- ಹಬ್ಬಿದ ಕಾಡ್ಗಿಚ್ಚನ್ನು ನಂದಿಸಲು ಮುಂದಾಗಿದ್ದ ಎರಡು ಅಗ್ನಿಶಾಮಕ ಹೆಲಿಕಾಪ್ಟರ್‌ಗಳು
- ನೋಡ ನೋಡುತ್ತಿದ್ದಂತೆ ಆಕಾಶದಲ್ಲೇ ಪುಡಿ ಪುಡಿ
- ಈ ದುರಂತದಲ್ಲಿ ಇಬ್ಬರು ಪೈಲಟ್‌ಗಳು ದಾರುಣ ಸಾವು
Greek Wildfire: ಗ್ರೀಕ್ನಲ್ಲಿ ವೇಗವಾಗಿ ಹಬ್ಬಿದ ಕಾಡ್ಗಿಚ್ಚನ್ನು ನಂದಿಸಲು ಮುಂದಾಗಿದ್ದ ಎರಡು ಅಗ್ನಿಶಾಮಕ ಹೆಲಿಕಾಪ್ಟರ್‌ಗಳು ನೋಡ ನೋಡುತ್ತಿದ್ದಂತೆ ಆಕಾಶದಲ್ಲೇ ಪುಡಿ ಪುಡಿಯಾದ ಘಟನೆ ನೋಡುಗರ ಮೈಜುಂ ಎನ್ನಿಸಿದೆ. ಈ ದುರಂತದಲ್ಲಿ ಇಬ್ಬರು ಪೈಲಟ್‌ಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಅಥೆನ್ಸ್‌ನ ಪಶ್ಚಿಮದಲ್ಲಿರುವ ಅಟಿಕಾ ಪ್ರದೇಶದ ಪ್ಸಾಥಾ ಬಳಿ ಭಾನುವಾರ ಈ ಭೀಕರ ಅಪಘಾತ ಸಂಭವಿಸಿದೆ. ಕಾಡಿಗೆ ಹಬ್ಬಿದ ಬೆಂಕಿಯ ಜ್ವಾಲೆಯನ್ನು ನಂದಿಸಲು ಆಗಸದಲ್ಲೇ ಸುತ್ತುತ್ತಿದ್ದ ಹೆಲಿಕಾಪ್ಟರ್‌ಗಳು ಸಾಗುವ ಪಥದಲ್ಲಿ ಮಿಸ್ ಆಗಿದ್ದನ್ನು ಗಮನಿಸದೆ, ಪರಸ್ಪರ ಡಿಕ್ಕಿ ಹೊಡೆದಿವೆ. ಡಿಕ್ಕಿಯಾದ ರಭಸಕ್ಕೆ ಒಂದು ಕಾಪ್ಟರ್ ಸ್ಫೋಟಗೊಂಡು ಭಸ್ಮವಾದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯುರೋಪ್ನಲ್ಲಿ ಹೆಚ್ಚುತ್ತಿರುವ ದಾಖಲೆಗೂ ಮೀರಿದ ಉಷ್ಣಾಂಶದ ಅಲೆ ಮತ್ತು ಬರಗಾಲದಿಂದ ಗ್ರೀಕ್ನಲ್ಲಿ ಕಾಡ್ಗಿಚ್ಚುಗಳು ವ್ಯಾಪಕವಾಗಿ ಹರಡುತ್ತಿವೆ. ನೂರಾರು ಅಗ್ನಿಶಾಮಕ ದಳ, ಹೆಲಿಕಾಪ್ಟರ್‌ಗಳು ಮತ್ತು ವಿಮಾನಗಳು ಬೆಂಕಿಯನ್ನು ನಂದಿಸಲು ಶ್ರಮಿಸುತ್ತಿವೆ. ಅಂತೆಯೇ, ಭಾನುವಾರ ಕೂಡ ಎರಡು ಹೆಲಿಕಾಪ್ಟರ್‌ಗಳು ಕಾಡ್ಗಿಚ್ಚು ಹಾರಿಸಲು ಮುಂದಾದ ವೇಳೆ ಡಿಕ್ಕಿ ಹೊಡೆದು ಭಾರಿ ಅಪಘಾತಕ್ಕೆ ಸಾಕ್ಷಿಯಾಗಿದೆ.
ಪ್ರತ್ಯಕ್ಷದರ್ಶಿಗಳು ಹೇಳಿದ ಪ್ರಕಾರ, ಅರಣ್ಯಕ್ಕೆ ಹೊತ್ತಿದ್ದ ಬೆಂಕಿಯನ್ನು ಹಾರಿಸಲು ನೀರು ಸಿಂಪಡಿಸಲು ಕಡಿಮೆ ಎತ್ತರದಲ್ಲಿ ಎರಡು ಬೆಲ್ ಹೆಲಿಕಾಪ್ಟರ್‌ಗಳು ಹಾರಾಡುತ್ತಿತ್ತು. ಮೇಲಿನ ಕಾಪ್ಟರ್ ಕೆಳಗಿನದ್ದಕ್ಕೆ ಡಿಕ್ಕಿ ಹೊಡೆದಾಗ ಈ ಅಪಘಾತ ಸಂಭವಿಸಿತು. ಒಂದು ಡಿಕ್ಕಿಯ ರಭಸಕ್ಕೆ ಸ್ಫೋಟಗೊಂಡು ಕೆಳಗೆ ಬಿದ್ದರೆ, ಮತ್ತೊಂದು ಡ್ಯಾಮೇಜ್ ಆದರೂ ಸುರಕ್ಷಿತವಾಗಿ ಇಳಿಯುವಲ್ಲಿ ಯಶಸ್ವಿಯಾಗಿದೆ ಎಂದಿದ್ದಾರೆ,(ಏಜೆನ್ಸೀಸ್).