Donald Trump 
ವಿದೇಶ

ರಷ್ಯಾದೊಂದಿಗೆ ವ್ಯಾಪಾರ ನಡೆಸುವ ದೇಶಗಳಿಗೆ ಹೊಸ ಬೆದರಿಕೆ ಹಾಕಿದ ಡೊನಾಲ್ಡ್​ ಟ್ರಂಪ್ | Russia

ಪ್ರಮುಖ ಮುಖ್ಯಾಂಶಗಳು

  • ರಷ್ಯಾ ವಿರುದ್ಧ ಕೆಂಡಕಾರುತ್ತಿರುವ ಅಮೆರಿಕ ಅಧ್ಯಕ್ಷ ಟ್ರಂಪ್​​
  • ರಷ್ಯಾದೊಂದಿಗೆ( Russia) ವ್ಯಾಪಾರ ನಡೆಸುವ ದೇಶಗಳಿಗೆ ಹೊಸ ಬೆದರಿಕೆ
ನ್ಯೂರ್ಯಾರ್ಕ್​: ರಷ್ಯಾದೊಂದಿಗೆ( Russia) ವ್ಯಾಪಾರ ನಡೆಸುವ ದೇಶಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಗಂಭೀರ ಬೆದರಿಕೆ ಹಾಕಿದ್ದಾರೆ.
ಪಾಮ್​ ಬೀಚ್​ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಟ್ರಂಪ್​,ರಷ್ಯಾ ಜೊತೆಗೆ ಆರ್ಥಿಕ ಸಂಬಂಧಗಳನ್ನು ಮುಂದುವರಿಸುವ ಯಾವುದೇ ದೇಶದ ಮೇಲೆ ನಿರ್ಬಂಧಗಳನ್ನು ವಿಧಿಸುವ ಶಾಸನವನ್ನು ರಿಪಬ್ಲಿಕನ್ ಶಾಸಕರು ರಚಿಸುತ್ತಿದ್ದಾರೆ. ಅಲ್ಲದೆ,ರಷ್ಯಾದೊಂದಿಗೆ ವ್ಯಾಪಾರ ಮಾಡುವ ಯಾವುದೇ ದೇಶವು ಕಠಿಣ ದಂಡವನ್ನು ಎದುರಿಸಬೇಕಾಗುತ್ತದೆ ಎಂದೇಳುವ ಮೂಲಕ ಟ್ರಂಪ್ ಇದೀಗ ಹೊಸ ಬೆದರಿಕೆ ಹಾಕಿದ್ದಾರೆ.
ರಷ್ಯಾದ ತೈಲ ಕಂಪನಿಗಳಾದ ಲುಕೋಯಿಲ್ ಮತ್ತು ಸರ್ಕಾರಿ ಸ್ವಾಮ್ಯದ ರೋಸ್‌ನೆಫ್ಟ್ ಮೇಲೆ ಇತ್ತೀಚೆಗೆ ಕಠಿಣ ನಿರ್ಬಂಧಗಳನ್ನು ವಿಧಿಸಿದ ನಂತರ ಟ್ರಂಪ್ ಅವರ ಬೆದರಿಕೆ ಬಂದಿದೆ.
ಟ್ರಂಪ್ ಈಗ ಏಕೆ ಕೋಪಗೊಂಡಿದ್ದಾರೆ?
ರಷ್ಯಾದೊಂದಿಗೆ ವ್ಯವಹಾರ ನಡೆಸುವ ದೇಶಗಳ ವಿರುದ್ಧ ಡೊನಾಲ್ಡ್ ಟ್ರಂಪ್ ಈಗಾಗಲೇ ಕಠಿಣ ನಿಲುವನ್ನು ತೆಗೆದುಕೊಂಡಿದ್ದಾರೆ ಮತ್ತು ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸಲು ಮಾತುಕತೆ ನಡೆಸಲು ಕ್ರೆಮ್ಲಿನ್ ನಿರಾಕರಿಸಿದ ನಂತರ ಇತ್ತೀಚಿನ ಕ್ರಮ ಕೈಗೊಳ್ಳಲಾಗಿದೆ. ವರದಿಗಳ ಪ್ರಕಾರ, ಹೆಚ್ಚುತ್ತಿರುವ ಒತ್ತಡದ ಹೊರತಾಗಿಯೂ, ರಷ್ಯಾದ ಅಧ್ಯಕ್ಷ ಪುಟಿನ್​ ತಮ್ಮ ಗನ್​ಗೆ ಅಂಟಿಕೊಂಡಿದ್ದಾರೆ. ಹೀಗಾಗಿ, ಅವರ ವಿರುದ್ಧ ಎಷ್ಟು ಸಾಧ್ಯವೋ ಅಷ್ಟು ಕಠಿಣ ನಿಲುವುಗಳನ್ನು ತೆಳೆಯುತ್ತಿದ್ದಾರೆ ಎಂದು ವರದಿಯಾಗಿದೆ(ಏಜೆನ್ಸೀಸ್​).