ಡೊನಾಲ್ಡ್ ಟ್ರಂಪ್ 
ವಿದೇಶ

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಮಾತುಕತೆ ನಡುವೆಯೂ ಹಾರ್ಮುಜ್ ಜಲಸಂಧಿ ಮುಚ್ಚಿದ್ರೆ ನೀವು ದೇಶಕ್ಕೆ ಹಿಂತಿರುಗುವುದಿಲ್ಲ: ಇರಾನ್​ಗೆ ಟ್ರಂಪ್ ವಾರ್ನಿಂಗ್​ | Trump warns

ವಾಷಿಂಗ್ಟನ್​: ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಅಮೆರಿಕ ಮತ್ತು ಇರಾನ್​ ನಡುವೆ ಶಾಂತಿ ಒಪ್ಪಂದ ಮಾತುಕತೆ ನಡೆಯುವ ವೇಳೆ ಇರಾನ್​ ನಿಯೋಗಕ್ಕೆ ಎಚ್ಚರಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump), ಹಾರ್ಮುಜ್ ಜಲಸಂಧಿ ಮುಚ್ಚಿದ್ರೆ ನೀವು ದೇಶಕ್ಕೆ ಹಿಂತಿರುಗುವುದಿಲ್ಲ, ಹೊಸದಾಗಿ ದಾಳಿ ಮಾಡಿ ಇಡೀ ಇರಾನ್​ ಅನ್ನೇ ನಾಶಪಡಿಸುವುದಾಗಿ ವಾಗ್ದಾಳಿ ನಡೆಸಿದ್ದಾರೆ.
ಲೆಬನಾನ್ ಮೇಲಿನ ಇಸ್ರೇಲಿ ದಾಳಿಗೆ ಪ್ರತಿಯಾಗಿ ಹಾರ್ಮುಜ್ ಜಲಸಂಧಿಯನ್ನು ಇರಾನ್ ಮತ್ತೆ ಮುಚ್ಚಿದ ಹಿನ್ನೆಲೆ ಟ್ರಂಪ್ ಈ ನೇರ ಬೆದರಿಕೆ ಹಾಕಿದ್ದಾರೆ. ಪ್ರಮುಖ ಹಡಗು ಮಾರ್ಗದ ಹಾರ್ಮುಜ್​ ಜಲಸಂಧಿ ದಿಗ್ಬಂಧನಕ್ಕೆ ಬಲವಾಗಿ ಪ್ರತಿಕ್ರಿಯಿಸುವುದಾಗಿ ಹೇಳಿದ್ದಾರೆ.
ಈ ಕುರಿತು ವರದಿ ಮಾಡಿರುವ ಫಾಕ್ಸ್ ನ್ಯೂಸ್, ನೀವು ಹಾರ್ಮುಜ್ ಜಲಸಂಧಿಯನ್ನು ಮತ್ತೆ ಮುಚ್ಚಿಬಿಟ್ಟರೆ ನಿಮಗೆ ಒಂದು ದೇಶವೇ ಇರುವುದಿಲ್ಲ. ನೀವು ನಿಮ್ಮ ದೇಶಕ್ಕೆ ಹಿಂತಿರುಗಲು ಸಹ ಸಾಧ್ಯವಿಲ್ಲ ಎಂದು ಇರಾನ್ ನಿಯೋಗಕ್ಕೆ ವಾರ್ನಿಂಗ್ ನೀಡಿದ್ದಾರೆ ಎಂದು ಹೇಳಿದೆ.
ಇನ್ನೂ ಶಾಂತಿ ಮಾತುಕತೆ ವಿಫಲವಾದ್ರೆ, ಇರಾನ್ ಒಪ್ಪದಿದ್ದರೆ, ನಾವು ಹಾರ್ಮುಜ್ ಜಲಸಂಧಿಯನ್ನು ನೇರವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ತೇವೆ. ಮತ್ತು 60 ದಿನಗಳ ಬಳಿಕ ಅಲ್ಲಿ ಟೋಲ್ ಸಂಗ್ರಹಿಸುತ್ತೇವೆ. ಅದರ ಮೂಲಕ ಸಾಗಿಸುವ ಹಡಗುಗಳಿಗೆ ಅವುಗಳ ತೈಲ ಸರಕುಗಳ ಮೌಲ್ಯದ ಶೇಕಡಾ 20 ರಷ್ಟು ಟೋಲ್ ವಿಧಿಸುತ್ತೇವೆ ಎಂದು ಹೇಳಿದ್ದಾರೆ.
ಪಶ್ಚಿಮ ಏಷ್ಯಾದಾದ್ಯಂತದ ದೇಶಗಳಿಗೆ ಅಮೆರಿಕದ ಮಿಲಿಟರಿ ರಕ್ಷಕ ದೇವತೆ ಎಂದಿರುವ ಟ್ರಂಪ್, ವಿಶ್ವದ ಪ್ರಮುಖ ಇಂಧನ ಮಾರ್ಗಗಳಲ್ಲಿ ಒಂದನ್ನು ರಕ್ಷಿಸಿದ್ದಕ್ಕಾಗಿ, ಹಡಗು ಮಾರ್ಗಗಳನ್ನು ರಕ್ಷಿಸಲು ಮತ್ತು ಈ ಪ್ರದೇಶದಲ್ಲಿ ಭದ್ರತೆಯನ್ನು ಕಾಪಾಡಿಕೊಳ್ಳಲು ಖರ್ಚು ಮಾಡಿದ ಶತಕೋಟಿ ಡಾಲರ್‌ಗಳಿಗೆ ಪ್ರತಿಯಾಗಿ ಅಮೆರಿಕ ಟೋಲ್​ ಸಂಗ್ರಹಿಸಬಹುದು ಎಂದಿದ್ದಾರೆ (ಏಜೆನ್ಸೀಸ್).