ನಿಜವಾಯ್ತು ಬಾಬಾ ವಂಗಾ ನುಡಿದ 2026ರ 2 ಭವಿಷ್ಯವಾಣಿ... ಇನ್ನೂ 3 ಬಾಕಿ, ಅದರಲ್ಲೂ ಎಲ್ಲರ ಕಣ್ಣು ನವೆಂಬರ್​ ಮೇಲೆ! Baba Vanga Predictions  
ವಿದೇಶ

ನಿಜವಾಯ್ತು ಬಾಬಾ ವಂಗಾ ನುಡಿದ 2026ರ 2 ಭವಿಷ್ಯವಾಣಿ... ಇನ್ನೂ 3 ಬಾಕಿ, ಅದರಲ್ಲೂ ಎಲ್ಲರ ಕಣ್ಣು ನವೆಂಬರ್​ ಮೇಲೆ! Baba Vanga Predictions

ಪ್ರಮುಖ ಮುಖ್ಯಾಂಶಗಳು

  • ವಿಶ್ವಪ್ರಸಿದ್ಧ ಭವಿಷ್ಯಗಾರ್ತಿ ಬಾಬಾ ವಂಗಾ ಅವರ 2026ರ ಭವಿಷ್ಯವಾಣಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ
  • ಪ್ರಾಕೃತಿಕ ವಿಕೋಪಗಳು ಹಾಗೂ ಕೃತಕ ಬುದ್ಧಿಮತ್ತೆಯ ಬೆಳವಣಿಗೆಯ ಭವಿಷ್ಯಗಳು ನಿಜವಾಗಿವೆ ಎಂದು ಅನುಯಾಯಿಗಳ ವಾದ
  • ನವೆಂಬರ್‌ನಲ್ಲಿ ಅನ್ಯಗ್ರಹ ಜೀವಿಗಳ ಆಗಮನ ಹಾಗೂ 3ನೇ ಮಹಾಯುದ್ಧದ ಆತಂಕಕಾರಿ ಭವಿಷ್ಯಗಳು ಚರ್ಚೆಯಲ್ಲಿವೆ
  • 5079ನೇ ಇಸವಿಯವರೆಗೆ ಜಗತ್ತಿನ ಹ ಹಾಗುಹೋಗುಗಳ ಬಗೆಗೆ ಭವಿಷ್ಯ ನುಡಿದಿರುವುದಾಗಿ ಬಾಬಾ ವಂಗಾ ಕುರಿತು ಹೇಳಲಾಗುತ್ತದೆ
Baba Vanga Predictions : ಬಲ್ಗೇರಿಯನ್​ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ವಿಶ್ವ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಪ್ರತಿ ವರ್ಷವೂ ಸಾಕಷ್ಟು ಸದ್ದು ಮಾಡುತ್ತಿರುತ್ತವೆ. 2026ನೇ ಇಸವಿಯನ್ನು ಆಧಾರವಾಗಿಟ್ಟುಕೊಂಡು ಬಾಬಾ ವಂಗಾ ನುಡಿದಿರುವ ಭವಿಷ್ಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಈಗಾಗಲೇ ಅವರ ಎರಡು ಭವಿಷ್ಯವಾಣಿಗಳು ನಿಜವಾಗಿವೆ ಎಂದು ಅವರ ಅನುಯಾಯಿಗಳು ವಾದಿಸುತ್ತಿರುವ ಬೆನ್ನಲ್ಲೇ, ಮಾನವ ಕುಲವನ್ನೇ ನಡುಗಿಸುವ ಇನ್ನೂ ಮೂರು ಭಯಾನಕ ಭವಿಷ್ಯಗಳು ಈ ವರ್ಷ ಕಾದಿವೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.
ಬಾಬಾ ವಂಗಾ ಅವರ 2026ರ ಮೊದಲ ಭವಿಷ್ಯವಾಣಿಯು ಪ್ರಪಂಚದಾದ್ಯಂತ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪಗಳ ಕುರಿತಾಗಿದೆ. ಅದರಂತೆ ಕಳೆದ ಮಾರ್ಚ್‌ನಲ್ಲಿ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪದಿಂದ ಸಾವಿರಾರು ಜನರ ಸಾವು ಮತ್ತು ಅಪಾರ ಹಾನಿ ಉಂಟಾಗಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಅಲ್ಲದೆ, ಸ್ಪೇನ್, ಪೋರ್ಚುಗಲ್, ಗ್ರೀಸ್, ಇಟಲಿ ಮತ್ತು ಫ್ರಾನ್ಸ್‌ನಲ್ಲಿ ಕಾಡ್ಗಿಚ್ಚು, ತೀವ್ರ ಉಷ್ಣಗಾಳಿ, ಏಷ್ಯನ್ ದೇಶಗಳಲ್ಲಿ ಪ್ರವಾಹ ಮತ್ತು ಅಮೆರಿಕದಲ್ಲಿ ಶಕ್ತಿಶಾಲಿ ಚಂಡಮಾರುತಗಳು ಸಂಭವಿಸಿದಾಗ ಈ ಭವಿಷ್ಯ ನೂರಕ್ಕೆ ನೂರು ನಿಜವಾಗಿದೆ ಅನ್ನೋದು ಬಾಬಾ ವಂಗಾ ಅನುಯಾಯಿಗಳ ವಾದವಾಗಿದೆ. 
ಆದಾಗ್ಯೂ, ಬಾಬಾ ವಂಗಾ ಅವರ ಭವಿಷ್ಯವಾಣಿಗಳಲ್ಲಿ ಈ ಪ್ರಾಕೃತಿಕ ವಿಕೋಪಗಳು ಎಲ್ಲಿ ಮತ್ತು ಯಾವಾಗ ಸಂಭವಿಸುತ್ತವೆ ಎಂಬ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿಯಿರಲಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ. ಪ್ರಪಂಚದ ವಿವಿಧ ಭಾಗಗಳಲ್ಲಿ ಪ್ರತಿವರ್ಷ ಭೂಕಂಪಗಳು, ಪ್ರವಾಹಗಳು ಮತ್ತು ಕಾಡ್ಗಿಚ್ಚುಗಳು ಸಾಮಾನ್ಯವಾಗಿ ಸಂಭವಿಸುವುದರಿಂದ, ಇಂತಹ ಸಾಮಾನ್ಯ ಭವಿಷ್ಯವನ್ನು ಯಾವುದೇ ವಿಪತ್ತಿಗೆ ಸುಲಭವಾಗಿ ತಳಕುಹಾಕಲಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಇನ್ನೂ ಎರಡನೆಯ ಭವಿಷ್ಯವು ಕೃತಕ ಬುದ್ಧಿಮತ್ತೆ (AI) ಮತ್ತು ಕೆಲಸದ ಸ್ಥಳಗಳಲ್ಲಿ ಮನುಷ್ಯನ ಜಾಗವನ್ನು ಯಂತ್ರಗಳು ಆಕ್ರಮಿಸಿಕೊಳ್ಳುತ್ತದೆ ಎಂಬುದಾಗಿತ್ತು. ಅಂದರೆ, ಯಂತ್ರಗಳು ಮಾನವ ಶ್ರಮವನ್ನು ಸಾಕಷ್ಟು ಪ್ರಮಾಣದಲ್ಲಿ ಬದಲಾಯಿಸಲಿವೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದರು. ಅದೇ ರೀತಿ ಇಂದು ಎಐ ಬೆಳವಣಿಗೆಯಿಂದ ಬಹುತೇಕ ಕಂಪನಿಗಳಲ್ಲಿ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ಬಾಬಾ ವಂಗಾ ಅವರ ಅನುಯಾಯಿಗಳು ಹೇಳಿಕೊಳ್ಳುತ್ತಾರೆ. ಆದರೆ, AI ತಂತ್ರಜ್ಞಾನವು ದಶಕಗಳಿಂದಲೂ ಅಭಿವೃದ್ಧಿ ಹೊಂದುತ್ತಾ ಬರುತ್ತಿದೆ. ಇದೊಂದು ಸಹಜ ಪ್ರಕ್ರಿಯೆಯಾಗಿದ್ದು, ಬಾಬಾ ವಂಗಾ ಎಐ ಕುರಿಯಾಗಿ ಯಾವಾಗ ಭವಿಷ್ಯ ನುಡಿದರು ಅಥವಾ ಅವರು ನಿಖರವಾಗಿ ಏನು ಹೇಳಿದರು ಎಂಬುದಕ್ಕೆ ಯಾವುದೇ ಅಧಿಕೃತ ಸಾಕ್ಷ್ಯಗಳಿಲ್ಲ.

ಬಾಬಾ ವಂಗಾ ಹೇಳಿರುವ ಕೊನೆಯ ಮೂರು ಭವಿಷ್ಯವಾಣಿಗಳು ಸಾಕಷ್ಟು ಆತಂಕಕಾರಿಯಾಗಿವೆ...

1. ನವೆಂಬರ್​ನಲ್ಲಿ ಏಲಿಯನ್ಸ್ ಆಗಮನ 

ಬಾಬಾ ವಂಗಾ ಅವರ 2026ರ ಉಳಿದಿರುವ ಭವಿಷ್ಯವಾಣಿಗಳಲ್ಲಿ ಅತ್ಯಂತ ಕುತೂಹಲಕಾರಿ ಭವಿಷ್ಯವಾಣಿ ಅಂದರೆ, ಅನ್ಯಗ್ರಹ ಜೀವಿಗಳ ಅಸ್ತಿತ್ವದ ಕುರಿತು. ಬಾಬಾ ವಂಗಾ ಅವರ ಭವಿಷ್ಯದ ಪ್ರಕಾರ, ದೈತ್ಯ ಬಾಹ್ಯಾಕಾಶ ನೌಕೆಯು ಭೂಮಿಯ ವಾತಾವರಣವನ್ನು ಪ್ರವೇಶಿಸಲಿದೆ ಮತ್ತು ಮನುಷ್ಯರು ಅನ್ಯಗ್ರಹ ಜೀವಿಗಳೊಂದಿಗೆ ಸಂಪರ್ಕ ಸಾಧಿಸಲಿದ್ದಾರೆ. ಈ ಘಟನೆಯು ನವೆಂಬರ್‌ನಲ್ಲಿ ಸಂಭವಿಸಬಹುದು ಎಂದು ಅವರ ಅನುಯಾಯಿಗಳು ನಿರ್ದಿಷ್ಟ ಕಾಲಮಿತಿಯನ್ನು ಊಹಿಸುತ್ತಿದ್ದಾರೆ. ಅಮೆರಿಕ ಸರ್ಕಾರವು ಅಪರಿಚಿತ ವೈಮಾನಿಕ ವಿದ್ಯಮಾನಗಳ ಕುರಿತು ವರ್ಗೀಕೃತ ದಾಖಲೆಗಳನ್ನು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಇಂತಹ ಭವಿಷ್ಯಗಳು ಹೆಚ್ಚು ಜನಪ್ರಿಯತೆ ಗಳಿಸಿವೆ. ಆದಾಗ್ಯೂ, ಆಕಾಶದಲ್ಲಿ ಅಪರಿಚಿತ ವಸ್ತುಗಳು ಕಂಡುಬಂದ ಮಾತ್ರಕ್ಕೆ ಅವು ಅನ್ಯಗ್ರಹ ನೌಕೆಗಳೇ ಆಗಿರಬೇಕಾಗಿಲ್ಲ, ಬದಲಿಗೆ ಇಂತಹ ವಸ್ತುಗಳು ಸಾಮಾನ್ಯವಾಗಿ ಡ್ರೋನ್‌ಗಳು, ವಿಮಾನಗಳು, ಬಲೂನ್‌ಗಳು, ಉಪಗ್ರಹಗಳು ಅಥವಾ ವಾತಾವರಣದ ವೈಪರೀತ್ಯಗಳು ಎಂದು ನಂತರ ಖಚಿತಪಡಿಸಿಕೊಳ್ಳಲಾಗುತ್ತದೆ.

2. ಮೂರನೇ ಮಹಾಯುದ್ಧ

2026ರ ಅತ್ಯಂತ ಭಯಾನಕ ಭವಿಷ್ಯಗಳಲ್ಲಿ ಮೂರನೇ ಮಹಾಯುದ್ಧದ ಆರಂಭವೂ ಒಂದಾಗಿದ್ದು, ಚೀನಾ ತೈವಾನ್ ಅನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ ಮತ್ತು ರಷ್ಯಾ ಹಾಗೂ ಅಮೆರಿಕ ನಡುವಿನ ವಿವಾದಗಳು ನೇರ ಯುದ್ಧಕ್ಕೆ ತಿರುಗಲಿವೆ ಎಂದು ಬಾಬಾ ವಂಗಾ ಅವರ ಅನುಯಾಯಿಗಳು ವಾದಿಸುತ್ತಿದ್ದಾರೆ. ಸದ್ಯಕ್ಕೆ ತೈವಾನ್ ಸ್ವಾಯತ್ತ ಪ್ರದೇಶವಾಗಿ ಉಳಿದಿದೆ ಮತ್ತು ರಷ್ಯಾ ಹಾಗೂ ಅಮೆರಿಕ ನೇರ ಯುದ್ಧಕ್ಕೆ ಇಳಿದಿಲ್ಲವಾದರೂ, ಯೂಕ್ರೇನ್ ಯುದ್ಧ ಮತ್ತು ಮಹಾಶಕ್ತಿಗಳ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯು ಈ ಭವಿಷ್ಯವನ್ನು ಮತ್ತೊಮ್ಮೆ ಸಾರ್ವಜನಿಕರ ಗಮನಕ್ಕೆ ತರುತ್ತಿದೆ.

ಪುಟಿನ್​ ಆಡಳಿತ ಬದಲಾವಣೆ

ಪುಟಿನ್ ಅವರ ಆಡಳಿತ ಬದಲಾವಣೆ ಕುರಿತು ಬಾಬಾ ವಂಗಾ ನುಡಿದ ಕೊನೆಯ ಪ್ರಮುಖ ಭವಿಷ್ಯವಾಣಿಯು ರಷ್ಯಾವನ್ನು ಕೇಂದ್ರೀಕರಿಸಿದ್ದು, 2026 ರ ಅಂತ್ಯದೊಳಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ಅಧಿಕಾರವನ್ನು ಕಳೆದುಕೊಳ್ಳಲಿದ್ದಾರೆ ಮತ್ತು ಹೊಸ ನಾಯಕರು ರಷ್ಯಾದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಹೇಳಲಾಗಿದೆ. ಪುಟಿನ್ ಅವರು ಎರಡು ಅವಧಿಗಳಲ್ಲಿ ಹದಿನೆಂಟು ವರ್ಷಗಳಿಗೂ ಹೆಚ್ಚು ಕಾಲ ರಷ್ಯಾದ ರಾಜಕೀಯದಲ್ಲಿ ಪ್ರಮುಖ ಪ್ರಭಾವ ಬೀರಿದ್ದು, ಅವರು ಅಧಿಕಾರದಿಂದ ಕೆಳಗಿಳಿಯಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬುದಕ್ಕೆ ಸದ್ಯ ಯಾವುದೇ ಲಕ್ಷಣಗಳಿಲ್ಲ. ಯೂಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಅವರ ಆರೋಗ್ಯ ಮತ್ತು ರಾಜಕೀಯ ಭವಿಷ್ಯದ ಬಗ್ಗೆ ಹಲವು ವರ್ಷಗಳಿಂದ ವಂದಂತಿಗಳು ಹಬ್ಬಿದ್ದರೂ, ಯಾವುದು ಕೂಡ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಕಾರಣವಾಗಿಲ್ಲ.

ಯಾರೀ ಬಾಬಾ ವಂಗಾ?

ವರದಿಗಳ ಪ್ರಕಾರ, ಬಾಬಾ ವಂಗಾ ಅವರು 1911ರಲ್ಲಿ ಉತ್ತರ ಮ್ಯಾಸಿಡೋನಿಯಾದ ಸ್ಟ್ರುಮಿಕಾದಲ್ಲಿ ಜನಿಸಿದರು. ಅವರ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ ಎಂದು. ತಮ್ಮ 12ನೇ ವಯಸ್ಸಿನಲ್ಲಿ ಭಾರೀ ಚಂಡಮಾರುತದ ಸಮಯದಲ್ಲಿ ನಿಗೂಢವಾಗಿ ದೃಷ್ಟಿ ಕಳೆದುಕೊಂಡರಂತೆ. 1996ರಲ್ಲಿ ಮೃತಪಟ್ಟಿರುವ ಬಾಬಾ ವಂಗಾ 5079ನೇ ಇಸವಿಯವರೆಗೂ ಏನೇನಾಗಲಿದೆ ಎನ್ನುವುದನ್ನು ಕಂಡು ಕೊಂಡಿದ್ದಾಗಿ ಹೇಳಿದ್ದು, ಅದನ್ನು ಸಮಾಜಕ್ಕೆ ತಿಳಿಸಿಯೇ ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ.

ಅನೇಕ ಭವಿಷ್ಯಗಳು ನಿಜವಾಗಿವೆ

ಉಗ್ರರು ಅಮೆರಿಕದ ಮೇಲೆ ನಡೆಸಿದ ದಾಳಿ (9/11), ಚೆರ್ನೋಬಿಲ್‌ ದುರಂತ, ಪ್ರಿನ್ಸೆಸ್ ಡಯಾನಾ ಸಾವು, 2004ರ ಥಾಯ್ಲೆಂಡ್‌ ಸುನಾಮಿ, ಬರಾಕ್‌ ಒಬಾಮಾ ಅಧ್ಯಕ್ಷ ಪಟ್ಟಕ್ಕೇರುವುದು…ಇಂಥ ನೂರಾರು ಘಟನೆಗಳ ಕುರಿತು ಹಲವು ದಶಕಗಳ ಮುಂಚೆಯೇ ನುಡಿದಿದ್ದರು ಇವರು. ಅಷ್ಟೇ ಏಕೆ ಮಹಾಮಾರಿ ಕರೊನಾ ವೈರಸ್​ ಕುರಿತು ಅವರು ಮಾಹಿತಿ ನೀಡಿದ್ದರು ಎನ್ನಲಾಗಿದೆ. 15ನೇ ಶತಮಾನದ ಜ್ಯೋತಿಷಿ ನಾಸ್ಟ್ರಾಡಮಸ್‌ಗೆ ಬಾಬಾ ವಂಗಾ ಅವರನ್ನು ಹೋಲಿಕೆ ಮಾಡಲಾಗುತ್ತದೆ. ಅವರ ಭವಿಷ್ಯವಾಣಿಗಳು ಶೇಕಡ 85ರಷ್ಟು ನಿಖರ ಎನ್ನಲಾಗುತ್ತಿದೆ.

5079ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳುತ್ತದೆ

ಇಡೀ ಜಗತ್ತಿನ ನೂರಾರು ವರ್ಷಗಳ ಹಾಗುಹೋಗುಗಳ ಬಗೆಗೆ ಭವಿಷ್ಯ ನುಡಿದಿರುವ ಬಾಗಾ ವಂಗಾ ಪ್ರಕಾರ, 5079ಕ್ಕೆ ಜಗತ್ತು ಕೊನೆಯಾಗುತ್ತದೆ. 2028ರಲ್ಲಿ ಮಾನವರು ಶುಕ್ರವನ್ನು ಭೇಟಿ ಮಾಡುತ್ತಾರೆ, 2033ರಲ್ಲಿ ಧ್ರುವೀಯ ಮಂಜುಗಡ್ಡೆಗಳು ಕರಗಿ, ಜಾಗತಿಕವಾಗಿ ಸಮುದ್ರ ಮಟ್ಟವು ವೇಗವಾಗಿ ಏರುತ್ತೆ, ಮುಸ್ಲಿಮರು 2043 ರಲ್ಲಿ ಯುರೋಪ್ ಅನ್ನು ಆಳುತ್ತಾರೆ, 2076ರಲ್ಲಿ ಕಮ್ಯುನಿಸಂ ಪ್ರಪಂಚದಾದ್ಯಂತ ಹರಡುತ್ತದೆ, 2130ರಲ್ಲಿ ಮಾನವರು ಅನ್ಯಗ್ರಹ ಜೀವಿಗಳೊಂದಿಗೆ ಸಂಪರ್ಕ ಹೊಂದುತ್ತಾರೆ, 2170ರಲ್ಲಿ ಭೂಮಿಯ ಬಹುತೇಕ ಭಾಗಗಳಲ್ಲಿ ಬರ ಉಂಟಾಗುತ್ತದೆ, 3005ರಲ್ಲಿ ಭೂಮಿಯು ಮಂಗಳದ ನಾಗರಿಕತೆಯೊಂದಿಗೆ ಯುದ್ಧದಲ್ಲಿ ತೊಡಗುತ್ತದೆ, 3797ರಲ್ಲಿ ವಾಸಯೋಗ್ಯವಲ್ಲದ ಕಾರಣ ಮಾನವರು ಭೂಮಿಯಿಂದ ಸ್ಥಳಾಂತರವಾಗುತ್ತಾರೆ ಮತ್ತು 5079 ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳುತ್ತದೆ ಎಂದು ಬಾಂಬಾ ವಂಗಾರ ಭವಿಷ್ಯದ ಭವಿಷ್ಯವಾಣಿಗಳಾಗಿವೆ.
ಅಂದಹಾಗೆ, ಈ ಭವಿಷ್ಯವಾಣಿಗಳು ಬಾಬಾ ವಂಗಾ ಅವರ ಅನುಯಾಯಿಗಳಿಂದ ವ್ಯಾಖ್ಯಾನಿಸಲ್ಪಟ್ಟಿವೆ ಹೊರತು ಅದಕ್ಕೆ ನಿಖರ ದಾಖಲೆಗಳು ಇಲ್ಲ. ಹೀಗಾಗಿ ಈ ಭವಿಷ್ಯವಾಣಿಗಳನ್ನು ಕೇವಲ ಮನರಂಜನೆಯಾಗಿ ಅಥವಾ ಚಿಂತನೆಗೆ ಒಳಪಡಿಸಿ ನೋಡಿ. ಯಾವುದೇ ಕಾರಣಕ್ಕೂ ವೈಜ್ಞಾನಿಕವಾಗಿ ನಂಬಬೇಡಿ, (ಏಜೆನ್ಸೀಸ್​).