೆಯಾಗುವುದೇ ಇಲ್ಲ. ಅದಕ್ಕೆ ಕಾರಣವೇ ಅದರ ಎತ್ತರ. ಹೌದು, ಎಲ್ಲಾ ಮೋಡಗಳು ಈ ಗ್ರಾಮಕ್ಕಿಂತ ಕಡಿಮೆ ಎತ್ತರದಲ್ಲಿ ರೂಪುಗೊಳ್ಳುತ್ತವೆ. ಮಳೆಯನ್ನು ಉತ್ಪಾದಿಸುವ ಮೋಡಗಳು ಹಳ್ಳಿಯ ಕೆಳಗೆ ಇರುವುದರಿಂದ, ಮಳೆ ಕೆಳಗೆ ಬೀಳುತ್ತದೆ ಆದರೆ, ಮೇಲಿನ ಹಳ್ಳಿಯ ಮೇಲೆ ಒಂದು ಹನಿಯೂ ಬೀಳುವುದಿಲ್ಲ. ಅದಕ್ಕಾಗಿಯೇ ಇದನ್ನು ವಿಶ್ವದ 'ಒಣ ಗ್ರಾಮ' ಅಥವಾ 'ಒಣ ನಗರ' ಎಂದು ಕರೆಯಲಾಗುತ್ತದೆ.
ಅಂದಹಾಗೆ, ಈ ಗ್ರಾಮದಲ್ಲಿ ಪ್ರವಾಸಿಗರು ತಮ್ಮ ಕೈಗಳಿಂದ ಮೋಡಗಳನ್ನು ಸ್ಪರ್ಶಿಸಬಹುದು. ಮಳೆ ಬಂದಾಗ ಕೆಳಗಿನ ಹಳ್ಳಿಗಳು ಒದ್ದೆಯಾದರೆ, ಮೇಲಿನ ಅಲ್ ಹುತೈಬ್ ಜನರು ಬಿಸಿಲಿನಲ್ಲಿ ಒಣಗುತ್ತಾರೆ. ಈ ಸ್ಥಳದ ವಿಶೇಷತೆಯೆಂದರೆ ಕೆಳಗೆ ಮೋಡಗಳ ಘರ್ಜನೆ ಮತ್ತು ಮಿಂಚು ಕಾಣಬಹುದಾದರೂ, ಮೇಲಿನ ಶಾಂತ ವಾತಾವರಣ ಮಾತ್ರ ವಿಶಿಷ್ಟವಾಗಿದೆ. ಈ ದೃಶ್ಯವನ್ನು ನೋಡಲು ಎರಡು ಕಣ್ಣುಗಳು ಸಾಕಾಗುವುದಿಲ್ಲ.
ಎತ್ತರದ ಹೊರತಾಗಿಯೂ, ಈ ಹಳ್ಳಿಯಲ್ಲಿ ಹಗಲಿನಲ್ಲಿ ಹವಾಮಾನವು ತುಂಬಾ ಬಿಸಿಯಾಗಿರುತ್ತದೆ. ಆದರೆ ಸೂರ್ಯ ಮುಳುಗಿದ ತಕ್ಷಣ, ಚಳಿ ಆವರಿಸಿಕೊಳ್ಳುತ್ತದೆ. ಬೆಳಗ್ಗೆ ಸೂರ್ಯನಿಂದ ಬೆಚ್ಚಗಾಗುವ ಶಿಖರಗಳು ರಾತ್ರಿಯಲ್ಲಿ ಹಿಮದ ಹರಳುಗಳಂತೆ ತಣ್ಣಗಾಗುತ್ತವೆ. ಈ ವಿಚಿತ್ರ ಹವಾಮಾನದ ಹೊರತಾಗಿಯೂ, ಈ ಅದ್ಭುತವನ್ನು ನೋಡಲು ಪ್ರಪಂಚದಾದ್ಯಂತದ ಪ್ರವಾಸಿಗರು ಬರುತ್ತಾರೆ.
ಅಲ್ ಹುತೈಬ್ ಗ್ರಾಮವು ಪ್ರಕೃತಿಯ ವೈವಿಧ್ಯತೆಗೆ ಸಾಕ್ಷಿಯಾಗಿದೆ. ಮೋಡಗಳ ಮೇಲೆ ವಾಸಿಸುವುದು ಅದ್ಭುತ ಅನುಭವ. ಮಳೆ ಬಾರದಿದ್ದರೂ, ಆ ಮೋಡಗಳ ನಡುವೆ ತೂಗುಮಂಚದಲ್ಲಿ ತೂಗಾಡುತ್ತಿರುವಂತೆ ಕಾಣುವ ಈ ಗ್ರಾಮವು ನಿಜವಾಗಿಯೂ ಭೂಮಿಯ ಮೇಲಿನ ಸ್ವರ್ಗವಾಗಿದೆ, (ಏಜೆನ್ಸೀಸ್​).