Buildings Collapse  
ವಿದೇಶ

ಮೊರೊಕ್ಕಾದಲ್ಲಿ ಎರಡು ಕಟ್ಟಡಗಳು ಕುಸಿತ: 19 ಜನರ ಸಾವು, 16 ಮಂದಿಗೆ ಗಾಯ! | Buildings Collapse

ಮೊರೊಕ್ಕಾ:ಮೊರಾಕೊದ ಐತಿಹಾಸಿಕ ನಗರ ಫೆಸ್‌ನಲ್ಲಿ ನಾಲ್ಕು ಅಂತಸ್ತಿನ ಎರಡು ಕಟ್ಟಡಗಳು(Buildings Collapse) ಬುಧವಾರ ಕುಸಿದಿವೆ. ಪರಿಣಾಮ ಘಟನೆಯಲ್ಲಿ ಕನಿಷ್ಠ 19 ಜನರು ಮೃತಪಟ್ಟಿದ್ದು, 16 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆಯಲ್ಲಿ ಮಕ್ಕಳು ಸೇರಿದಂತೆ ಎಂಟು ಕುಟುಂಬಗಳ ಜನರು ಮೃತಪಟ್ಟಿದ್ದಾರೆ.ಕಟ್ಟಡಗಳಲ್ಲಿ ಕ್ರ್ಯಾಕ್‌ಗಳು ಕಾಣಿಸಿಕೊಂಡಿದ್ದವು. ಆದರೆ, ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲಾಗಿರಲಿಲ್ಲ. ಪರಿಣಾಮ ಕಟ್ಟಡಗಳು ಕುಸಿದಿವೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭವಾಗಿದೆ.
ಇನ್ನೂ ಕೆಲವರು ಅವಶೇಷಗಳಡಿಯಲ್ಲಿ ಸಿಕ್ಕಿಹಾಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ರಕ್ಷಣಾ ಕಾರ್ಯಗಳು ಮುಂದುವರಿದುತ್ತಿವೆ. ಎಂದು ದೇಶದ ಅಧಿಕೃತ ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ AFP ವರದಿ ಮಾಡಿದೆ.
ಫೆಸ್ ಮೊರಾಕೊದ ಮೂರನೇ ಅತಿ ದೊಡ್ಡ ನಗರವಾಗಿದ್ದು, ಇಲ್ಲಿ ಹಳೆಯ ಇನ್‌ಫ್ರಾಸ್ಟ್ರಕ್ಚರ್ ಮತ್ತು ಬಡತನ ಸಮಸ್ಯೆಗಳು ಸಾಮಾನ್ಯವಾಗಿದೆ. ಈ ವರ್ಷದಲ್ಲಿ ಇದು ಎರಡನೇ ಘಟನೆ ಇದೇ ವರ್ಷದ ಮೇ ತಿಂಗಳಲ್ಲಿ ಇನ್ನೊಂದು ಕಟ್ಟಡ ಕುಸಿತದಲ್ಲಿ 10 ಮಂದಿ ಸತ್ತಿದ್ದರು. 2024ರ ಫೆಬ್ರುವರಿಯಲ್ಲಿ ಕೂಡ ಫೆಸ್‌ನಲ್ಲಿ ಐದು ಮಂದಿ ಸತ್ತಿದ್ದರು,(ಏಜೆನ್ಸೀಸ್).