ಅಮೀರ್ ಹಂಜಾನ ಮೇಲೆ ಅಪರಿಚಿತ ಬಂದೂಕುದಾರಿಯಿಂದ ಶೂಟೌಟ್
- ಪಾಕಿಸ್ತಾನದ ಲಾಹೋರ್‌ನಲ್ಲಿ ಲಷ್ಕರ್-ಎ-ತೊಯ್ಬಾ ಸಹ-ಸಂಸ್ಥಾಪಕನ ಮೇಲೆ ಗುಂಡಿನ ದಾಳಿ
- ಅಮೀರ್ ಹಂಜಾನ ಮೇಲೆ ಅಪರಿಚಿತ ಬಂದೂಕುದಾರಿಯಿಂದ ಶೂಟೌಟ್
- ಭಯೋತ್ಪಾದಕ ಅಮೀರ್ ಹಂಜಾ ಸ್ಥಿತಿ ಗಂಭೀರ
- 2001 ರ ಸಂಸತ್ ದಾಳಿ, 2008 ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಂಜಾ ಅಮೀರ್
ಪಾಕಿಸ್ತಾನ: ಕುಖ್ಯಾತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಸಹ ಸಂಸ್ಥಾಪಕನಾದ ಅಮೀರ್ ಹಂಜಾ (Lashkar E Taiba Amir Hamza) ನ ಮೇಲೆ ಲಾಹೋರಿನಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡನ್ನು ಹಾರಿಸಿದ್ದು, ಹಂಜಾ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಗಿ ವರದಿಯಾಗಿದೆ.
ಲಭ್ಯ ಮಾಹಿತಿ ಪ್ರಕಾರ, ಲಾಹೋರಿನ ನ್ಯೂಸ್ ಚಾನೆಲ್ ಹೊರಗಡೆ ನಿಂತಿದ್ದ ಅಮೀರ್ ಹಂಜಾನ ಮೇಲೆ ಆಗಂತುಕರು ಏಕಾಏಕಿ ಗುಂಡಿನ ಮಳೆ ಹರಿಸಿ ಪರಾರಿಯಾಗಿದ್ದಾರೆ. ಸದ್ಯ ಹಂಜಾನ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಲಷ್ಕರ್-ಎ-ತೊಯ್ಬಾದ ಸಹ ಸಂಸ್ಥಾಪಕ ಹಂಜಾ!
ಈಗ ಅಪರಿಚಿತ ವ್ಯಕ್ತಿಯಿಂದ ಗುಂಡು ತಿಂದಿರುವ ಅಮೀರ್ ಹಂಜಾ, ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಸಹ ಸಂಸ್ಥಾಪಕನಾಗಿದ್ದಾನೆ. ಇವನು ಅಂತರಾಷ್ಟ್ರೀಯ ಉಗ್ರ ಮಸೂದ್ ಅಜರ್ನ ಆಪ್ತ ವ್ಯಕ್ತಿಯಾಗಿದ್ದು, ಭಾರತದಲ್ಲಿ ನಡೆದ ಹಲವಾರು ಭಯೋತ್ಪಾದಕ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಇವನದೇ ಎಂದು ಹೇಳಲಾಗುತ್ತದೆ.
ಇವನು ಲಷ್ಕರ್ ಸಂಘಟನೆಯನ್ನು ಸೇರುವ ಮೊದಲು ರಷ್ಯಾ ವಿರುದ್ಧ ಅಫ್ಘಾನಿಸ್ಥಾನದಲ್ಲಿ ಮುಜಾಹಿದ್ದೀನಾಗಿ ಕಾಫೀರರ ವಿರುದ್ಧ ಹೋರಾಡಿದ್ದ ಎಂದು ಹೇಳಲಾಗುತ್ತದೆ. ಇವನು ಲಷ್ಕರ್ ನಡೆಸುವ ಸುದ್ದಿ ಪತ್ರಿಕೆಯ ಸಂಪಾದಕನಾಗಿ ಸಹ ಕೆಲಸ ಮಾಡಿದ್ದಾನೆ ಎಂಬ ಮಾಹಿತಿಯಿದೆ.
ಭಾರತದಲ್ಲಿ ಲಷ್ಕರ್ ಕಾರ್ಯಾಚರಣೆ
ಭಾರತದಲ್ಲಿ ನಡೆದಿರುವ ಬಹುತೇಕ ಭಯೋತ್ಪಾದಕ ದಾಳಿಗಳನ್ನು ಈ ಲಷ್ಕರ್-ಎ-ತೊಯ್ಬಾ ಸಂಘಟನೆಯೇ ಮಾಡಿದೆ. ಅದು 2001 ರ ಸಂಸತ್ ದಾಳಿ, 2008 ರ ಮುಂಬೈ ದಾಳಿ, 2000 ರಲ್ಲಿ ಕೆಂಪು ಕೋಟೆ ಬಳಿ ಬಾಂಬ್ ಸ್ಪೋಟ, 2016 ರಲ್ಲಿ ಉರಿ ಸೈನ್ಯ ಶಿಬಿರದ ಮೇಲೆ ದಾಳಿ ಮತ್ತು ಇತ್ತೀಚೆಗೆ ಪೆಹಲ್ಗಾಂವ್ ದಾಳಿ ಇದರೆಲ್ಲರ ಹಿಂದೆ ಈ ಸಂಘಟನೆಯ ಕೈವಾಡವಿದ್ದರೆ. ಈ ದಾಳಿ ಹೇಗೆ ನಡೆಬೇಕು ಎಂದು ಸಂಚು ರೂಪಿಸುವಲ್ಲಿ ಈ ಅಮೀರ್ ಹಂಜಾನ ಪಾತ್ರ ಪ್ರಮುಖವಾಗಿತ್ತು ಎಂದು ಹೇಳಲಾಗುತ್ತದೆ,(ಏಜನ್ಸೀಸ್).